ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿ. ಈ ಸಂಘದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸಂಘವು ಪೂರೈಸುವ ಮೂಲ ಅರ್ಜಿಯೊಂದಿಗೆ ಪೂರಕ ದಾಖಲೆಗಳ ನಕಲುಗಳನ್ನು ಸ್ವಯಂ ದೃಢೀಕರಿಸಿ, ದಿನಾಂಕ : 24-05-2021 ರಂದು ಸಂಜೆ 5.00 ಘಂಟೆ ಒಳಗಾಗಿ ಸಂಘಕ್ಕೆ ತಲುಪುವಂತೆ ಸಲ್ಲಿಸತಕ್ಕದ್ದು.
ಹುದ್ದೆಯ ಹೆಸರು : ಕಿರಿಯ ಸಹಾಯಕ ಕಂ ಮಾರಾಟ ಗುಮಾಸ್ತ ( ಜ್ಯೂನಿಯರ್ ಅಸಿಸ್ಟೆಂಟ್ ಕಮ್ ಸೇಲ್ಸ್ ಕ್ಲರ್ಕ್)
ಸಾಮಾನ್ಯ ಅಭ್ಯರ್ಥಿ – 3
ಪರಿಶಿಷ್ಟ ಜಾತಿ-1
ಪ್ರವರ್ಗ-2A- 1
ಒಟ್ಟು 5 ಹುದ್ದೆಗಳು.
ವಿದ್ಯಾರ್ಹತೆ : ಅಂಗೀಕೃತ ವಿಶ್ವವಿದ್ಯಾಲಯದ ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಭಾಷೆಯನ್ನು ಕಲಿತಿರಬೇಕು ಹಾಗೂ ಭಾಷಾ ಜ್ಞಾನ ಕಡ್ಡಾಯವಾಗಿ ಹೊಂದಿರಬೇಕು. ಕಂಪ್ಯೂಟರ್ ಅಪರೇಷನ್ ಮತ್ತು ಅಪ್ಲಿಕೇಶನ್ಸ್ ತರಬೇತಿ ಮತ್ತು ಜ್ಞಾನ ಹೊಂದಿರಬೇಕು.
ವಯೋಮಿತಿ : ಅಭ್ಯರ್ಥಿಗೆ ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷ ತುಂಬಿರಬೇಕು. ಹಾಗೂ ಈ ಕೆಳಕಂಡಂತೆ ಗರಿಷ್ಠ ವಯೋಮಿತಿಗೊಳಪಟ್ಟಿರಬೇಕು.
ಅ) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳು
ಆ) 2ಎ, 2ಬಿ, 3ಎ, 3ಬಿ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷಗಳು.
ಇ) ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು.
ಅರ್ಜಿ ಸಲ್ಲಿಸುವ ವಿಧಾನ : ಸಂಘದ ಕೇಂದ್ರ ಕಚೇರಿಯಲ್ಲಿ ಕೆಲಸದ ವೇಳೆಯಲ್ಲಿ ಅರ್ಜಿಯನ್ನು ವಿತರಿಸಲಾಗುವುದು. ರೂ.1000/- ಪಾವತಿ ಮಾಡಿ ಅರ್ಜಿಯನ್ನು ಪಡೆಯಬಹುದು. ಈ ಹಣವನ್ನು ಹಿಂದಿರುಗಿಸಲಾಗುವುದಿಲ್ಲ. ಸಂಘದಿಂದ ಪೂರೈಸಿದ ಮೂಲ ಅರ್ಜಿಯಲ್ಲಿ ಭರ್ತಿ ಮಾಡಿ ಅರ್ಜಿಯೊಂದಿಗೆ ಪೂರಕ ದಾಖಲೆಗಳ ನಕಲುಗಳನ್ನು ಸ್ವಯಂ ದೃಢೀಕರಿಸಿ ಸದಸ್ಯ ಕಾರ್ಯದರ್ಶಿ,ಸಿಬ್ಬಂದಿ ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿ.ಸರ್ಜಾಪುರ -562125, ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ, ಇವರಿಗೆ ದಿನಾಂಕ : 24-05-2021ರಂದು ಸಂಜೆ 5.00 ಒಳಗಾಗಿ ಖುದ್ದಾಗಿ ಸಲ್ಲಿಸತಕ್ಕದ್ದು.