ಜಿಲ್ಲಾಧಿಕಾರಿಗಳ ಕಾರ್ಯಾಲಯ ಕೊಡಗು: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Advertisements

ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಲು ವಿವಿಧ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ 6 ತಿಂಗಳವರೆಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ ಯಾವುದು ಮೊದಲೇ ಅಲ್ಲಿಯವರೆಗೆ ನೇಮಕಾತಿಯನ್ನು ಮಾಡಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನೇರ ಸಂದರ್ಶನಕ್ಕೆ ಅಗತ್ಯ ಅನುಭವದ ಮೂಲ‌ ದಾಖಲಾತಿಗಳು ಮತ್ತು ಎರಡು ನಕಲು ಪ್ರತಿ, ಭಾವಚಿತ್ರ (3) ಗಳೊಂದಿಗೆ ಹಾಜರಾಗಲು ಪ್ರಕಟಣೆ ಹೊರಡಿಸಿದೆ.
ಫಿಸಿಶಿಯನ್- 6 ಪುಲನ್ಮೋನೊಲೊಜಿಸ್ಟ್-3 ಕಾರ್ಡಿಯೋಲಜಿಸ್ಟ್-1 ನೆಪೊಲಾಜಿಸ್ಟಿಸ್-1 ಅನಸ್ತೇಶಿಯಲಜಿಸ್ಟ್-10 ಬಯೊಮೆಡಿಕಲ್ ಇಂಜಿನಿಯರ್-1, ನರ್ಸಿಂಗ್ ಆಫೀಸರ್-100, ಫಾರ್ಮಾಸಿಸ್ಟ್-4, ಜ್ಯೂನಿಯರ್/ಸೀನಿಯರ್ ಲ್ಯಾಬ್ ಟೆಕ್ನಿಶಿಯನ್-12 ಎಮರ್ಜೆನ್ಸಿ ಮೆಡಿಸಿನ್/ ಇಂಟೆನ್ಸಿವಿಸ್ಟ್-4, ರೆಸ್ಪಿರೇಟರಿ ಕೇರ್ ಟೆಕ್ನಿಶಿಯನ್-4, ವೆಂಟಿಲೇರ್ ಟೆಕ್ನಿಶಿಯನ್-4 ಐಸಿಯು ಟೆಕ್ನಿಶಿಯನ್/ಒಟಿ ಟೆಕ್ನಿಶಿಯನ್-8, ಒಕ್ಸಿಜನ್ ಪ್ಲಾಂಟ್ ಮತ್ತು ಇತರೆ ಮೆಡಿಕಲ್ ಇಕ್ಯುಪ್ಮೆಂಟ್ಸ್-4, ಸ್ವಾಬ್ ಕಲೆಕ್ಟರ್ಸ್-6, ಪಿಸಿಯೋಥೆರಪಿಸ್ಟಿಸ್-3, ಡಯಾಲಿಸಿಸ್ ಟೆಕ್ನಿಶಿಯನ್-3, ಇಕೋ ಟೆಕ್ನಿಶಿಯನ್-2, ಡಾಟಾ ಎಂಟ್ರಿ ಒಪರೇಟರ್ -8
ಸದರಿ ಹುದ್ದೆಯು ಖಾಯಂ‌ ನೌಕರಿ ಅಲ್ಲ.

ಸಂದರ್ಶನದ ಸ್ಥಳ : ಕೊಡಗು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ, ಮಡಿಕೇರಿ. ಸಮಯ ದಿ.10-05-2021ರಿಂದ 15-05-2021 ರವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 01 ಗಂಟೆಯವರೆಗೆ (ರಜಾ ದಿನ ಹೊರತು ಪಡಿಸಿ)
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08272-298220 ಕಛೇರಿ ಕರ್ತವ್ಯದ ಅವಧಿಯಲ್ಲಿ ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave a Comment