ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ದಲ್ಲಿ ಖಾಲಿ ಇರುವ ಹುದ್ದೆಗೆ ನೇರ ಸಂದರ್ಶನ

Advertisements

ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ದಲ್ಲಿ ಗುತ್ತಿಗೆ ಆಧಾರದಲ್ಲಿ ಈ ಕೆಳಕಂಡ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು‌ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ : ಟೆಕ್ನಿಕಲ್ ಕನ್ಸಲ್ಟೆಂಟ್ -01

ವೇತನ : ತಿಂಗಳಿಗೆ 30,000 ವೇತನ ನಿಗದಿಯಾಗಿರುತ್ತದೆ.

ವಿದ್ಯಾರ್ಹತೆ : ಎಂ.ಎಸ್ಸಿ ಇನ್ ಎನ್ವಿರಾನ್ಮೆಂಟಲ್ ಸೈನ್ಸಸ್/ಅಪ್ಲೈಡ್ ಬಾಟನಿ/ನ್ಯಾಚುರಲ್ ರಿಸೋರ್ಸ್ ಕಂಸರ್ವೇಶನ್ ಆಂಡ್ ಮ್ಯಾನೇಜ್ಮೆಂಟ್

ಆಸಕ್ತ ಅಭ್ಯರ್ಥಿಗಳು ದಿನಾಂಕ 10-03-2021 ರ ಬೆಳಗ್ಗೆ 11.30 ಗೆ ಪ್ರಾಧಿಕಾರದ ಕಚೇರಿಯಲ್ಲಿ ಸಂದರ್ಶನವು ನಿಗದಿಯಾಗಿರುತ್ತದೆ.

ವೈಯಕ್ತಿಕ ಮಾಹಿತಿಯನ್ನು ಒಳಗೊಂಡ ಮತ್ತು ವಿದ್ಯಾರ್ಹತೆ ಗೆ ಸಂಬಂಧಿಸಿದ ಪ್ರಮಾಣ ಪತ್ರಗಳ ಮೂಲ ಮತ್ತು ಛಾಯಾಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗತಕ್ಕದ್ದು. ಇದು ಸಂಪೂರ್ಣವಾಗಿ ತಾತ್ಕಾಲಿಕ ಹುದ್ದೆ ಆಗಿರುತ್ತದೆ. ಮತ್ತು ಯಾವುದೇ ಮಂಜೂರಾದ ಹುದ್ದೆ ಅಲ್ಲ. ಗುತ್ತಿಗೆ ಅವಧಿಯು 11 ತಿಂಗಳಿಗೆ ಮಾತ್ರ‌ ಮತ್ತು ಅಭ್ಯರ್ಥಿಯ ಕಾರ್ಯನಿರ್ವಹಣೆಯನ್ನು ಅವಲಂಭಿಸಿ ಗುತ್ತಿಗೆ ಆಧಾರದಲ್ಲಿ ವಿಸ್ತರಿಸಲಾಗುವುದು.

ಕಚೇರಿ ವಿಳಾಸ : ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ,4 ನೇ ಮಹಡಿ, ವನವಿಕಾಸ,18 ನೇ ಅಡ್ಡ ರಸ್ತೆ, ಮಲ್ಲೇಶ್ವರಂ,ಬೆಂಗಳೂರು-03

ದೂರವಾಣಿ ಸಂಖ್ಯೆ : 23464089

Leave a Comment