ಶಿಕ್ಷಕರ ನೇಮಕಾತಿ : ನೇರ ಸಂದರ್ಶನಕ್ಕೆ ಆಹ್ವಾನ

Written By Mallika

Lorem ipsum dolor sit amet consectetur pulvinar ligula augue quis venenatis. 

Advertisements

ಕೇಂದ್ರೀಯ ವಿದ್ಯಾಲಯ ಎಂಇಜಿ ಮತ್ತು ಕೇಂದ್ರದಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಶಿಕ್ಷಕರ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ‌ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಈ ಹುದ್ದೆಗಳನ್ನು 2021-22 ಶೈಕ್ಷಣಿಕ ಸಾಲಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅಲ್ಲದೇ ಈ ಹುದ್ದೆಗಳು ಸಂಪೂರ್ಣ ಗುತ್ತಿಗೆ ಆಧಾರದ ತಾತ್ಕಾಲಿಕ ಹುದ್ದೆ ಯಾಗಿರುತ್ತದೆ.

ಹುದ್ದೆಯ ಹೆಸರು: ಪಿಜಿಟಿ ಸಿಎಸ್ /ಇತರೆ ವಿಷಯ–ಪಿಆರ್ ಟಿ/ಜರ್ಮನ್ ಟೀಚರ್, ನರ್ಸ್, ಕಂಪ್ಯೂಟರ್ ಇನ್ಸ್ಟ್ರಕ್ಟರ್/ಪ್ರಾದೇಶಿಕ ಭಾಷೆ (ಕನ್ನಡ) , ಡಾಟಾ ಎಂಟ್ರಿ ಅಪರೇಟರ್ ದಿನಾಂಕ 04-03-2021 ರಂದು ಸಂದರ್ಶನ

ಕೋಚ್ ಗಳು : ವಾಲಿಬಾಲ್, ಕಬಡ್ಡಿ, ಖೋ ಖೋ, ಹ್ಯಾಂಡ್ ಬಾಲ್, ಕಬಡ್ಡಿ, ಫೂಟ್ಬಾಲ್, ಯೋಗ – ದಿನಾಂಕ 04-03-2021

ಪೋಸ್ಟ್ ಗ್ರಾಜ್ಯುಯೇಟ್ ಟೀಚರ್ಸ್: ಇಂಗ್ಲೀಷ್, ಹಿಂದಿ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ,ಜೀವಶಾಸ್ತ್ರ, ಇತಿಹಾಸ, ಭೂಗೋಳ ಶಾಸ್ತ್ರ, ಅರ್ಥಶಾಸ್ತ್ರ, ಪೊಲಿಟಿಕಲ್ ಸೈನ್ಸ್, ಅಕೌಂಟೆನ್ಸಿ, ವಾಣಿಜ್ಯ ಶಾಸ್ತ್ರ, ಕಂಪ್ಯೂಟರ್ ಸೈನ್ಸ್ – ದಿನಾಂಕ 06-03-2021

ಟಿಜಿಟಿ ಮತ್ತು ಪ್ರೈಮರಿ ಟೀಚರ್ – ಇಂಗ್ಲೀಷ್, ಹಿಂದಿ, ಸಂಸ್ಕೃತ, ಸೈನ್ಸ್, ವಿಜ್ಞಾನ, ಗಣಿತ, ಸಮಾಜಶಾಸ್ತ್ರ ದಿನಾಂಕ 06-03-2021

ಮಾರ್ಚ್ 4ರಿಂದ6 ರವರೆಗೆ ನೇರ ಸಂದರ್ಶನವಿರುತ್ತದೆ. ಸಮಯ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಿಗದಿಯಾಗಿದೆ.

ಪ್ರತೀ ಹುದ್ದೆಗೆ ವಿದ್ಯಾರ್ಹತೆ ಜೊತೆಗೆ ಕಾರ್ಯಾನುಭವ ಹೊಂದಿರಬೇಕು.

ನೇರ ಸಂದರ್ಶನಕ್ಕೆ ಶೈಕ್ಷಣಿಕ ದಾಖಲೆಗಳ ಒಂದು ಸೆಟ್ ಜೆರಾಕ್ಸ್ ಕಾಪಿಗಳೊಂದಿಗೆ, ಒರಿಜಿನಲ್ ದಾಖಲೆ, ಫೊಟೋಗಳೊಂದಿಗೆ ಹಾಜರಾಗಬಹುದು. ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಟಿ.ಎ/ಡಿ.ಎ ನೀಡಲಾಗುತ್ತದೆ.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೇಂದ್ರೀಯ ವಿದ್ಯಾಲಯ ದ ಅಫೀಶಿಯಲ್ ವೆಬ್‌ಸೈಟ್‌ megcentre.kvs.ac.in ಗೆ ಭೇಟಿ ನೀಡಬಹುದು. ಅಥವಾ ದೂರವಾಣಿ ಸಂಖ್ಯೆ 080-25365053 ಗೆ ಕರೆ ಮಾಡಬಹುದು

Leave a Comment