Indian Navy Recruitment 2024: ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. 254 ಶಾರ್ಟ್ ಸರ್ವಿಸ್ ಕಮಿಷನ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಶಾರ್ಟ್ ಸರ್ವಿಸ್ ಕಮಿಷನ್ ಆಫೀಸರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುವವರು ಈ ಉದ್ಯೋಗಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 10-Mar-2024 ರಂದು ಅಥವಾ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 24-02-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-03-2024
ಹುದ್ದೆಗಳ ವಿವರ:
ಜನರಲ್ ಸರ್ವಿಸ್-50 ಹುದ್ದೆಗಳು
ಪೈಲಟ್ – 20 ಹುದ್ದೆಗಳು
ನವಲ್ ಏರ್ ಒಪರೇಷನ್ಸ್ ಆಫೀಸರ್ – 18 ಹುದ್ದೆಗಳು
ಏರ್ ಟ್ರಾಫಿಕ್ ಕಂಟ್ರೋಲರ್ – 8 ಹುದ್ದೆಗಳು
ಲಾಜಿಸ್ಟಿಕ್ಸ್ – 30 ಹುದ್ದೆಗಳು
ನವಲ್ ಅರ್ಮಾನೆಂಟ್ ಇನ್ಸ್‌ಪ್ಕ್ಟೋರೇಟ್ (NAIC) – 10 ಹುದ್ದೆಗಳು
ಎಜುಕೇಶನ್ – 18 ಹುದ್ದೆಗಳು
ಇಂಜಿನಿಯರಿಂಗ್ ಬ್ರಾಂಚ್ (ಜನರಲ್ ಸರ್ವಿಸ್ (ಜಿಎಸ್))- 30 ಹುದ್ದೆಗಳು
ಎಲೆಕ್ಟ್ರಿಯಲ್ ಬ್ರಾಚ್ (ಜನರಲ್ ಸರ್ವಿಸ್ (ಜಿಎಸ್)) – 50 ಹುದ್ದೆಗಳು
ನವಲ್ ಕಂಸ್ಟ್ರಕ್ಟರ್ – 20 ಹುದ್ದೆಗಳು
ಒಟ್ಟು 254 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ: ಜನರಲ್ ಸರ್ವಿಸ್, ಪೈಲಟ್, ನವಲ್ ಏರ್ ಒಪರೇಷನ್ಸ್ ಆಫೀಸರ್,ಏರ್ ಟ್ರಾಫಿಕ್ ಕಂಟ್ರೋಲರ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿಟೆಕ್ ತೇರ್ಗಡೆ ಹೊಂದಿರಬೇಕು.
ಲಾಜಿಸ್ಟಿಕ್ಸ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಸ್ಸಿ, ಬಿಕಾಂ ಅಥವಾ ಬಿಟೆಕ್, ಎಂಸಿಎ, ಎಂ.ಎಸ್ಸಿ, ಎಂಬಿಎ, ಪೋಸ್ಟ್ ಗ್ರಾಜ್ಯುಯೇಷನ್ ಹೊಂದಿರಬೇಕು.
ನವಲ್ ಅರ್ಮಾಮೆಂಟ್ ಇನ್ಸ್‌ಪೆಕ್ಟೊರೇಟ್ ಕ್ಯಾಡರ್ (NAIC) ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ, ಅಥವಾ ಬಿ.ಟೆಕ್ ವಿದ್ಯಾಭ್ಯಾಸ ಮಾಡಿರಬೇಕು.
ಎಜುಕೇಷನ್- ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಸ್ಸಿ, ಬಿಇ ಅಥವಾ ಬಿಟೆಕ್, ಎಂಎಸ್ಸಿ, ಎಂ.ಟೆಕ್ ಈ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಇಂಜಿನಿಯರಿಂಗ್ ಬ್ರಾಂಚ್ (GS), ಎಲೆಕ್ಟ್ರಿಕಲ್ ಬ್ರಾಂಚ್ (GS), ನವಲ್ ಕಂಸ್ಟ್ರಕ್ಟರ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಎಸ್ಸಿ, ಬಿಇ ಅಥವಾ ಬಿಟೆಕ್, ಎಂ.ಎಸ್ಸಿ, ಎಂ.ಟೆಕ್ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ: ಭಾರತೀಯ ನೌಕಾಪಡೆಯ ನಿಯಮಾನುಸಾರ ವಯೋಮಿತಿ ನಿಗದಿಪಡಿಸಲಾಗಿದೆ. ಹಾಗೆನೇ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಶುಲ್ಕ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ