Advertisements
ರಾಜ್ಯದ ಸರಕಾರಿ ನೌಕರರಿಗೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವು ಮಂಗಳವಾರ ಸರಕಾರಿ ನೌಕರರಿಗೆ ತುಟ್ಟಿಭತ್ಯೆ ( ಡಿಎ) ಹೆಚ್ಚಳ ಮಾಡಿ ಸೂಚನೆಯನ್ನು ಹೊರಡಿಸಿದೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಹಣಕಾಸು ಇಲಾಖೆಗೆ ಜುಲೈ 1, 2021 ರಿಂದ ಅನ್ವಯಿಸುವಂತೆ ರಾಜ್ಯ ಸರಕಾರಿ ನೌಕರರಿಗೆ ಶೇ.11 ರಷ್ಟು ಡಿಎ ( ತುಟ್ಟಿಭತ್ಯೆ) ನೀಡುವಂತೆ ಸೂಚಿಸಿದ್ದಾರೆ. ಅಧಿಕೃತ ಆದೇಶ ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ.
ರಾಜ್ಯ ಸರಕಾರಿ ನೌಕರರ ತುಟ್ಟಿಭತ್ಯೆ ದರ ಶೇ.11.25% ಇದೆ. ಈಗ ಶೇ.11 ಹೆಚ್ಚಳದಿಂದಾಗಿ ಒಟ್ಟು 22.25 ರಷ್ಟು ತುಟ್ಟಿಭತ್ಯೆ ದೊರಕಲಿದೆ. ಇದರಿಂದಾಗಿ 1.50 ಲಕ್ಷ ಪಿಂಚಣಿದಾರರು ಸೇರಿದಂತೆ 6 ಲಕ್ಷ ನೌಕರರಿಗೆ ಅನುಕೂಲವಾಗಲಿದೆ.