KOF : ವಿವಿಧ ಹುದ್ದೆ: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಆದ್ಯತೆ

Advertisements

ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟ ನಿ.(ಕೆಒಎಫ್) ಹುಬ್ಬಳ್ಳಿ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆ, ವಿದ್ಯಾರ್ಹತೆ, ಇತ್ಯಾದಿಗಳ ಬಗ್ಗೆ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08-05-2021 ಸಂಜೆ 5.30 ರೊಳಗಾಗಿ

ಹುದ್ದೆ : ಸಾಮಾನ್ಯ ಕೆಲಸಗಾರ – 04
ಚಾಲಕ – 01
ಸಹಾಯಕ ಮಾರಾಟಾಧಿಕಾರಿ – ೦4
ಸಹಾಯಕ ಲೆಕ್ಕಾಧಿಕಾರಿ – ೦3
ಸಹಾಯಕ ಆಡಳಿತಾಧಿಕಾರಿ – ೦1
ಕ್ಷೇತ್ರಾಧಿಕಾರಿ – ೦2

ವಿದ್ಯಾರ್ಹತೆ : ಸಾಮಾನ್ಯ ಕೆಲಸಗಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು.
ಚಾಲಕ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು ಹಾಗೂ ಲಘು ಮತ್ತು ಭಾರಿ ವಾಹನ ಚಾಲನೆ ಪರವಾನಿಗೆ ಹೊಂದಿರತಕ್ಕದ್ದು.
ಸಹಾಯಕ ಮಾರಾಟಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಹಾಗೂ ಎಂಬಿಎ ಮಾರುಕಟ್ಟೆ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಬಿ.ಕಾಂ, ಪದವಿ ಜೊತೆಗೆ ಟ್ಯಾಲಿ ಅಕೌಂಟಿಂಗ್ ಹಾಗೂ ಕಂಪ್ಯೂಟರ್ ಜ್ಞಾನ ಅವಶ್ಯಕ.
ಸಹಾಯಕ ಆಡಳಿತಾಧಿಕಾರಿ ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಹಾಗೂ ಕಾನೂನು ಪದವಿ ಪಡೆದವರಿಗೆ ಆಧ್ಯತೆ ನೀಡಲಾಗುವುದು.
ಕ್ಷೇತ್ರಾಧಿಕಾರಿ ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಕೃಷಿ ಪದವಿ ಹೊಂದಿರಬೇಕು.

ವೇತನ : ಸಾಮಾನ್ಯ ಕೆಲಸಗಾರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.17,000/- ರಿಂದ ರೂ.28,950/- ವೇತನ ಇರುತ್ತದೆ.
ಚಾಲಕ ಹುದ್ದೆಗೆ ರೂ.17,000/- ರಿಂದ ರೂ.28,950/- ಮಾಸಿಕ ವೇತನ ನಿಗದಿಯಾಗಿರುತ್ತದೆ.
ಸಹಾಯಕ ಮಾರಾಟಾಧಿಕಾರಿ ಹುದ್ದೆಗೆ ಆಯ್ಕೆಯಾದವರಿಗೆ ತಿಂಗಳ ರೂ.27,650/- ರಿಂದ ರೂ.52,650/- ವೇತನವಿರುತ್ತದೆ
ಸಹಾಯಕ ಲೆಕ್ಕಾಧಿಕಾರಿ ಹುದ್ದೆಗೆ ರೂ.27,650/- ರಿಂದ ರೂ.52,650/- ಮಾಸಿಕ ವೇತನ
ಸಹಾಯಕ ಆಡಳಿತಾಧಿಕಾರಿ ಹುದ್ದೆಗೆ ರೂ.27,650/- ರಿಂದ ರೂ.52,650/- ಮಾಸಿಕ ವೇತನ ಹಾಗೂ
ಕ್ಷೇತ್ರಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ತಿಂಗಳ ರೂ.37,900/-ರಿಂದ ರೂ.70,850/- ಮಾಸಿಕ ವೇತನ ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Leave a Comment