Advertisements
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕವಾಗಿ ಸಂಚಿತ ವೇತನದ ಆಧಾರದ ಮೇಲೆ ವಿವಿಧ ಬೋಧಕೇತರ ಹುದ್ದೆಗಳ ನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವಿವರಗಳನ್ನು ಕರ್ನಾಟಕ ವಿಶ್ವವಿದ್ಯಾಲಯದ ಅಂತರ್ಜಾಲ ತಾಣವಾದ www.kud.ac.in ರ ನೋಟಿಫಿಕೇಶನ್ ಕಾಲದಿಂದ ಪಡೆದು ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ದಿನಾಂಕ 05-06-2021 ಅಥವಾ ಸದರಿ ದಿನಾಂಕ ಮತ್ತು ನಂತರದಲ್ಲಿಯೂ ಸಹ ಲಾಕ್ ಡೌನ್ ಇದ್ದಲ್ಲಿ ಲಾಕ್ ಡೌನ್ ಅವಧಿ ಮುಗಿದ ನಂತರ ದಿನಾಂಕದಂದು ಮುಂದಿನ 10 ಕರ್ತವ್ಯದ ದಿನಗಳೊಳಗಾಗಿ ಕಚೇರಿ ವೇಳೆಯಲ್ಲಿ ವಿಶ್ವವಿದ್ಯಾಲಯದ ಅವಕ ವಿಭಾಗದಲ್ಲಿ ಸಲ್ಲಿಸಲು ತಿಳಿಸಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ಸಂಚಿತ ವೇತನ ಮತ್ತು ಇತರೆ ಹೆಚ್ಚಿನ ವಿವರಗಳಿಗಾಗಿ ವಿಶ್ವವಿದ್ಯಾಲಯದ ಅಂತರ್ಜಾಲ ತಾಣವನ್ನು ವೀಕ್ಷಿಸಲು ಸೂಚಿಸಲಾಗಿದೆ.