Karnataka Organic Foundation Jobs: ಮಂಗಳೂರಿನಲ್ಲಿದೆ ಕಾರ್ಯನಿರ್ವಹಣಾ ಅಧಿಕಾರಿ ಹುದ್ದೆ; ಜೂನ್‌ 03, 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

Advertisements

Karnataka Organic Foundation Jobs: ಗ್ರಾಮೀಣ ಪ್ರದೇಶ ಮಹಿಳಾ ಉದ್ಯಮ ತರಬೇತಿ ಅಭಿವೃದ್ಧಿ ಯೋಜನೆ ಹಾಗೂ ಕರ್ನಾಟಕ ಸಾವಯವ ಕೃಷಿ ಯೋಜನೆ (ರಿ) ಅಡಿಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಕೆಲವು ಜಿಲ್ಲಾ ಪಂಚಾಯತ್‌ ಕ್ಷೇತ್ರಗಳ ಉಸ್ತುವಾರಿ ನೋಡಿಕೊಳ್ಳಲು ಮಹಿಳೆಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಯ ಕುರಿತ ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ವಿವಾಹಿತ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಮಾತ್ರ ಅವಕಾಶವಿದೆ.

ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ;
ಉಜಿರೆ ಜಿಲ್ಲಾ ಪಂಚಾಯತ್- ಉಜಿರೆ, ಮುಂಡಾಜೆ, ಚಾರ್ಮಾಡಿ, ನೆರಿಯಾ, ಕಾರ್ಯತಡ್ಕ
ಲಾಯಿಲ ಜಿಲ್ಲಾ ಪಂಚಾಯತ್ – ಲಾಯಿಲ, ಇಂದಬೆಟ್ಟು, ನಾವುರ, ಬಂಗಾಡಿ, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ
ನಾರಾವಿ ಜಿಲ್ಲಾ ಪಂಚಾಯತ್- ನಾರಾವಿ, ಮರೋಡಿ, ಕಾಶಿಪಟ್ನ, ಅಂಡಿಂಜೆ, ವೇಣೂರು, ಸಾವ್ಯ, ಕೊಕ್ರಾಡಿ, ಕುತ್ತೂರು
ಧರ್ಮಸ್ಥಳ ಜಿಲ್ಲಾ ಪಂಚಾಯತ್ – ಕೊಕ್ಕಡ, ನಿಡ್ಲೆ, ಶಿಶಿಲ, ಶಿಬಾಜೆ, ಅರಸಿನಮಕ್ಕಿ, ಪಟ್ರಮೆ ಬೆಳಾಲು, ಧರ್ಮಸ್ಥಳ
ಕಣಿಯೂರು ಪದ್ಮುಂಜಾ- ಪದ್ಮುಂಜಾ, ಬಂದಾರು, ತಣ್ಣಿರುಪಂತ, ಬಾರ್ಯ, ಕರಾಯ, ಮೊಗ್ರು
ಜಿಲ್ಲಾ ಪಂಚಾಯತ್- ಇಳಂತಿಲ, ಬಳ್ಳಮಂಜ, ಮಚ್ಚಿನ,ಕಳಿಯ, ಗೇರುಕಟ್ಟೆ, ಕೊಯ್ಯರು
ಅಳದಂಗಡಿ ಜಿಲ್ಲಾ ಪಂಚಾಯತ್ – ಅಳದಂಗಡಿ, ಶಿರ್ಲಾಲು, ಪಡಂಗಡಿ, ಪೆರ್ಮಡ, ಸವಣಾಲು, ಬಳಂಜ

ಮೇಲೆ ತಿಳಿಸಿ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ 3 ಗ್ರಾಮ ಪಂಚಾಯತ್‌ ಪ್ರದೇಶಗಳಿಗೆ 1 ಕಾರ್ಯನಿರ್ವಹಣಾ ಅಧಿಕಾರಿಗಳ ನೇರ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ: ಎಸ್‌.ಎಸ್‌.ಎಲ್‌.ಸಿ., ಪಿಯುಸಿ (ಪದವಿ ಅವಶ್ಯಕತೆ ಇಲ್ಲ) ಆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ವೇತನ: ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.18000-21000 ರೂ. ವರೆಗೆ ವೇತನ ಸಿಗಲಿದೆ.

ಹುದ್ದೆ ಸಂಖ್ಯೆ: 15 ಹುದ್ದೆಗಳ ನೇಮಕಾತಿ ನಡೆಯಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡೇಟಾವನ್ನು 8792763784 ಈ ವಾಟ್ಸಾಪ್‌ ನಂಬರ್‌ಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಕೊನೆಯ ದಿನಾಂಕ 03-06-2024 ರೊಳಗೆ ಭರ್ತಿ ಮಾಡಿ ಕಳುಹಿಸಿಬೇಕು.

ನೇರ ಸಂದರ್ಶನ ಸ್ಥಳ: ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಳ್ತಂಗಡಿ ಅಥವಾ ಉಜಿರೆಯಲ್ಲಿ ನೇರ ಸಂದರ್ಶನವಿರಲಿದೆ.

ಮಹತ್ವದ ಮಾಹಿತಿ: ದ್ವಿಚಕ್ರ ವಾಹನ ಚಾಲನೆ ಗೊತ್ತಿರುವ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಂಜೀವಿನಿ ಎಲ್‌.ಸಿ.ಆರ್.ಪಿ/ಎಂ.ಬಿ.ಕೆ ಸ್ವ-ಸಹಾಯ ಸಂಘ ಸೇವಾ ಪ್ರತಿನಿಧಿ ಸೇವಾ ದೀಕ್ಷಿತೆ, ಪ್ರೇರಕಿ ಇಲ್ಲಿ ಕೆಲಸ ಮಾಡಿ ಅನುಭವ ಇರುವ ಮಹಿಳೆಯರಿಗೆ ಆದ್ಯತೆ ಇದೆ.