IGCAR Recruitment 2024: ಇಂದಿರಾ ಗಾಂಧಿ ಸೆಂಟರ್ ಫಾರ್ ಆಟೋಮಿಕ್ ರಿಸರ್ಚ್ (IGCAR) ಕಲ್ಪಕಂ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 91 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಸೈಂಟಿಫಿಕ್ ಆಫೀಸರ್, ಟೆಕ್ನಿಕಲ್ ಆಫೀಸರ್, ಸೈಂಟಿಫಿಕ್ ಅಸಿಸ್ಟಂಟ್, ನರ್ಸ್ ಮತ್ತು ಇತರೆ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿಲಾಗಿದೆ. ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ದಿ. 30-06-2024 (ರಾತ್ರಿ 11.59) ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ
ಪ್ರಮುಖ ದಿನಾಂಕಗಳು;
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01-06-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2024
ಹುದ್ದೆಯ ವಿವರ ಇಲ್ಲಿದೆ;
ಹುದ್ದೆ ಹೆಸರು ಮತ್ತು ಸಂಖ್ಯೆ: ಸೈಂಟಿಫಿಕ್ ಆಫೀಸರ್ 34 ಹುದ್ದೆಗಳು
ಟೆಕ್ನಿಕಲ್ ಆಫೀಸರ್ 01 ಹುದ್ದೆ
ಸೈಂಟಿಫಿಕ್ ಅಸಿಸ್ಟಂಟ್ 12 ಹುದ್ದೆಗಳು
ನರ್ಸ್ 27 ಹುದ್ದೆಗಳು
ಫಾರ್ಮಾಸಿಸ್ಟ್ 14 ಹುದ್ದೆಗಳು
ಟೆಕ್ನೀಷಿಯನ್ 03 ಹುದ್ದೆಗಳು
ಒಟ್ಟು 91 ಹುದ್ದೆಗಳು
ವಿದ್ಯಾರ್ಹತೆ:
ಸೈಂಟಿಫಿಕ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಬಿಎಸ್ / ಪಿಜಿ ಡಿಪ್ಲೊಮ (ಸಂಬಂಧಿತ ವಿಷಯಗಳಲ್ಲಿ) ಮಾಡಿರಬೇಕು.
ಟೆಕ್ನಿಕಲ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಜಿ ಡಿಗ್ರಿ (ಫಿಸಿಯೋಥೆರಫಿ) ತೇರ್ಗಡೆ ಹೊಂದಿರಬೇಕು.
ಸೈಂಟಿಫಿಕ್ ಅಸಿಸ್ಟಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಎಂಎಲ್‌ಟಿ/ ಬಿಎಸ್ಸಿ / ಪಿಜಿ ಡಿಗ್ರಿ (ಮೆಡಿಕಲ್ ಸೋಷಿಯಲ್ ವರ್ಕ್) ಮಾಡಿರಬೇಕು.
ನರ್ಸ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12th ಪಾಸ್ / ಡಿಪ್ಲೊಮ (ಜಿಎನ್‌ಎಂ)/ ಬಿಎಸ್ಸಿ (ನರ್ಸಿಂಗ್) ಮಾಡಿರಬೇಕು.
ಫಾರ್ಮಾಸಿಸ್ಟ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10+2 / ಡಿಪ್ಲೊಮ (ಫಾರ್ಮಸಿ) ತೇರ್ಗಡೆ ಹೊಂದಿರಬೇಕು.
ಟೆಕ್ನೀಷಿಯನ್ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೆಚ್‌ಎಸ್‌ಸಿ (ಸೈನ್ಸ್ ) ಮಾಡಿರಬೇಕು.
ವಯೋಮಿತಿ: ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ 50, 30, 30, 30, 25 ವರಷಗಳ ವಯೋಮಿತಿಯನ್ನು ಮೀರಿರಬಾರದು.
ಅರ್ಜಿ ಶುಲ್ಕ: ಹುದ್ದೆಗೆ ತಕ್ಕ ಹಾಗೆ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಸೈಂಟಿಫಿಕ್ ಆಫೀಸರ್ ಹುದ್ದೆಗೆ ಅರ್ಜಿ ಶುಲ್ಕ ರೂ.300, ಟೆಕ್ನಿಕಲ್ ಆಫೀಸರ್, ಸೈಂಟಿಫಿಕ್ ಅಸಿಸ್ಟಂಟ್, ನರ್ಸ್ ಹುದ್ದೆಗಳಿಗೆ ರೂ.200, ಫಾರ್ಮಾಸಿಸ್ಟ್ ಮತ್ತು ಟೆಕ್ನೀಷಿಯನ್ ಹುದ್ದೆಗಳಿಗೆ ರೂ.100 ಅರ್ಜಿ ಶುಲ್ಕ ವಿಧಿಸಲಾಗಿದೆ. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
ಆಯ್ಕೆ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ / ಸಂದರ್ಶನ / ದಾಖಲೆಗಳ ಪರಿಶೀಲನೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ