KPSC Jobs: ಕೆಪಿಎಸ್‌ಸಿಯ 486 ವಿವಿಧ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಉದ್ಯೋಗ ವಿವರ- ಕ್ವಿಕ್‌ ಲುಕ್

  • ಎಲ್ಲಿ ಉದ್ಯೋಗ?: KPSC
  • ಹುದ್ದೆಯ ಹೆಸರು: ಅಂತರ್ಜಲ ನಿರ್ದೇಶನಾಲಯ, ಪೌರಾಡಳಿತ ನಿರ್ದೇಶನಾಲಯ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ, ಜಲಸಂಪನ್ಮೂಲ ಇಲಾಖೆ
  • ಹುದ್ದೆಗಳ ಸಂಖ್ಯೆ: 486
  • ಅರ್ಜಿ ಸಲ್ಲಿಸುವುದು ಹೇಗೆ?: ಆನ್‌ಲೈನ್‌ ಮೂಲಕ
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: April 29, 2024
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: June 10, 2024
  • ವೆಬ್‌ ವಿಳಾಸ: https://kpsc.kar.nic.in/
Advertisements

KPSC Recruitment 2024: ಕರ್ನಾಟಕ ಲೋಕಸೇವಾ ಆಯೋಗವು ಈಗಾಗಲೇ ಜೂನಿಯರ್ ಇಂಜಿನಿಯರ್, ಇಂಡಸ್ಟ್ರಿಯಲ್ ಎಕ್ಸ್‌ಟೆನ್ಶನ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ಹುದ್ದೆಗೆ ಅರ್ಜಿ ಸಲ್ಲಿಸಲು 28-ಮೇ-2024 ಕೊನೆಯ ದಿನವೆಂದು ನಿಗದಿಪಡಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಣೆ ಮಾಡಿದ್ದು, ಅಭ್ಯರ್ಥಿಗಳು 10-06-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಹಾಕಲು ಸೂಚಿಸಲಾಗಿದೆ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 29-04-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-06-2024

KPSC ಇಲಾಖೆಗಳ ಆಧಾರದ ಮೇಲೆ ಹುದ್ದೆಯ ವಿವರಗಳು
ಅಂತರ್ಜಲ ನಿರ್ದೇಶನಾಲಯ 5 ಹುದ್ದೆ
ಪೌರಾಡಳಿತ ನಿರ್ದೇಶನಾಲಯ 84 ಹುದ್ದೆಗಳು
ಸಾರ್ವಜನಿಕ ಗ್ರಂಥಾಲಯ ಇಲಾಖೆ 34 ಹುದ್ದೆಗಳು
ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ 63 ಹುದ್ದೆಗಳು
ಜಲಸಂಪನ್ಮೂಲ ಇಲಾಖೆ 300 ಹುದ್ದೆಗಳು

ಪೋಸ್ಟ್‌ಗಳ ಆಧಾರದ ಮೇಲೆ ಕೆಪಿಎಸ್‌ಸಿ ಹುದ್ದೆಗಳು
ಜೂನಿಯರ್ ಇಂಜಿನಿಯರ್ (Junior Engineer) -341 ಹುದ್ದೆಗಳು
ನೀರು ಸರಬರಾಜುದಾರರು (Water Suppliers) – 4 ಹುದ್ದೆ
ಅಧೀನ ನೀರು ಸರಬರಾಜುದಾರರು( Subsidiary Water Suppliers)- 5 ಹುದ್ದೆ
ಕಿರಿಯ ಆರೋಗ್ಯ ನಿರೀಕ್ಷಕರು (Junior Health Inspectors)- 39 ಹುದ್ದೆಗಳು
ಸಹಾಯಕ ಗ್ರಂಥಪಾಲಕರು (Assistant Librarian)- 21 ಹುದ್ದೆಗಳು
ಕೈಗಾರಿಕಾ ವಿಸ್ತರಣಾ ಅಧಿಕಾರಿ (Industrial Extention Officer) – 63 ಹುದ್ದೆಗಳು
ಗ್ರಂಥಪಾಲಕ (Librarian)- 13 ಹುದ್ದೆಗಳು
ವಿದ್ಯಾರ್ಹತೆ:

ಜೂನಿಯರ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮಾ, ಇಂಜಿನಿಯರಿಂಗ್ ಪದವಿ ಪಾಸ್‌ ಮಾಡಿರಬೇಕು.
ನೀರು ಸರಬರಾಜುದಾರರು, ಸಹಾಯಕ ನೀರು ಸರಬರಾಜುದಾರರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC, ITI ತೇರ್ಗಡೆ ಹೊಂದಿರಬೇಕು.
ಕಿರಿಯ ಆರೋಗ್ಯ ನಿರೀಕ್ಷಕರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC, PUC, ಡಿಪ್ಲೊಮಾ ಮಾಡಿರಬೇಕು.
ಸಹಾಯಕ ಗ್ರಂಥಪಾಲಕರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ]ಡಿಪ್ಲೋಮಾ ಇನ್‌ ಲೈಬ್ರರಿ ಸೈನ್ಸ್‌ ಮಾಡಿರಬೇಕು.
ಕೈಗಾರಿಕಾ ವಿಸ್ತರಣಾ ಅಧಿಕಾರಿ ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ವಿಜ್ಞಾನ ಅಥವಾ ವಾಣಿಜ್ಯ ಅಥವಾ ವ್ಯವಹಾರ ಆಡಳಿತದಲ್ಲಿ ಪದವಿ, ಎಂಜಿನಿಯರಿಂಗ್ ಪದವಿ ಪಡೆದಿರಬೇಕು.
ಗ್ರಂಥಪಾಲಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಡಿಗ್ರಿ ಇನ್‌ ಲೈಬ್ರರಿ ಸೈನ್ಸ್‌ ನಲ್ಲಿ ಪದವಿ ಪಡೆದಿರಬೇಕು.
ವಯೋಮಿತಿ: ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. SC/ST/Cat-1 ಅಭ್ಯರ್ಥಿಗಳಿಗೆ 05 ವರ್ಷ, CAT-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 03 ವರ್ಷ, PWD/ವಿಧವೆ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ: SC/ST/Cat-I/PWD ಅಭ್ಯರ್ಥಿಗಳು ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಮಾಜಿ ಸೈನಿಕ ಅಭ್ಯರ್ಥಿಗಳು ರೂ.50/-, Cat-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ ರೂ.300/-, ಸಾಮಾನ್ಯ ಅಭ್ಯರ್ಥಿಗಳಿಗೆ ರೂ.600/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕು.

ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕನ್ನಡ ಭಾಷಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುವುದು.

ವೇತನ ವಿವರ: ಜೂನಿಯರ್ ಇಂಜಿನಿಯರ್ ರೂ.33450-62600/-, ನೀರು ಸರಬರಾಜುದಾರರು ರೂ.27650-52650/-, ಸಹಾಯಕ ನೀರು ಸರಬರಾಜುದಾರರು ರೂ.21400-42000/-, ಕಿರಿಯ ಆರೋಗ್ಯ ನಿರೀಕ್ಷಕರು ರೂ.23500-47650/-, ಸಹಾಯಕ ಗ್ರಂಥಪಾಲಕ ರೂ.30350-58250/-, ಕೈಗಾರಿಕಾ ವಿಸ್ತರಣಾಧಿಕಾರಿ ರೂ.33450-62600/-, ಗ್ರಂಥಪಾಲಕ ರೂ.37900-70850/ ಮಾಸಿಕ ವೇತನ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಮಾಡಿದ ನೋಟಿಫಿಕೇಶನ್‌ ಗಾಗಿ ಇಲ್ಲಿ ಕ್ಲಿಕ್‌ ಮಾಡಿ