Advertisements
ಕರ್ನಾಟಕ ಲೋಕ ಸೇವಾ ಆಯೋಗದ ಅಧಿಸೂಚನೆ ಸಂಖ್ಯೆ ಪಿಎಸ್ ಸಿ 1 ಆರ್ ಟಿಬಿ- 2/2020 ದಿನಾಂಕ 24-06-2020 ರಲ್ಲಿ ಅಧಿಸೂಚಿಸಿರುವ ಗ್ರೂಪ್ ‘ಸಿ’ ತಾಂತ್ರಿಕ/ ಗ್ರೂಪ್ ‘ಬಿ’ ತಾಂತ್ರಿಕ / ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯೋಗವು ದಿನಾಂಕ 30-07-2021, 31-07-2021 ಮತ್ತು 01-08-2021 ರಂದು ನಡೆಸುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ / ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಆಯೋಗದ ವೆಬ್‌ಸೈಟ್ http://kpsc.kar.nic.in ನಲ್ಲಿ ದಿನಾಂಕ 24-07-2021 ರಿಂದ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ತಾಂತ್ರಿಕ ಸಮಸ್ಯೆ ಎದುರಾದಲ್ಲಿ ಹೆಲ್ಪ್ ಲೈನ್ ಸಂಖ್ಯೆ 18005728707 ಅನ್ನು ಸಂಪರ್ಕಿಸಬಹುದು.