ಕೇಂದ್ರೀಯ ವಿದ್ಯಾಲಯ ಎಂಇಜಿ ಮತ್ತು ಕೇಂದ್ರದಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಶಿಕ್ಷಕರ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಈ ಹುದ್ದೆಗಳನ್ನು 2021-22 ಶೈಕ್ಷಣಿಕ ಸಾಲಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅಲ್ಲದೇ ಈ ಹುದ್ದೆಗಳು ಸಂಪೂರ್ಣ ಗುತ್ತಿಗೆ ಆಧಾರದ ತಾತ್ಕಾಲಿಕ ಹುದ್ದೆ ಯಾಗಿರುತ್ತದೆ.
ಹುದ್ದೆಯ ಹೆಸರು: ಪಿಜಿಟಿ ಸಿಎಸ್ /ಇತರೆ ವಿಷಯ–ಪಿಆರ್ ಟಿ/ಜರ್ಮನ್ ಟೀಚರ್, ನರ್ಸ್, ಕಂಪ್ಯೂಟರ್ ಇನ್ಸ್ಟ್ರಕ್ಟರ್/ಪ್ರಾದೇಶಿಕ ಭಾಷೆ (ಕನ್ನಡ) , ಡಾಟಾ ಎಂಟ್ರಿ ಅಪರೇಟರ್ ದಿನಾಂಕ 04-03-2021 ರಂದು ಸಂದರ್ಶನ
ಕೋಚ್ ಗಳು : ವಾಲಿಬಾಲ್, ಕಬಡ್ಡಿ, ಖೋ ಖೋ, ಹ್ಯಾಂಡ್ ಬಾಲ್, ಕಬಡ್ಡಿ, ಫೂಟ್ಬಾಲ್, ಯೋಗ – ದಿನಾಂಕ 04-03-2021
ಪೋಸ್ಟ್ ಗ್ರಾಜ್ಯುಯೇಟ್ ಟೀಚರ್ಸ್: ಇಂಗ್ಲೀಷ್, ಹಿಂದಿ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ,ಜೀವಶಾಸ್ತ್ರ, ಇತಿಹಾಸ, ಭೂಗೋಳ ಶಾಸ್ತ್ರ, ಅರ್ಥಶಾಸ್ತ್ರ, ಪೊಲಿಟಿಕಲ್ ಸೈನ್ಸ್, ಅಕೌಂಟೆನ್ಸಿ, ವಾಣಿಜ್ಯ ಶಾಸ್ತ್ರ, ಕಂಪ್ಯೂಟರ್ ಸೈನ್ಸ್ – ದಿನಾಂಕ 06-03-2021
ಟಿಜಿಟಿ ಮತ್ತು ಪ್ರೈಮರಿ ಟೀಚರ್ – ಇಂಗ್ಲೀಷ್, ಹಿಂದಿ, ಸಂಸ್ಕೃತ, ಸೈನ್ಸ್, ವಿಜ್ಞಾನ, ಗಣಿತ, ಸಮಾಜಶಾಸ್ತ್ರ ದಿನಾಂಕ 06-03-2021
ಮಾರ್ಚ್ 4ರಿಂದ6 ರವರೆಗೆ ನೇರ ಸಂದರ್ಶನವಿರುತ್ತದೆ. ಸಮಯ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಿಗದಿಯಾಗಿದೆ.
ಪ್ರತೀ ಹುದ್ದೆಗೆ ವಿದ್ಯಾರ್ಹತೆ ಜೊತೆಗೆ ಕಾರ್ಯಾನುಭವ ಹೊಂದಿರಬೇಕು.
ನೇರ ಸಂದರ್ಶನಕ್ಕೆ ಶೈಕ್ಷಣಿಕ ದಾಖಲೆಗಳ ಒಂದು ಸೆಟ್ ಜೆರಾಕ್ಸ್ ಕಾಪಿಗಳೊಂದಿಗೆ, ಒರಿಜಿನಲ್ ದಾಖಲೆ, ಫೊಟೋಗಳೊಂದಿಗೆ ಹಾಜರಾಗಬಹುದು. ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಟಿ.ಎ/ಡಿ.ಎ ನೀಡಲಾಗುತ್ತದೆ.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೇಂದ್ರೀಯ ವಿದ್ಯಾಲಯ ದ ಅಫೀಶಿಯಲ್ ವೆಬ್‌ಸೈಟ್ megcentre.kvs.ac.in ಗೆ ಭೇಟಿ ನೀಡಬಹುದು. ಅಥವಾ ದೂರವಾಣಿ ಸಂಖ್ಯೆ 080-25365053 ಗೆ ಕರೆ ಮಾಡಬಹುದು