ಕ.ಕ.ಪ್ರ.ಅ.ಮಂಡಳಿ ಕಲಬುರಗಿ ಕಾರ್ಯಾಲಯದಲ್ಲಿ ಮಂಜೂರಾಗಿ ತೆರವಾಗಿರುವ ಹುದ್ದೆಗಳಿಗೆದುರಾಗಿ ನಿವೃತ್ತ ಅಧಿಕಾರಿ/ಸಿಬ್ಬಂದಿಯವರನ್ನು ಹೊರಗುತ್ತಿಗೆ/ ಗೌರವಧನದ ಆಧಾರದ ಮೇಲೆ ಪಡೆದುಕೊಳ್ಳಲಾಗುವುದು. ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ:
ಹುದ್ದೆ : ಕಾರ್ಯನಿರ್ವಾಹಕ ಅಭಿಯಂತರರು -01 ಹುದ್ದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು pwd, pref,mi,res,kuws&db ಮತ್ತು KRIDL ಇಲಾಖೆಗಳ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಕನಿಷ್ಠ 05 ವರ್ಷಗಳ ಅನುಭವ ಹೊಂದಿರುವ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು.
ಸಹಾಯಕ ಅಭಿಯಂತರರು – 05 ಹುದ್ದೆಗಳು. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು pwd, pref,mi,res,kuws&db ಮತ್ತು KRIDL ಇಲಾಖೆಗಳ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಕನಿಷ್ಠ 05 ವರ್ಷಗಳ ಅನುಭವ ಹೊಂದಿರುವ ನಿವೃತ್ತ ಕಿರಿಯ/ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು.
ಜ್ಯೂನಿಯರ್ ಪ್ರೋಗ್ರಾಮರ್- 02 ಹುದ್ದೆಗಳು. ಎಂಸಿಎ, ಎಂಎಸ್ಸಿ( ಸಿಎಸ್), ಹೆಚ್ ಟಿಎಂಎಲ್,c#asp.net,mssql, ಎರಡು ವರ್ಷ ಅನುಭವ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಗೌರವಧನ ಧನ ರೂ.15,000/-
ಕಂಪ್ಯೂಟರ್ ಅಪರೇಟರ್ – 02 ಹುದ್ದೆಗಳು. ಈ ಹುದ್ದೆಗೆ ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಕಡ್ಡಾಯವಾಗಿ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ತಿಳಿದಿರಬೇಕು. ಕಡ್ಡಾಯವಾಗಿ ಸರಕಾರದ ಯಾವುದೇ ಸರಕಾರದ ಕಚೇರಿಯಲ್ಲಿ ಕೆಲಸ ನಿರ್ವಹಿಸಿರಬೇಕು. ( ಸಂಭಾವನೆ ಕನಿಷ್ಠ ವೇತನ ಕಾಯ್ದೆ ಅನ್ವಯ)
ಆಸಕ್ತಿಯುಳ್ಳ ನಿವೃತ್ತ ಅಧಿಕಾರಿ/ಸಿಬ್ಬಂದಿಯವರು ಹಾಗೂ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ಅವಶ್ಯಕ ದಾಖಲಾತಿಗಳೊಂದಿಗೆ ಈ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಲು ದಿನಾಂಕ 03-07-2021 ರಂದು ಸಾಯಂಕಾಲ 5.30 ರೊಳಗೆ (ರಜಾದಿನ ಹೊರತು ಪಡಿಸಿ) ಕಚೇರಿ ವೇಳೆಯಲ್ಲಿ ಸಲ್ಲಿಸಬಹುದಾಗಿದೆ.
ದಿನಾಂಕ 06-07-2021 ರಂದು ಬೆಳಿಗ್ಗೆ 10.00 ಗಂಟೆಗೆ ನಿವೃತ್ತ ಅಧಿಕಾರಿ/ ಸಿಬ್ಬಂದಿಯವರು ಹಾಗೈ ಅಭ್ಯರ್ಥಿಗಳ ರವರ ದಾಖಲಾತಿಗಳ ಪರಿಶೀಲನೆ ಹಾಗೂ ಸಂದರ್ಶನ ಮತ್ತು ದಿನಾಂಕ 07-07-2021 ರಂದು ಬೆಳಿಗ್ಗೆ 10.00 ಗಂಟೆಗೆ ಕಂಪ್ಯೂಟರ್ ಅಪರೇಟರ್ ರವರ ಲಿಖಿತ ಪರೀಕ್ಷೆ ಮಂಡಳಿಯ ಕಾರ್ಯಾಲಯ ದಲ್ಲಿ ನಿಗದಿಪಡಿಸಲಾಗಿದೆ.
ಹೆಚ್ಚಿನ ವಿವರಗಳನ್ನು ಕಚೇರಿಯ ಕೆಲಸದ ದಿನಗಳಲ್ಲಿ ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ