Railway Recruitment 2024: ರೈಲ್ವೆಯಲ್ಲಿ ಭರ್ಜರಿ ನೇಮಕಾತಿ; ಲೋಕೋ ಪೈಲಟ್-ಟ್ರೈನ್‌ ಮ್ಯಾನೇಜರ್‌ ಹುದ್ದೆ; ಹೆಚ್ಚಿನ ವಿವರ ಇಲ್ಲಿದೆ

Advertisements

RRC SER Recruitment 2024: ಆಗ್ನೇಯ ರೈಲ್ವೆಯು ಜಿಡಿಸಿಇ ಕೋಟಾದ ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 1202 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಹಾಯಕ ಲೋಕೋ ಪೈಲಟ್‌ ಮತ್ತು ಟ್ರೈನ್‌ ಮ್ಯಾನೇಜರ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಜೂನ್‌ 12,2024 ಕೊನೆಯ ದಿನಾಂಕವಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಗ್ನೇಯ ರೈಲ್ವೆಯ ಸಾಮಾನ್ಯ ರೈಲ್ವೆ ಉದ್ಯೋಗಿಗಳು ಮಾತ್ರ ಜಿಡಿಸಿಇ ಕೋಟಾದ ಅಡಿಯಲ್ಲಿ ಈ ಹುದ್ದೆಗಳನ್ನು ಅರ್ಜಿ ಸಲ್ಲಿಸಬಹುದೆಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಪ್ರಮುಖ ದಿನಾಂಕಗಳು;
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 13-05-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-06-2024

ಹುದ್ದೆಯ ವಿವರ ಇಲ್ಲಿದೆ;
ಸಹಾಯಕ ಲೋಕೋಪೈಲೆಟ್‌ (ಎಎಲ್‌ಪಿ)-827 ಹುದ್ದೆಗಳು ಖಾಲಿ ಇದೆ
ಟ್ರೈನ್ ಮ್ಯಾನೇಜರ್‌ – 375 ಹುದ್ದೆಗಳು ಖಾಲಿ ಇದೆ.

ಶೈಕ್ಷಣಿಕ ಅರ್ಹತೆ: ಸಹಾಯಕ ಲೋಕೋಪೈಲಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ತೇರ್ಗಡೆ ಹೊಂದಿರಬೇಕು. ಅಷ್ಟು ಮಾತ್ರವಲ್ಲದೇ ಸಂಬಂಧಿತ ಕ್ಷೇತ್ರಕ್ಕೆ ಕುರಿತಂತೆ ಐಟಿಐ ಪ್ರಮಾಣ ಪತ್ರವನ್ನು ಪಡೆದಿರಬೇಕು.
ಟ್ರೈನಿ ಮ್ಯಾನೇಜರ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವೀಧರರಾಗಿರಬೇಕು.

ವಯೋಮಿತಿ: ಮೇಲ್ಕಂಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ. ಗರಿಷ್ಠ 42 ವರ್ಷ ಮೀರಿರಬಾರದು. ಒಬಿಸಿ/ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಯನ್ನು ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಸಿಬಿಟಿ/ಆಲ್ಟಿಟ್ಯೂಡ್‌ ಟೆಸ್ಟ್‌/ಡಾಕ್ಯುಮೆಂಟ್‌ ವೆರಿಫಿಕೇಶನ್‌/ ಮೆಡಿಕಲ್‌ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ RRC/SER ವೆಬ್‌ಸೈಟ್ www.rrcser.co.in ಗೆ ಹೋಗಿ ಮತ್ತು “GDCE- 2024 ONLINE/E-ಅಪ್ಲಿಕೇಶನ್” ಗಾಗಿ ಉಲ್ಲೇಖಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ.
ನಂತರ “ಹೊಸ ನೋಂದಣಿ” ಮೇಲೆ ಕ್ಲಿಕ್ ಮಾಡಿ.
ಮೂಲ ವಿವರಗಳನ್ನು ಭರ್ತಿ ಮಾಡಿ ಅಂದರೆ ಹೆಸರು, ಸಮುದಾಯ, DOB, ಉದ್ಯೋಗಿ ಐಡಿ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಹಾಕಿ.
ಅನಂತರ ಅಭ್ಯರ್ಥಿಗೆ ನೋಂದಣಿ ಸಂಖ್ಯೆ ದೊರಕುತ್ತದೆ. ಮತ್ತು ಅದೇ ಸಂದೇಶವನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
ನಂತರ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ಅನಂತರ ಸಬ್‌ಮಿಟ್‌ ಬಟನ್‌ ಕ್ಲಿಕ್‌ ಮಾಡಿ.