ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಚಿಕ್ಕಬಳ್ಳಾಪುರ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ಕೂಡಲೇ ಅರ್ಜಿ ಸಲ್ಲಿಸಿ

Advertisements

ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಚಿಕ್ಕಬಳ್ಳಾಪುರಗೆ ಈ ಕೆಳಕಂಡ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವಿವರಗಳು ಈ ಕೆಳಗಿನಂತಿವೆ:

ಹುದ್ದೆ : ಪ್ರಾಧ್ಯಾಪಕರು – 6
ಸಹ ಪ್ರಾಧ್ಯಾಪಕರು -16
ಸಹಾಯಕ ಪ್ರಾಧ್ಯಾಪಕರು – 26
ಹಿರಿಯ ಸ್ಥಾನಿಕ ವೈದ್ಯರು – 5
ಟ್ಯೂಟರ್- 11
ಕಿರಿಯ ಸ್ಥಾನಿಕ ವೈದ್ಯರು – 14

ಒಟ್ಟು ಹುದ್ದೆ – 78

ಅರ್ಜಿ ಸಲ್ಲಿಸಲು ಕೊ‌ನೆಯ ದಿನಾಂಕ : 28, ಫೆಬ್ರವರಿ 2021

ಅಭ್ಯರ್ಥಿಗಳು ಅರ್ಜಿಗಳನ್ನು ತುಂಬಿ, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸುವುದು.

ನೇರ ನೇಮಕಾತಿ ಸಂದರ್ಶನ ವಿಳಾಸ, ಮತ್ತು ದಿನಾಂಕ:

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ (ವಿಟಿಯು),
ಮುದ್ದೇನಹಳ್ಳಿಯಲ್ಲಿರುವ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಚಿಕ್ಕಬಳ್ಳಾಪುರ ಈ ವಿಳಾಸದಲ್ಲಿ 06.03.2021 ಬೆಳಗ್ಗೆ 9.30 ನಂತರ ನಡೆಸಲಾಗುವುದು.

ದಾಖಲೆ ಪರಿಶೀಲನೆಗಾಗಿ ದಿನಾಂಕ 05.03.2021 ರಂದು ಬೆಳಗ್ಗೆ 9.30 ಗಂಟೆಯೊಳಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು/ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ವರದಿ ಮಾಡಿಕೊಳ್ಳುವುದು.

ಅಭ್ಯರ್ಥಿಗಳು ಆಯ್ಕೆ ಸಮಿತಿಯ ಮುಂದೆ ಸಂದರ್ಶನಕ್ಕೆ ಹಾಜರಾಗುವಾಗ ಮೂಲ ದಾಖಲೆಗಳ ಜೊತೆಗೆ ಗೆಜೆಟೆಡ್ ಅಧಿಕಾರಿಯಿಂದ ಸಹಿ ಮಾಡಿಸಲಾದ 2ಸೆಟ್ ದಾಖಲೆಗಳು, 2 ಪಾಸ್ ಪೋರ್ಟ್ ಸೈಜ್ ಫೋಟೋಗ್ರಾಫ್ ಮತ್ತು ವಿಶೇಷಾಧಿಕಾರಿಯವರ ಹೆಸರಿನಲ್ಲಿ ಪಾವತಿಯಾಗುವಂತೆ ರೂ.2000/- ಡಿಡಿ ಯೊಂದಿ ಹಾಜರಾಗಬೇಕು.

ರಾಜ್ಯ ಸರಕಾರದ ಮೀಸಲಾತಿ ನೀತಿಯನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು. ಮೀಸಲಾತಿಯನ್ನು ಬಯಸುವ ಅಭ್ಯರ್ಥಿಗಳು ಅರ್ಜಿಯ ಜೊತೆಗೆ ಇತ್ತೀಚೆಗೆ ಪಡೆದ ಮೀಸಲಾತಿ ಪ್ರಮಾಣ ಪತ್ರ, ಮೀಸಲಾತಿಯೊಂದಿಗೆ ಆದಾಯ ಸಿಂಧುತ್ವ ಪ್ರಮಾಣಪತ್ರ ಸಲ್ಲಿಸಬೇಕು.

ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೇರಿದ ಅಭ್ಯರ್ಥಿಗಳನ್ನು ಸರಕಾರಿ ಆದೇಶ ಸಂಖ್ಯೆ ಡಿಪಿಎಆರ್ 43 ಹೆಚ್ ಸಿ 2013 ದಿನಾಂಕ 29.01.2014 ರಲ್ಲಿ ನಿರ್ದಿಷ್ಟ ಪಡಿಸಿದಂತೆ ಸಂಬಂಧಪಟ್ಟ ಕಂದಾಯ ಉಪವಿಭಾಗದ ಸಹಾಯಕ ಆಯುಕ್ತರಿಂದ ನೀಡಲ್ಪಟ್ಟ ಅರ್ಹತಾ ಪ್ರಮಾಣ ಪತ್ರವನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು “ಸ್ಥಳೀಯ” ಎಂದು ಪರಿಗಣಿಸಲಾಗುವುದು.

ಎಲ್ಲ ನೇಮಕಾತಿಯು ತಾತ್ಕಾಲಿಕವಾಗಿದ್ದು, ರಾಜ್ಯ ವೈದ್ಯಕೀಯ ಆಯೋಗದಿಂದ ಅನುಮತಿ ಷರತ್ತಿಗೆ ಒಳಪಟ್ಟಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ , ಅರ್ಹತೆ, ವಿದ್ಯಾರ್ಹತೆ ಗಳು, ಅನುಭವ ಮತ್ತು ಮೀಸಲಾತಿ ವಿವರಗಳು ಹಾಗೂ ಇತರೆ ವಿವರಗಳನ್ನು ವೆಬ್‌ಸೈಟ್‌ www.karunadu.gov.in/dmekarnataka ಅಥವಾ http://medicaleducation.kar.nic.in ಗೆ ಭೇಟಿ ನೀಡಿ

Leave a Comment