ಕರ್ನಾಟಕ ಮಾಹಿತಿ ಆಯೋಗ : ಬೆಂಗಳೂರು ಮತ್ತು ಕಲಬುರಗಿ ಪೀಠದಲ್ಲಿ ಹುದ್ದೆ

Advertisements

ಕರ್ನಾಟಕ ಮಾಹಿತಿ ಆಯೋಗದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆ : ಮೂರು ಆಯುಕ್ತರ‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ( ಒಂದು ಹುದ್ದೆ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠಕ್ಕೆ ಹಾಗೂ ಎರಡು ಹುದ್ದೆಗಳು ಕರ್ನಾಟಕ ಮಾಹಿತಿ ಆಯೋಗ ಬೆಂಗಳೂರು ಇಲ್ಲಿಗೆ)

ಕಾನೂನು, ವಿಜ್ಞಾನ, ತಂತ್ರಜ್ಞಾನ, ಸಮಾಜ ಸೇವೆ, ನಿರ್ವಹಣೆ ( ಮ್ಯಾನೇಜ್ಮೆಂಟ್), ಪತ್ರಿಕೋದ್ಯಮ, ಸಮೂಹ ‌ಮಾಧ್ಯಮ ಅಥವಾ ಆಡಳಿತ ( ಅಡ್ಮಿನಿಸ್ಟ್ರೇಶನ್ ಮತ್ತು ಗವರ್ನೆನ್ಸ್) ನಲ್ಲಿ ವಿಶಾಲ ತಿಳುವಳಿಕೆ ಮತ್ತು ಅನುಭವ ಹೊಂದಿರುವ ಹಾಗೂ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಮಾಹಿತಿ ಆಯುಕ್ತರನ್ನಾಗಿ ನೇಮಕಾತಿ ಮಾಡಲು ಅವಕಾಶವಿದೆ.

ಮಾಹಿತಿ ಆಯುಕ್ತರಾಗಿ ನೇಮಕಾತಿ ಹೊಂದಲು ನಿಗದಿತ ಮಾನದಂಡಗಳನ್ನು ಪೂರೈಸಿರುವವರು ಮತ್ತು ನೇಮಕಗೊಳ್ಳಲು ಆಸಕ್ತರಾದವರು ತಮ್ಮ ವ್ಯಕ್ತಿಗತ ವಿವರಗಳನ್ನು ಈ ಅಧಿಸೂಚನೆಗೆ ಲಗತ್ತಿಸಿರುವ ನಮೂನೆಯಲ್ಲಿ ಅಂಚೆ ಮೂಲಕ ಅಥವಾ ಖುದ್ದಾಗಿ ಸರಕಾರದ ಅಧೀನ ಕಾರ್ಯದರ್ಶಿ-1, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ( ಜನಸ್ಪಂದನ), 3 ನೇ ಮಹಡಿ, ಪೋಡಿಯಂ ಬ್ಲಾಕ್ , ವಿಶ್ವೇಶ್ವರಯ್ಯ ‌ಗೋಪುರ, ಡಾ||ಬಿ.ಆರ್.ಅಂಬೇಡ್ಕರ್ ವೀಧಿ, ಬೆಂಗಳೂರು – 560001 ಇವರಿಗೆ ವಿಳಾಸಿಸಿ ದಿನಾಂಕ 04-08-2021 ರ ಸಂಜೆ 5.30 ಗಂಟೆಯೊಳಗೆ ಸಲ್ಲಿಸಬಹುದಾಗಿದೆ. ಕೇಂದ್ರ/ ರಾಜ್ಯ ಸರಕಾರದಲ್ಲಿ ಅಥವಾ ಯಾವುದೇ ಇತರೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ತಮ್ಮ ವಿವರಗಳನ್ನು ಸಮುಚಿತ ಮಾರ್ಗದ ಮೂಲಕ ನಿಗದಿತ ನಮೂನೆಯಲ್ಲಿ ಸಲ್ಲಿಸಬಹುದಾಗಿದೆ.

ಕರ್ನಾಟಕ ಮಾಹಿತಿ ಆಯೋಗ : ಬೆಂಗಳೂರು ಮತ್ತು ಕಲಬುರಗಿ ಪೀಠದಲ್ಲಿ ಹುದ್ದೆ 1

Leave a Comment