Advertisements
ಸಾರ್ವಜನಿಕ ಶಿಕ್ಷಣ ಇಲಾಖೆಯಡಿಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಶೀಘ್ರದಲ್ಲೇ ಎಸ್‌ಡಿಎ, ಎಫ್‌ಡಿಎ, ಗ್ರೂಪ್ ಡಿ ನೌಕರರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸುವ ಸಾಧ್ಯತೆ ಇದೆ.
ಎಲ್ಲಾ ಶಾಲೆಗಳು ಕಾಲೇಜುಗಳು, ಕಛೇರಿಗಳಲ್ಲಿನ ಬೋಧಕೇತರ ನೌಕರರ ವೃಂದವಾರು ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಮತ್ತು ಗ್ರೂಪ್ ಡಿ ನೌಕರರ ವೃಂದದ ನಿಖರವಾದ ಖಾಲಿ ಹುದ್ದೆಗಳ ಮಾಹಿತಿಯನ್ನು ಸಾರ್ವಜನಿಕ ಇಲಾಖೆಯು ಕೇಳಿರಿವುದರಿಂದ ನಂತರದಲ್ಲಿ ಶಿಕ್ಷಣ ಇಲಾಖೆಯಡಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡುವ ಕಾರ್ಯವು ನಡೆಯಲಿದೆ.
ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ದಿನಾಂಕ 20-೦5-2021 ರೊಳಗೆ ದೃಢೀಕರಣದೊಂದಿಗೆ ಇ-ಮೇಲ್ [email protected] ಮೂಲಕ ಸಲ್ಲಿಸಲು ಸೂಚಿಸಲಾಗಿದೆ.
ನಿಗದಿತ ನಮೂನೆಯಲ್ಲಿ ಖಾಲಿ ಹುದ್ದೆಗಳ ವಿವರಗಳನ್ನು ಸಲ್ಲಿಸಲು ಶಿಕ್ಷಣ ಇಲಾಖೆಯು ಸೂಚಿಸಿದೆ.