ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ: ಕೂಡಲೇ ಅರ್ಜಿ ಸಲ್ಲಿಸಿ

Advertisements

ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ ಮ್ಯಾನೇಜರ್ ಹಾಗೂ ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಆಸಕ್ತರು ಈ ಕೆಳಗಿನ ವಿವರಗಳ ಮೂಲಕ ಹೆಚ್ಚಿನ ಮಾಹಿತಿ ತಿಳಿಯಬಹುದು.

ಹುದ್ದೆಯ ಹೆಸರು : ಮ್ಯಾನೇಜರ್ (ಇನ್ ಪೋರ್ಮೇಶನ್ ಸೆಕ್ಯುರಿಟಿ) ಹಾಗೂ ಸೀನಿಯರ್ ಮ್ಯಾನೇಜರ್ (ಇನ್ ಫೋರ್ಮೇಶನ್ ಅಡಿಟ್)

ಹುದ್ದೆಯ ಸಂಖ್ಯೆ : 10

ಪ್ರಮುಖ ದಿನಾಂಕಗಳು
ಅರ್ಜಿ ಶುಲ್ಕ ಸಲ್ಲಿಸುವ ದಿನಾಂಕ 08.02.2021 ರಿಂದ 20.02.2021ರ ಒಳಗೆ

ಅಪ್ಲಿಕೇಶನ್ ಸಲ್ಲಿಸಲು ಪ್ರಾರಂಭವಾದ ದಿನಾಂಕ 08-02-2021

ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ 20,ಫೆಬ್ರವರಿ 2021

ವಯೋಮಿತಿ
ಮ್ಯಾನೇಜರ್ ( ಇನ್ ಫೋರ್ ಮೇಶನ್ ಸೆಕ್ಯುರಿಟಿ) ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 25 ಹಾಗೂ ಗರಿಷ್ಠ 35 ವಯಸ್ಸಾಗಿರಬೇಕು.

ಸೀನಿಯರ್ ಮ್ಯಾನೇಜರ್( ಇನ್ ಫೋರ್ ಮೇಶನ್ ಸೆಕ್ಯುರಿಟಿ) ಅರ್ಜಿ ಸಲ್ಲಿಸುವ
ಅಭ್ಯರ್ಥಿಗೆ ಕನಿಷ್ಠ 25 ಹಾಗೂ ಗರಿಷ್ಠ 40 ವಯಸ್ಸಾಗಿರಬೇಕು.

ಮ್ಯಾನೇಜರ್ (ಇನ್ ಫೋರ್ಮೇಶನ್ ಸಿಸ್ಟಮ್ ಅಡಿಟ್) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 25 ಹಾಗೂ ಗರಿಷ್ಠ 35 ವಯಸ್ಸಾಗಿರಬೇಕು.

ಸೀನಿಯರ್ ಮ್ಯಾನೇಜರ್ ( ಇನ್ ಫೋರ್ಮೇಶನ್ ಸಿಸ್ಟಮದ ಅಡಿಟ್)ಅರ್ಜಿ
ಅಭ್ಯರ್ಥಿಗಳು ಕನಿಷ್ಠ 25 ಹಾಗೂ ಗರಿಷ್ಠ 40 ವಯಸ್ಸಾಗಿರಬೇಕು.

ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡ ದ ಅಭ್ಯರ್ಥಿಗಳಿಗೆ ೫ ವರ್ಷಗಳ ಸಡಿಲಿಕೆ,ಇತರೆ ಹಿಂದುಳಿದ ವರ್ಗಗಳಿಗೆ ೩ ವರ್ಷ,ಪಿಡ್ಬ್ಲ್ಯುಡಿ ೧೦ ವರ್ಷಗಳ ಸಡಿಲಿಕೆ ನೀಡಲಾಗಿದೆ.

ವಿದ್ಯಾರ್ಹತೆ

ಬಿಇ/ಬಿಟೆಕ್ ಡಿಗ್ರಿ ಅಥವಾ ಪೋಸ್ಟ್ ಗ್ರಾಜ್ಯುಯೇಟ್ ಡಿಗ್ರಿ ಇನ್ ಕಂಪ್ಯೂಟರ್ ಸೈನ್ಸ್/ಇಂಜಿನಿಯರಿಂಗ್/ಐಟಿ/ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್/ಇನ್ ಫೋರ್ಮೇಶನ್ ಸೆಕ್ಯುರಿಟಿ/ಸೈಬರ್ ಸೆಕ್ಯುರಿಟಿ ಯನ್ನು 60% ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.

ಅರ್ಜಿ ಶುಲ್ಕ

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕ್ಕೆ ಸೇರಿದ ಅಭ್ಯರ್ಥಿಗಳು ರೂ. ೧೦೦ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಉಳಿದ ಎಲ್ಲರಿಗೂ (ಒಬಿಸಿ/ಇಡ್ಬ್ಯುಸಿ) ಸೇರಿದಂತೆ ರೂ.೫೦೦ ರೂ ಶುಲ್ಕ ಪಾವತಿಸಬೇಕಾಗುತ್ತದೆ.

ಒಬ್ಬ ಅಭ್ಯರ್ಥಿಯು ಎಷ್ಟುಬೇಕಾದರೂ ಪೋಸ್ಟ್ ಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕವು ಪ್ರತಿಯೊಂದು ಹುದ್ದೆಗೆ ಒಂದೊಂದಾಗಿ ಪಾವತಿಮಾಡಬೇಕಾಗುತ್ತದೆ.

ಅರ್ಜಿಯನ್ನು ಆನ್ ಲೈನ್ ಮುಖಾಂತರನೇ ಸಲ್ಲಿಸಬೇಕಾಗುತ್ತದೆ. ಬೇರೆ ಯಾವುದೇ ನಮೂನೆಯನ್ನು ಸ್ವೀಕರಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ.

ಅಭ್ಯರ್ಥಿಗಳು https://www.iob.in/ ಅಧಿಕೃತ ವೆಬ್ ಸೈಟ್ ಗೆ ಮಾಹಿತಿ ಪಡೆಯಬಹುದು.

Leave a Comment