KHPT Jobs: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ರಾಜ್ಯ ಸರಕಾರ

Advertisements

KHPT Recruitment 2024: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (KHPT) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಮಾಹಿತಿಯನ್ನು ಆಧರಿಸಿ ಅರ್ಜಿ ಸಲ್ಲಿಸಬಹುದು. ಒಟ್ಟು 9 ಹುದ್ದೆಗಳು ಖಾಲಿ ಇದ್ದು, ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು – ಕರ್ನಾಟಕ, ಬೆಳಗಾವಿ-ಕರ್ನಾಟಕ, ಹಾವೇರಿ-ಕರ್ನಾಟಕ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ಮೇಲ್ಕಂಡ ಹುದ್ದೆಯ ಕುರಿತು ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಆನ್‌ಲೈನ್‌ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

ಪ್ರಮುಖ ದಿನಾಂಕಗಳು:
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 06-05-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-05-2024
ನರ್ಸ್‌ ಮೆಂಟರ್ಸ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 09-05-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-05-2024

ಹುದ್ದೆಯ ವಿವರ ಇಲ್ಲಿದೆ:
ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (KHPT) ಇಲ್ಲಿ ಕ್ವಾಲಿಟೇಟಿವ್‌ ರಿಸರ್ಚ್‌ ಅಸೋಸಿಯೇಟ್‌, ತಾಂತ್ರಿಕ ಬೆಂಬಲ ಸಂಯೋಜಕರು, ನರ್ಸ್ ಮೆಂಟರ್ಸ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ ಸಂಖ್ಯೆ: ಕ್ವಾಲಿಟೇಟಿವ್‌ ರಿಸರ್ಚ್‌ ಅಸೋಸಿಯೇಟ್‌- 1 ಹುದ್ದೆ
ತಾಂತ್ರಿಕ ಬೆಂಬಲ ಸಂಯೋಜಕರು- 1 ಹುದ್ದೆ
ನರ್ಸ್ ಮೆಂಟರ್ಸ್ – 7 ಹುದ್ದೆಗಳು

ವೇತನ: KHPT ಮಾನದಂಡಗಳ ಪ್ರಕಾರ ಮೇಲ್ಕಂಡ ಹುದ್ದೆಗಳಿಗೆ ವೇತನ ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ: ಕ್ವಾಲಿಟೇಟಿವ್‌ ರಿಸರ್ಚ್‌ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ M.Phil, Ph.D ಅನ್ನು ಮಾಡಿರಬೇಕು.
ಅಭ್ಯರ್ಥಿಗಳು ಸಮಾಜಶಾಸ್ತ್ರ, ಮಾನವಶಾಸ್ತ್ರ, ಸಾರ್ವಜನಿಕ ಆರೋಗ್ಯ, ಅಥವಾ ಯಾವುದೇ ಸಂಬಂಧಿತ ಸಾಮಾಜಿಕ ವಿಜ್ಞಾನಗಳಲ್ಲಿ 1-2 ವರ್ಷಗಳ ಅನುಭವವನ್ನು ಹೊಂದಿರಬೇಕು.
ತಾಂತ್ರಿಕ ಬೆಂಬಲ ಸಂಯೋಜಕರು ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ ತೇರ್ಗಡೆ ಹೊಂದಿರಬೇಕು.
ನರ್ಸ್‌ ಮೆಂಟರ್ಸ್‌ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, B.Sc ಪೂರ್ಣಗೊಳಿಸಿರಬೇಕು.

ವಯೋಮಿತಿ: KHPT ಮಾನದಂಡಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು. ವಯೋಮಿತಿ ಸಡಿಲಿಕೆಯನ್ನು ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್‌ ನಿಯಮ ಪ್ರಕಾರ ನೀಡಲಾಗಿದೆ.

ಅರ್ಜಿ ಶುಲ್ಕ: ಮೇಲ್ಕಂಡ ಹುದ್ದೆಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಆಯ್ಕೆ ಪ್ರಕ್ರಿಯೆ: ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.