ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರವರ್ತಿತ “ಆರ್ಥಿಕ ಸಲಹಾ ಕೇಂದ್ರಗಳಿಗೆ” ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆ : ಆರ್ಥಿಕ ಸಲಹೆಗಾರ ನೇಮಕಕ್ಕೆ ಉದ್ಯೋಗ ಪ್ರಕಟಣೆ ಬಿಡುಗಡೆ ಮಾಡಿದೆ. ಒಟ್ಟು ಹುದ್ದೆಗಳ ಸಂಖ್ಯೆ 5. ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೆಳಗೆ ನೀಡಲಾಗಿರುವ ಸ್ಥಳಗಳಲ್ಲಿ ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಲಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ಚಾಮರಾಜನಗರ ಜಿಲ್ಲೆಯ ಎಳಂದೂರು, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಯಾದಗಿರಿ, ಕಲಬುರಗಿ ಜಿಲ್ಲೆಯ ಅಳಂದ.
ಈ ಉದ್ಯೋಗವು 3 ವರ್ಷಗಳ ಗುತ್ತಿಗೆ ಆಧಾರದ ತಾತ್ಕಾಲಿಕ ಹುದ್ದೆಯಾಗಿರುತ್ತದೆ.
ಸಾಮಾಜಿಕ ಭದ್ರತಾ ಯೋಜನೆಗಳ ತಿಳುವಳಿಕೆ, ಬ್ಯಾಂಕಿಂಗ್ ಜ್ಞಾನ, ಹಣಕಾಸಿನ ಸೇವೆಗಳ ತಿಳುವಳಿಕೆ ಇರಬೇಕು.
ವಯೋಮಿತಿ : 62 ವರ್ಷದೊಳಗಿನ ನಿವೃತ್ತ ಬ್ಯಾಂಕ್ ಅಧಿಕಾರಿಗಳು, ಪದವೀಧರರು ಅರ್ಜಿ ಸಲ್ಲಿಕೆಗೆ ಅರ್ಹರಾಗಿರುತ್ತಾರೆ.
ಹುದ್ದೆ ಸಂಖ್ಯೆ : 05
ವೇತನ : 17,000+ 3000( ಪ್ರಯಾಣ ಭತ್ಯೆ) ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ