KEA KLA Recruitment 2024: ಕೆಎಲ್‌ಎ ಇಂದ ನೇಮಕ ಅಧಿಸೂಚನೆ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ವೇತನ ರೂ.97ಸಾವಿರ

Advertisements

KEA KLA Recruitment 2024: ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಮತ್ತು ಕಲ್ಯಾಣ-ಕರ್ನಾಟಕ ವೃಂದದಲ್ಲಿನ ವಿವಿಧ ವೃಂದಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕೆಲಸ ಮಾಡಬೇಕು. ಒಟ್ಟು 28 ಹುದ್ದೆಗಳು ಖಾಲಿ ಇದೆ.

ಪ್ರಮುಖ ದಿನಾಂಕಗಳು;
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ; 24.03.2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; 23.04.2024
ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ: 25.04.2024

ಹುದ್ದೆಯ ಕುರಿತ ಮಾಹಿತಿ ಇಲ್ಲಿದೆ;
ಯಾವೆಲ್ಲ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ?
ಸೀನಿಯರ್‌ ಪ್ರೋಗ್ರಾಮರ್‌, ಜೂನಿಯರ್‌ ಪ್ರೋಗ್ರಾಮರ್‌, ಜೂನಿಯರ್‌ ಕನ್ಸೋಲ್‌ ಅಪರೇಟರ್‌, ಕಂಪ್ಯೂಟರ್‌ ಅಪರೇಟರ್‌, ಸಹಾಯಕರು, ಕಿರಿಯ ಸಹಾಯಕರು, ದತ್ತಾಂಶ ನಮೂದು ಸಹಾಯಕರು/ಬೆರಳಚ್ಚುಗಾರರು.

ಹುದ್ದೆ ಸಂಖ್ಯೆ, ವೇತನ ಲಿಸ್ಟ್‌:
ಸೀನಿಯರ್ ಪ್ರೋಗ್ರಾಮರ್ – 2 ಹುದ್ದೆ ಖಾಲಿ ಇದೆ. ಈ ಹುದ್ದೆಗೆ ಆಯ್ಕೆಯಾದವರಿಗೆ ರೂ.52650-97100ರೂ ವೇತನವಿದೆ.
ಜೂನಿಯರ್ ಪ್ರೋಗ್ರಾಮರ್ – 2 ಹುದ್ದೆ‌ ಖಾಲಿ ಇದೆ. ರೂ. 43100-ರೂ.83900 ಮಾಸಿಕ ವೇತನವಿದೆ.
ಜೂನಿಯರ್ ಕನ್ಸೋಲ್ ಆಪರೇಟರ್ – 4 ಹುದ್ದೆ ಖಾಲಿ ಇದ್ದು ಮಾಸಿಕ ರೂ.37900-ರೂ.70850 ವೇತನವಿದೆ.
ಕಂಪ್ಯೂಟರ್ ಆಪರೇಟರ್ – 4 ಹುದ್ದೆ ಖಾಲಿ ಇದ್ದು, ಮಾಸಿಕ ರೂ.30350-ರೂ.58250 ವೇತನವಿದೆ.
ಸಹಾಯಕರು – 3 ಹುದ್ದೆ ಖಾಲಿ ಇದ್ದು, ರೂ.30350-ರೂ.58250 ವೆತನ ನಿಗದಿ ಪಡಿಸಲಾಗಿದೆ.
ಕಿರಿಯ ಸಹಾಯಕರು -8 ಹುದ್ದೆ ಖಾಲಿ ಇದ್ದು, ಮಾಸಿಕ ರೂ.21400-42000ರೂ. ವೇತನವಿದೆ.
ದತ್ತಾಂಶ ನಮೂದು ಸಹಾಯಕರು/ ಬೆರಳಚ್ಚುಗಾರರು – 5 ಹುದ್ದೆ ಖಾಲಿ ಇದ್ದು, ಮಾಸಿಕ ರೂ.21400-ರೂ.42000 ವೇತನ ಸಿಗಲಿದೆ.

ಅರ್ಜಿ ಶುಲ್ಕ: ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳ ಅಭ್ಯರ್ಥಿಗಳಿಗೆ ಪ್ರವರ್ಗ 2 (ಎ), 2(ಬಿ), 3(ಎ),3(ಬಿ) ರೂ.750/-, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.500/-, ವಿಕಲ ಚೇತನ ಅಭ್ಯರ್ಥಿಗಳಿಗೆ ರೂ.250/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳು ನಿಗದಿಪಡಿಸಿದ ಶುಲ್ಕವನ್ನು ಕಡ್ಡಾಯವಾಗಿ ವೆಬ್‌ಸೈಟ್‌ ಲಿಂಕ್‌ http://kea.kar.nic.in ಅಥವಾ https://cetonline.karnataka.gov.in/kea ಮೂಲಕ ಸಂದಾಯ ಮಾಡತಕ್ಕದ್ದು.

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಭರ್ತಿ ಮಾಡಿ, ಭಾವಚಿತ್ರ/ಸಹಿ ಅಪ್ಲೋಡ್‌ ಮಾಡಿದ ನಂತರ ಪರೀಕ್ಷಾ ಶುಲ್ಕವನ್ನು ಪಾವತಿಸದೇ ಹಾಗೂ ದಾಖಲೆಗಳನ್ನು ಭಾವಚಿತ್ರ/ಸಹಿ ಅಪ್ಲೋಡ್‌ ಮಾಡದೇ ಇರುವ/ಅಸ್ಪಷ್ಟ ಭಾವಚಿತ್ರ/ಸಹಿಯನ್ನು ಅಪ್ಲೋಡ್‌ ಮಾಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಜಿಗಳನ್ನು ಆನ್‌ಲೈನ್‌ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲು ಅವಕಾಶವಿರುವುದಿಲ್ಲ.

ವಯೋಮಿತಿ;
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ತುಂಬಿರಬೇಕು. ಹಾಗೂ ಈ ಕೆಳಕಂಡ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು. ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ, ಪ್ರವರ್ಗ 11ಎ,11ಬಿ,111ಎ ಮತ್ತು 111ಬಿ ಅಭ್ಯರ್ಥಿಗಳಿಗೆ 38 ವರ್ಷ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ:
ಸೀನಿಯರ್‌ ಪ್ರೋಗ್ರಾಮರ್‌, ಜೂನಿಯರ್‌ ಪ್ರೋಗ್ರಾಮರ್‌, ಜೂನಿಯರ್‌ ಕನ್ಸೋಲ್‌ ಅಪರೇಟರ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಬ್ಯರ್ಥಿಗಳು ಕಂಪ್ಯೂಟರ್‌ ಸೈನ್ಸ್‌/ಇನ್ಫಾರ್ಮೇಷನ್‌ ಸೈನ್ಸ್‌/ಎಲೆಕ್ಟ್ರಾನಿಕ್‌ ಮತ್ತು ಕಮ್ಯುನಿಕೇಷನ್‌ ವಿಷಯದಲ್ಲಿ ಇಂಜಿನಿಯರಿಂಗ್‌ ಪದವಿ ಮಾಡಿರಬೇಕು.
ಕಂಪ್ಯೂಟರ್‌ ಅಪರೇಟರ್‌; ಕಂಪ್ಯೂಟರ್‌ ಅಪ್ಲಿಕೇಷನ್‌ ಅಥವಾ ಕಂಪ್ಯೂಟರ್‌ ಸೈನ್ಸ್‌ ಅಥವಾ ಎಲೆಕ್ಟ್ರಾನಿಕ್ಸ್‌ನಲ್ಲಿ ಬಿ.ಎಸ್ಸಿ ಪದವಿ ಮಾಡಿರಬೇಕು.
ಸಹಾಯಕರು ; ಕಾನೂನು ಪದವಿ ಹೊಂದಿರುವವರು, ಗಣಕಯಂತ್ರ ಜ್ಞಾನ ಇರುವವರು ಅರ್ಜಿ ಸಲ್ಲಿಸಬಹುದು.
ಕಿರಿಯ ಸಹಾಯಕರು -ಪದವಿ ಹೊಂದಿರುವವರು ಜೊತೆಗೆ ಗಣಕಯಂತ್ರ ಜ್ಞಾನ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ದತ್ತಾಂಶ ನಮೂನು ಸಹಾಯಕರು/ಬೆರಳಚ್ಚುಗಾರರು- ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ, ಕನ್ನಡ ಮತ್ತು ಇಂಗ್ಲೀಷ್‌ ಹಿರಿಯ ದರ್ಜೆಯ ಬೆರಳಚ್ಚುಗಾರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು; 080-23460460

ಹುದ್ದೆಯ ಕುರಿತ ಡಿಟೇಲ್ಡ್‌ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ