ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ ಕಿತ್ತೂರು ಬೆಳಗಾವಿ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.
ಹುದ್ದೆ : ಪಿ.ಜಿ.ಟಿ ( ಇಂಗ್ಲೀಷ್ ): ಬಿ.ಎಡ್ ನೊಂದಿಗೆ ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ, ಯಾವುದೇ ಸಿ.ಬಿ.ಎಸ್.ಇ ಶಾಲೆಯಲ್ಲಿ IX ರಿಂದ XII ನೇ ತರಗತಿಗಳನ್ನು ಕಲಿಸಿದ ಅನುಭವ, ಪರಿಣಾಮಕಾರಿ ಬೋಧನಾ ವಿಧಾನದೊಂದಿಗೆ ಸಂಪೂರ್ಣ ವಿಷಯ ಜ್ಞಾನ ಮತ್ತು ಬೋಧನಾ ಸಾಮರ್ಥ್ಯ ಹೊಂದಿರಬೇಕು.
ಮೆಸ್‌ಮ್ಯಾನೇಜರ್ : ಹೋಮ್ ಸೈನ್ಸ್ ನಲ್ಲಿ ಪದವಿ/ ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಕ್ಯಾಟರಿಂಗ್ ತಂತ್ರಜ್ಞಾನದಲ್ಲಿ ಡಿಪ್ಲೋಮಾ, ವಸತಿ ಶಾಲೆಯಲ್ಲಿ ಮೆಸ್ ನಿರ್ವಹಣೆಯ ಅನುಭವಕ್ಕೆ ಆದ್ಯತೆ ನೀಡಲಾಗುವುದು. ನಿವೃತ್ತ ರಕ್ಷಣಾ ಜೇ.ಸಿ.ಓ/ ಎನ್.ಸಿ.ಓ ( ಎ.ಎಸ್.ಸಿ/ ವಾಯುಸೇನೆಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ದ್ವಿತೀಯ ದರ್ಜೆ ಗುಮಾಸ್ತ : ಕನಿಷ್ಠ ಐದು ವರ್ಷಗಳ ಅನುಭವ ವಿದ್ಯಾರ್ಹತೆ. ಬಿ.ಕಾಂ, ಟ್ಯಾಲಿಯನ್ನು ನಿರ್ವಹಿಸುವ ಉತ್ತಮ ಜ್ಞಾನ ( ಆವೃತ್ತಿ9.0) ಇ ಆರ್ ಪಿ, ಇಂಗ್ಲೀಷ್ ಮತ್ತು ಡಿಪ್ಲೋಮಾದೊಂದಿಗೆ ಕನ್ನಡ ಟೈಪಿಂಗ್ ಅಗತ್ಯ.
ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಸಂಬಳವನ್ನು ನಿಗದಿ ಪಡಿಸಲಾಗುತ್ತದೆ.
ಆಹಾರ ಮತ್ತು ವಸತಿ ಸೌಕರ್ಯಗಳ ಲಭ್ಯತೆ ಉಂಟು.
ಇತ್ತೀಚಿನ ಭಾವಚಿತ್ರದೊಂದಿಗೆ ಅಗತ್ಯ ದಾಖಲೆಗಳನ್ನು ಪ್ರಾಚಾರ್ಯರು ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆ, ಕಿತ್ತೂರು – 591115. ಜಿಲ್ಲೆ : ಬೆಳಗಾವಿ, ಇಲ್ಲಿಗೆ ಕಳುಹಿಸಿ : ಕೊನೆಯ ದಿನಾಂಕ : 05-08-2021