IOCL ನಲ್ಲಿ ಉದ್ಯೋಗ : ಆನ್ಲೈನ್ ಮೂಲಕ‌ 469 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸಲು ಅ.25 ಕೊನೆಯ ದಿನಾಂಕ

Advertisements

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ( ಐಒಸಿಎಲ್) ಟ್ರೇಡ್ ಅಪ್ರೆಂಟಿಸ್ ಮತ್ತು ಟೆಕ್ನಿಶಿಯನ್ ಅಪ್ರೆಂಟಿಸ್ ಮತ್ತು ಡಿಇಒ ಪೋಸ್ಟ್ ಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಯ ಹೆಸರು : ಐಟಿಐ, ಡಿಪ್ಲೊಮಾ ಅಪ್ರೆಂಟಿಸ್

ಹುದ್ದೆಗಳ ಸಂಖ್ಯೆ : 469

ಟೆಕ್ನಿಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಐಟಿಐ, ಪಿಯುಸಿ, ಡಿಪ್ಲೊಮಾ ಪಾಸ್ ಮಾಡಿರಬೇಕು. ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಯಾವುದೇ ಡಿಗ್ರಿ ಪಾಸ್ ಮಾಡಿರಬೇಕು. ಡಿಇಒ ಮತ್ತು ಡೊಮೆಸ್ಟಿಕ್ ಡಿಇಒ ಹುದ್ದೆಗಳಿಗೆ ಪಿಯುಸಿ ತೇರ್ಗಡೆ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ 24 ವರ್ಷ ವಯೋಮಿತಿ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 05-10-2021

ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 25-10-2021

ಲಿಖಿತ ಪರೀಕ್ಷೆ ದಿನಾಂಕ : 21-11-2021

ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ದಿನಾಂಕ : ನವೆಂಬರ್ 5 ರಿಂದ 21, 2021

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನಿಗದಿಪಡಿಸಿದ ಶಿಕ್ಷಣದಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ, ಆಯ್ಕೆ ಮಾಡಲಾಗುತ್ತದೆ. ನಂತರ ಸಂದರ್ಶನ/ ಲಿಖಿತ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ನೋಟಿಫಿಕೇಶನ್ ಕ್ಲಿಕ್ ಮಾಡಿ

Leave a Comment