KOF : ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ನಿಯಮಿತ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ : ಜನರಲ್ ಮ್ಯಾನೇಜರ್ – 01 ಹುದ್ದೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವಯೋಮಿತಿ : ಅಭ್ಯರ್ಥಿಗಳಿಗೆ ಕನಿಷ್ಠ 32 ಹಾಗೂ ಗರಿಷ್ಠ 50 ವರ್ಷ ಮೀರಿರಬಾರದು.

ವೇತನ : ರೂ.1,04,600/- ರಿಂದ ರೂ.1,50,800/- ಅನ್ವಯಿಸುವ ಭತ್ಯೆಗಳು.

ವಿದ್ಯಾರ್ಹತೆ ಮತ್ತು ಅನುಭವ : ಅಂಗೀಕೃತ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ ಎಂ.ಎಸ್ಸಿ, ಕೃಷಿ ( ಕೃಷಿ ಮಾರಾಟ /ಬೀಜ ತಂತ್ರಜ್ಞಾನ / ಅಗ್ರೋನಮಿ/ ಅಗ್ರಿಕಲ್ಚರ್ ಎಕ್ಸ್ ಟೆನ್ಷನ್ವ/ ಅಗ್ರಿಕಲ್ಚರಲ್ ಎಕಾನಮಿಕ್ಸ್/ ಸಾಯಿಲದ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ / ಇನ್ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ಮೆಂಟ್, ಆನಂದ್, ಗುಜರಾತ್/ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಅಡ್ಮಿನಿಸ್ಟ್ರೇಶನ್ / ಫೈನಾನ್ಸ್ / ಮಾರ್ಕೆಟಿಂಗ್/ಬ್ಯುಸಿನೆಸ್ ಮ್ಯಾನೇಜ್ಮೆಂಟ್ / ಕೃಷಿ ವಿಷಯದಲ್ಲಿ ಎಂ.ಬಿ.ಎ ಸ್ನಾತಕೋತ್ತರ ಪದವಿ.

ಕಂಪ್ಯೂಟರ್ ಪೂರ್ಣ ಪರಿಜ್ಞಾನ ಹೊಂದಿರತಕ್ಕದ್ದು.

ಅನುಭವ : ಪ್ರತಿಷ್ಟಿತ ಸಂಸ್ಥೆಗಳಲ್ಲಿ ಹಿರಿಯ ಹುದ್ದೆಗಳಲ್ಲಿ ಅಂದರೆ – ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ / ಡೆಪ್ಯುಟಿ ಜನರಲ್ ಮ್ಯಾನೇಜರ್ / ಜನರಲ್ ಮ್ಯಾನೇಜರ್ ಅಥವಾ ಈ ಹುದ್ದೆಗಳ ಸಮಾನಂತರ ಹುದ್ದೆಗಳಲ್ಲಿ ಕನಿಷ್ಠ 5 ವರ್ಷಗಳ ಕೆಲಸಸ ಅನುಭವ ಹೊಂದಿರತಕ್ಕದ್ದು.

ಆಯ್ಕೆ ವಿಧಾನ : ಅಭ್ಯರ್ಥಿಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆ, ಕೆಲಸದ ಅನುಭವ, ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಿ, ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ -1 ಇವರಿಗೆ ರೂ.500/- ಮತ್ತು ಸಾಮಾನ್ಯ ವರ್ಗದವರಿಗೆ ರೂ.1000/- ಅರ್ಜಿ ಶುಲ್ಕವನ್ನು ಕೆ.ಸಿ.ಓ.ಜಿ.ಎಫ್.ಲಿ., ಬೆಂಗಳೂರು ಇವರ ಹೆಸರಿಗೆ ಬೆಂಗಳೂರಿನಲ್ಲಿ ಪಾವತಿಯಾಗುವಂತೆ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕಿನ ಡಿ.ಡಿ.ಯ ಮೂಲಕ‌‌ ಸಲ್ಲಿಸುವುದು.

ಸಾಮಾನ್ಯ ನಿಬಂಧನೆಗಳು : ಕನ್ನಡ ಭಾಷಾ ಜ್ಞಾನ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ವಿದ್ಯಾರ್ಹತೆ, ಅನುಭವ, ವಯಸ್ಸು, ಹಾಗೂ ಮೀಸಲಾತಿಗೆ ಸಂಬಂಧಿಸಿದಂತೆ ‌ಪ್ರತಿಗಳನ್ನು ಲಗತ್ತಿಸತಕ್ಕದ್ದು. ಮುಕ್ತ ವಿಶ್ವವಿದ್ಯಾನಿಲಯದಿಂದ ( Distance education correspondence course) ಪಡೆದ ಪದವಿ, ಸ್ನಾತಕೋತ್ತರ ‌ಪದವಿಗಳನ್ನು ಪರಿಗಣಿಸಲಾಗುವುದಿಲ್ಲ. ಆಯ್ಕೆಯಾದ ಅಭ್ಯರ್ಥಿಯನ್ನು ಕರ್ನಾಟಕ ರಾಜ್ಯ ಅಥವಾ ರಾಜ್ಯದ ಹೊರಗು ನೇಮಕಾತಿ ಮತ್ತು ವರ್ಗಾವಣೆ ಮಾಡಲು ಅವಕಾಶವಿರುತ್ತದೆ. ಸೇವೆಯಲ್ಲಿರತಕ್ಕ ಅಭ್ಯರ್ಥಿಗಳು, ಸಂಬಂಧಪಟ್ಟ ಇಲಾಖೆಯ ಮೂಲಕ ಅವಕಾಶವಿರುತ್ತದೆ. ಸೇವೆಯಲ್ಲಿರತಕ್ಕ ಅಭ್ಯರ್ಥಿಗಳು, ಸಂಬಂಧಪಟ್ಟ ಇಲಾಖೆಯ‌ ಮೂಲಕ ಅರ್ಜಿಗಳನ್ನು ಸಲ್ಲಿಸತಕ್ಕದ್ದು. ಸ್ವ ವಿವರ ಹಾಗೂ ಭಾವಚಿತ್ರದೊಂದಿಗೆ ಎಲ್ಲಾ ದಾಖಲಾತಿಗಳನ್ನು‌ ಒಳಗೊಂಡ ಅರ್ಜಿಯನ್ನು ವ್ಯವಸ್ಥಾಪಕ ನಿರ್ದೇಶಕರು, ಕೆ.ಸಿ.ಓ.ಜಿ.ಎಫ್.ಲಿ. ನಂ.11, 4 ನೇ ಮಹಡಿ, ಬ್ಲ್ಯೂ ಕ್ರಾಸ್ ಛೇಂಬರ್ಸ್, ಇನ್ ಫೆಂಟ್ರಿ ಅಡ್ಡರಸ್ತೆ, ಬೆಂಗಳೂರು – 01 ಈ ವಿಳಾಸಕ್ಕೆ ನೇಮಕಾತಿ ಪ್ರಕಟಿತ ದಿನಾಂಕದಿಂದ 21 ದಿನದೊಳಗೆ ‌ತಲುಪುವಂತಿರಬೇಕು. ಅಪೂರ್ಣ / ಶುಲ್ಕವಿಲ್ಲದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

KOF : ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ 1

Leave a Comment