Indian Post Payments Bank Recruitment 2024: ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದ್ದು, ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೂಲಕ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುವುದು. ಒಟ್ಟು 47 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು.
ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇಲ್ಸ್ ಮತ್ತು ಅಪರೇಷನ್ಸ್ ವಿಭಾಗದಲ್ಲಿ ಈ ಪೋಸ್ಟ್‌ಗಳನ್ನು ಮಾಡಲಿದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಪ್ರಮುಖ ದಿನಾಂಕಗಳು;
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 15-03-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-04-2024 (11.59 ಗಂಟೆ ರಾತ್ರಿ ವರೆಗೆ)
ಅರ್ಜಿ ಪ್ರಿಂಟ್ ತೆಗೆದುಕೊಳ್ಳುವ ಕೊನೆಯ ದಿನಾಂಕ: 20-04-2024 (11.59ಗಂಟೆ ರಾತ್ರಿ ವರೆಗೆ)
ಹುದ್ದೆ ವಿವಿರ ಇಲ್ಲಿದೆ;
ಹುದ್ದೆ ಹೆಸರು: ಅಂಚೆ ವೃತ್ತದ ಎಕ್ಸಿಕ್ಯೂಟಿವ್
ಹುದ್ದೆಗಳ ಒಟ್ಟು ಸಂಖ್ಯೆ: 47
ಹುದ್ದೆಗಳ ವಿಂಗಡಣೆ;
ಸಾಮಾನ್ಯ ವರ್ಗ – 21 ಹುದ್ದೆಗಳು
ಆರ್ಥಿಕ ಹಿಂದುಳಿದವರಿಗೆ -04 ಹುದ್ದೆಗಳು
ಒಬಿಸಿ ಅಭ್ಯರ್ಥಿಗಳಿಗೆ 12 ಹುದ್ದೆಗಳು
ಪರಿಶಿಷ್ಟ ಜಾತಿ – 07 ಹುದ್ದೆಗಳು
ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ – 3 ಹುದ್ದೆಗಳು
ಒಟ್ಟು 47 ಹುದ್ದೆಗಳು ಖಾಲಿ ಇದೆ.
ಕರ್ನಾಟಕದಲ್ಲಿ ಐಪಿಪಿಬಿ ಎಕ್ಸಿಕ್ಯೂಟಿವ್ ಹುದ್ದೆ ಸಂಖ್ಯೆ – 01 ಹುದ್ದೆ
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
ವಿದ್ಯಾರ್ಹತೆ: ಪದವಿ ಪಾಸ್ ಆಗಿರಬೇಕು. ಎಂಬಿಎ ಇನ್ ಸೇಲ್ಸ್ ಅಥವಾ ಮಾರ್ಕೆಟಿಂಗ್ ಓದಿದವರಿಗೆ ಮೊದಲ ಆದ್ಯತೆ. ಸೇಲ್ಸ್/ ಅಪರೇಷನ್ಸ್ ಇನ್ ಫೈನಾನ್ಸ್ ನಲ್ಲಿ ಕಾರ್ಯಾರ್ನುಭವ ಇದ್ದರೆ ಹೆಚ್ಚಿನ ಆದ್ಯತೆ. ಈ ಹುದ್ದೆಗೆ ಫ್ರೆಶರ್ಸ್‌ಗಳು ಅರ್ಜಿ ಹಾಕಬಹುದು.
ಆಯ್ಕೆ ವಿಧಾನ: ಪದವಿ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಲಾಗುವುದು, ನಂತರ ಗುಂಪು ಚರ್ಚೆ, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ವೇತನ: ಈ ಮೇಲೆ ತಿಳಿಸಿದ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.30000 ವೇತನ ನೀಡಲಾಗುವುದು.
ಅರ್ಜಿ ಶುಲ್ಕ: ಎಸ್‌ಸಿ/ಎಸ್‌ಟಿ/ಪಿಡಬ್ಲೂಡಿ ಅಭ್ಯರ್ಥಿಗಳಿಗೆ -150 ರೂ., ಉಳಿದ ಎಲ್ಲರಿಗೂ ರೂ.750 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿವುದು ಹೇಗೆ?
ಅಭ್ಯರ್ಥಿಗಳು ವೆಬ್ ವಿಳಾಸ https://ippbonline.com ಗೆ ಭೇಟಿ ನೀಡಬೇಕು.
ಅಲ್ಲಿ careers ಎಂಬ ಆಪ್ಶನ್ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
ಆಗ current openings ಎಂಬ ಮೆನು ಕಾಣ ಸಿಗುತ್ತದೆ
ಅಲ್ಲಿ Recruitment of 47 Circle Based Executive on Contract Basis ಎಂದಿರುತ್ತದೆ. ಅದಕ್ಕೆ ಕ್ಲಿಕ್ ಮಾಡಿದರೆ ಅರ್ಜಿ ಲಿಂಕ್, ಹುದ್ದೆಯ ವಿವರ, ನೇಮಕ ಅಧಿಸೂಚನೆ ದೊರಕುತ್ತದೆ
ನಂತರ Apply Online ಕ್ಲಿಕ್ ಮಾಡಿ
ಅನಂತರ click here for new registration ಎಂಬಲ್ಲಿ ಕ್ಲಿಕ್ ಮಾಡಿ
ರಿಜಿಸ್ಟ್ರೇಷನ್ ಮಾಡಿ ಅನಂತರ ಅರ್ಜಿ ಸಲ್ಲಿಸಿ
ನೋಟಿಫಿಕೇಶನ್ ಲಿಂಕ್ ಇಲ್ಲಿದೆ. ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ.