ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರಿನ ಅಡಿಯಲ್ಲಿ ಬರುವ ಮಹಾವಿದ್ಯಾಲಯಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ರವರು ನಡೆಸಿದ ಕೆ.ಸಿ.ಇ.ಟಿ ( KCET-2020)ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಭರ್ತಿ ಆಗದೆ ಉಳಿದಿರುವ ಸ್ನಾತಕ ಸೀಟುಗಳನ್ನು ಮುಕ್ತ ಕೌನ್ಸಲಿಂಗ್ ಆಯ್ಕೆ ಪ್ರಕ್ರಿಯೆಯ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಈ ಮೊದಲು ಅರ್ಜಿ ಆಹ್ವಾನಿಸಲಾಗಿತ್ತು. ಮತ್ತು ಸದರಿ ಕೌನ್ಸಲಿಂಗನ್ನು ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ ಬೆಂಗಳೂರು ಇಲ್ಲಿ ದಿನಾಂಕ 01-03-2021 ರಂದು ನಡೆಸಲು ತೀರ್ಮಾನಿಸಿರುವುದನ್ನು ರದ್ದುಪಡಿಸಿ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ನಂದಿನಗರ ಬೀದರ್ ಇಲ್ಲಿ ದಿನಾಂಕ 05-03-2021ರಂದು ಬೆಳಗ್ಗೆ 10.30 ರಿಂದ ಮುಕ್ತ ಕೌನ್ಸಲಿಂಗ್ ಮತ್ತು ಅಂತಿಮ ಮಾಪಪ್ ಸುತ್ತಿನಲ್ಲಿ (final mop up round) ನಡೆಸಲಾಗುತ್ತದೆ. ಈ ಮುಕ್ತ ಕೌನ್ಸಲಿಂಗ್ ಸಂಬಂಧಪಟ್ಟಂತೆ ಹೆಚ್ಚಿನ ವಿವರಣೆಗಾಗಿ ವಿಶ್ವವಿದ್ಯಾಲಯದ ಅಧಿಕೃತ ಅಂತರ್ಜಾಲ www.kvafsu.edu.in ರಲ್ಲಿ ನೋಡಬಹುದು.
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ಕೌನ್ಸಲಿಂಗ್ ದಿನಾಂಕ ಮುಂದೂಡಿಕೆ- ಪ್ರಕಟಣೆ
Advertisements