RRB ALP Recruitment 2024: ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು 5696 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಅಸಿಸ್ಟೆಂಟ್ ಲೊಕೊ ಪೈಲೆಟ್ (Recruitment of Assistant Loco Pilot (ALP) ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಜನವರಿ 20, 2023 ರಿಂದ ಫೆಬ್ರವರಿ 20ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಸಕ್ತರು indianrailways.gov.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಭಾರತೀಯ ರೈಲ್ವೆಯಲ್ಲಿರುವ ಸುಮಾರು 5,696 ಅಸಿಸ್ಟೆಂಟ್ ಲೊಕೊ ಪೈಲೆಟ್ ಹುದ್ದೆಗಳನ್ನು ಭರ್ತಿ ಮಾಡಲಿದೆ. ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿಸಲ್ಲಿಸಲು ಅವಕಾಶವಿದೆ. ಆರ್‌ಆರ್‌ಬಿ ವೆಬ್‌ಸೈಟ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಸೇರಿದಂತೆ ವಿವಿಧ ಆರ್‌ಆರ್‌ಬಿ ವೆಬ್‌ಸೈಟ್‌ಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಜನವರಿ 20, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 20, 2023
ಆರ್‌ಆರ್‌ಬಿ ಎಎಲ್‌ಪಿ ನೇಮಕ: ವಿದ್ಯಾರ್ಹತೆ ಏನಿರಬೇಕು?
ಅಸಿಸ್ಟೆಂಟ್ ಲೊಕೊ ಪೈಲೆಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ/10ನೇ ತರಗತಿ ಉತ್ತೀರ್ಣರಾಗಿರಬೇಕು. ಅಂಗೀಕೃತ ಸಂಸ್ಥೆಗಳಲ್ಲಿ ಐಟಿಐ ಓದಿರಬೇಕು. (Fitter, Electrician, Instrument Mechanic, Millwright/Maintenance Mechanic, Mechanic (Radio/TV), Electronics Mechanic, Mechanic (Motor Vehicle), Wireman, Tractor Mechanic, Armature and coil winder, Mechnical (Diesal), Heat Engine, Turner, Machinist, Refrigeration and Air Conditioning Mechanic ವಿಷಯಗಳಲ್ಲಿ ಐಟಿಐ ಓದಿರುವವರು ಅರ್ಜಿ ಸಲ್ಲಿಸಬಹುದು)
ಅಥವಾ
10ನೇ ತರಗತಿ ಉತ್ತೀರ್ಣರಾಗಿರಬೇಕು. ಮೂರು ವರ್ಷದ ಡಿಪ್ಲೊಮಾವನ್ನು ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/ ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಓದಿರುವವರು ಅರ್ಜಿ ಸಲ್ಲಿಸಬಹುದು.
RRB ALP Recruitment 2024: ವಯೋಮಿತಿ ಏನು?
ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
RRB ALP Recruitment 2024: ಆರ್‌ಆರ್‌ಬಿ ಎಎಲ್‌ಪಿ ಹುದ್ದೆಗಳಿಗೆ ವೇತನ ಎಷ್ಟು?
ಏಳನೇ ವೇತನ ಆಯೋಗದ ಲೆವೆಲ್ 2 ಶಿಫಾರಸ್ಸಿನ ಅನ್ವಯ ವೇತನ ಇರುತ್ತದೆ. ಬೇಸಿಕ್ ವೇತನ 19900 ರೂಪಾಯಿ ಇರುತ್ತದೆ. ಡಿಎ, ಎಚ್‌ಆರ್‌ಎ, ನೈಟ್ ಶಿಫ್ಟ್ ಅಲೊವೆನ್ಸ್ ಸೇರಿದಂತೆ ಹಲವು ಸೌಕರ್ಯ ಇರುತ್ತದೆ. ಒಟ್ಟಾರೆ ವೇತನ 25-35 ಸಾವಿರ ರೂ.ವರೆಗೆ ಇರುತ್ತದೆ. ವೇತನ ಶ್ರೇಣಿ: 19900- 63200 ರೂಪಾಯಿ.
RRB ALP Recruitment 2024: ಅರ್ಜಿ ಶುಲ್ಕ ಎಷ್ಟು?
ಎಸ್ಸಿ, ಎಸ್ಟಿ, ಎಕ್ಸ್ ಸರ್ವೀಸ್ ಮ್ಯಾನ್, ಮಹಿಳಾ, ಟ್ರಾನ್ಸೆಂಜರ್, ಮೈನಾರಿಟಿ, ಇಬಿಸಿ ಅಭ್ಯರ್ಥಿಗಳು 250 ರೂ. ಮತ್ತು ಉಳಿದ ಎಲ್ಲಾ ಅಭ್ಯರ್ಥಿಗಳು 500 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಲು ಅವಕಾಶವಿದೆ.
RRB ALP Recruitment 2024: ಕರ್ನಾಟಕದಲ್ಲಿ ಎಷ್ಟು ಹುದ್ದೆಗಳಿವೆ?
ಅಹಮದಾಬಾದ್, ಅಜ್ಮೆರ್, ಬೆಂಗಳೂರು, ಭೋಪಾಲ್, ಭುವನೇಶ್ವರ, ಬಿಲಾಸಪುರ, ಚೆನ್ನೈ, ಗೋರಕ್‌ಪುರ, ಗುವಾಹಟಿ, ಜಮ್ಮು, ಕೊಲ್ಕಾತ್ತಾ ಸೇರಿದಂತೆ ವಿವಿಧ ಆರ್‌ಆರ್‌ಬಿಗಳಿಗೆ ಹುದ್ದೆ ಹಂಚಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ 219+65 ಹುದ್ದೆಗಳಿವೆ.
ಆರ್‌ಆರ್‌ಬಿ ವಿವರವಾದ ಅಧಿಸೂಚನೆ ಸದ್ಯದಲ್ಲಿಯೇ ಪ್ರಕಟಗೊಳ್ಳಲಿದೆ.
ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿ ಪಡೆಯಲು indianrailways.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಆರ್‌ಆರ್‌ಬಿ ಮತ್ತು ಇತರೆ ನೇಮಕಾತಿಗಳ ವಿವರ ಪಡೆಯಲು, ಆರ್‌ಆರ್‌ಬಿ ಎಎಲ್‌ಪಿ ನೇಮಕಾತಿ ವಿಧಾನ, ಸಿಲೇಬಸ್ ಸೇರಿದಂತೆ ಹೆಚ್ಚಿನ ವಿವರಗಳು ಸದ್ಯದಲ್ಲಿಯೇ sarakarijobs.com ನಲ್ಲಿ ಪ್ರಕಟಗೊಳ್ಳಲಿದೆ.