ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ : ಸಹಾಯಕ ನಿರ್ದೇಶಕರು (ಕವಿವಿ ಮುದ್ರಣಾಲಯ) – 01 (ಸಾಮಾನ್ಯ)
ಕಾರ್ಯಗಾರ ಅಧಿಕಾರಿಗಳು/ವ್ಯವಸ್ಥಾಪಕರು -01 ( ಸಾಮಾನ್ಯ)
ಕಿರಿಯ ಇಂಜಿನಿಯರ್ (ಸಿವಿಲ್) -02 ( 01 – ಪರಿಶಿಷ್ಟ ಜಾತಿ, 01- ಸಾಮಾನ್ಯ)
ವರ್ಕ್ ಸುಪರ್ ವೈಸರ್ – 02 ( ಪರಿಶಿಷ್ಟ ಜಾತಿ -01, ಸಾಮಾನ್ಯ – 01)
ಎಲೆಕ್ಟ್ರಿಶಿಯನ್ : 3 ಹುದ್ದೆ ( ಪರಿಶಿಷ್ಟ ಜಾತಿ -1, ಸಾಮಾನ್ಯ -1, ಪರಿಶಿಷ್ಟ ಪಂಗಡ -1)
ಫಿಟ್ಟರ್ – 1 ( ಸಾಮಾನ್ಯ)
ಸಹಾಯಕ ತೋಟಗಾರಿಕೆ – 1 ( ಸಾಮಾನ್ಯ )
ಸಹಾಯಕ – 1 ( ಸಾಮಾನ್ಯ )
ಪ್ಲೇಸ್ ಮೆಂಟ್ ಅಧಿಕಾರಿ – 1 ( ಸಾಮಾನ್ಯ )
ಆಯ್ಕೆ ಮಾಡುವ ವಿಧಾನ : ಪೂರ್ಣ ವಿವರಗಳನ್ನು ಭರ್ತಿ ಮಾಡಿ ಸಲ್ಲಿಸಿದ ಮತ್ತು ಎಲ್ಲಾ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳಿಗೆ ವಿಶ್ವವಿದ್ಯಾಲಯದ ವತಿಯಿಂದ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ವಯೋಮಿತಿ: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 40 ವಯೋಮಿತಿ ಹೊಂದಿರಬೇಕು.
ಪ್ರವರ್ಗ 2a, 2b, 3a,3b ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 38 ವಯೋಮಿತಿ ಇರಬೇಕು.
ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ 18 ಹಾಗೂ 35 ವಯೋಮಿತಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಗಳನ್ನು ವಿಶ್ವವಿದ್ಯಾಲಯದ ಅಂತರ್ಜಾಲ www.kud.ac.in ರ ನೋಟಿಫಿಕೇಶನ್ ಕಾಲಂ ನಿಂದ ಪಡೆದುಕೊಂಡು ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ದಿನಾಂಕ 05-06-2021 ಅಥವಾ ಸದರಿ ದಿನಾಂಕ ಮತ್ತು ನಂತರದಲ್ಲಿಯೂ ಸಹ ಲಾಕ್ ಡೌನ್ ಇದ್ದಲ್ಲಿ ಲಾಕ್ ಡೌನ್ ಮುಗಿದ ದಿನಾಂಕದಿಂದ ಮುಂದಿನ 10 ಕರ್ತವ್ಯದ ದಿನಗಳೊಳಗಾಗಿ ಕಚೇರಿ ವೇಳೆಯಲ್ಲಿ ವಿಶ್ವವಿದ್ಯಾಲಯದ ಅವಕ ವಿಭಾಗದಲ್ಲಿ ಸಲ್ಲಿಸುವುದು.