ಜೆಇಇ : ಮುಖ್ಯ ಪರೀಕ್ಷೆಗೆ ಅರ್ಜಿ ಆಹ್ವಾನ

Advertisements

ಜೆಇಇ ಎಪ್ರಿಲ್ ಮತ್ತು ಮೇ ಮುಖ್ಯ ಪರೀಕ್ಷೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜೆಇಇ ಎಪ್ರಿಲ್ ಸೆಷನ್‌ನಲ್ಲಿ ಪೇಪರ್ 2 ಪರೀಕ್ಷೆ ಇರುವುದಿಲ್ಲ. ಆದ್ದರಿಂದ ಮೇ ಸೆಷನ್ ಪರೀಕ್ಷೆಯಲ್ಲಿ ಪೇಪರ್ 2 (ಬಿ.ಆರ್ಕಿಟೆಕ್ಚರ್ ಅಥವಾ ಬಿ.ಪ್ಲಾನಿಂಗ್) ತೆಗೆದುಕೊಳ್ಳಬಹುದು.

ಆಸಕ್ತ ಅಭ್ಯರ್ಥಿಗಳು ಮಾರ್ಚ್‌ 25, 2021 ರಿಂದ ಎಪ್ರಿಲ್ 04, 2021 ರೊಳಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಜೆಇಇ ಮೇನ್ 2021 ರ್ಯಾಕಿಂಗ್ ಪಟ್ಟಿಯನ್ನು ಮೇ ಸೆಷನ್ ಪರೀಕ್ಷೆ ಫಲಿತಾಂಶದ ನಂತರ ಬಿಡುಗಡೆ ಮಾಡಲಾಗುತ್ತದೆ. ಮೇ ಸೆಷನ್ ಜೆಇಇ ಎಪ್ರಿಲ್ ಸೆಷನ್ ಫಲಿತಾಂಶ ನಂತರ ಮತ್ತೊಮ್ಮೆ ರಿಜಿಸ್ಟ್ರೇಶನ್ ವಿಂಡೋ ತೆರೆಯಲಾಗುತ್ತದೆ.

ಜೆಇಇ ಅಡ್ವಾನ್ಸ್‌ಡ್ ಪರೀಕ್ಷೆಯನ್ನು ಜುಲೈ 3,2021 ರಂದು ನಡೆಸಲು ದಿನಾಂಕ ನಿಗದಿಯಾಗಿದೆ.

ಜೆಇಇ ಮೇನ್ 2021 ಎಪ್ರಿಲ್, ಮೇ ಪರೀಕ್ಷೆಯ ಪ್ರಮುಖ ದಿನಾಂಕ :
ಜೆಇಇ ಮೇನ್ 2021: ಎಪ್ರಿಲ್ ಪರೀಕ್ಷೆಯು ಎಪ್ರಿಲ್ 27, 28 ,29 ಮತ್ತು 30 ರಂದು ನಡೆಯಲಿದೆ.
ಜೆಇಇ ಮೇನ್ 2021 : ಮೇ ಪರೀಕ್ಷೆಯು ಮೇ 24 ರಿಂದ ಮೇ 28, 2021 ರವರೆಗೆ ನಡೆಯಲಿದೆ.

ಜೆಇಇ ಮುಖ್ಯ ಪರೀಕ್ಷೆಗೆ ಅರ್ಜಿಸಲ್ಲಿಸುವ ಬಗೆ ಈ ರೀತಿ ಇದೆ :

ಅಭ್ಯರ್ಥಿಗಳು ಜೆಇಇ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ, ಹೋಂ ಪೇಜ್‌ನಲ್ಲಿ ಜೆಇಇ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಕೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ, ಆನಂತರ ರಿಜಿಸ್ಟ್ರೇಶನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿದ ಮೇಲೆ ಅಭ್ಯರ್ಥಿಗಳು ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ ನೀಡಿ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಶುಲ್ಕ ಪಾವತಿಸಿ. ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಸಲ್ಲಿಸಿದ ಬಳಿಕ ಪ್ರಿಂಟೌಟ್ ತೆಗೆಯಿರಿ.

ಅಧಿಕೃತ ವೆಬ್‌ಸೈಟ್ ಲಿಂಕ್‌ ಗಾಗಿ ಇಲ್ಲಿ ಕ್ಲಿಕ್ ಮಾಡಿ.

ನೋಟಿಫಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

Leave a Comment