Agniveer Jobs: ನೌಕಾಪಡೆ ಅಗ್ನಿವೀರರ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ

Advertisements

Indian Navy Agniveer SSR Recruitment 2024: ಕೇಂದ್ರ ಸರಕಾರಿ ರಕ್ಷಣಾ ಪಡೆಗಳಲ್ಲಿ ಒಂದಾದ ನೌಕಾಪಡೆಯಲ್ಲಿ ಉದ್ಯೋಗ ಬಯಸುವವರಿಗೆ ಇಲ್ಲಿದೆ ಬಂಪರ್‌ ಆಫರ್.‌ ಇಲ್ಲಿ ನೀವು ಉದ್ಯೋಗದ ಜೊತೆಗೆ ಪದವಿ ಶಿಕ್ಷಣವನ್ನು ಕೂಡಾ ಪಡೆಯಬಹದು. ಹೌದು, ಈ ಹುದ್ದೆಯ ಹೆಸರೇ ಅಗ್ನಿವೀರ್.‌ ನೀವೇನಾದರೂ ದ್ವಿತೀಯ ಪಿಯುಸಿ ಪಾಸಾಗಿದ್ದರೆ ಈ ಹುದ್ದೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ. ಅವಿವಾಹಿತ ಪುರುಷ ಮತ್ತು ಮಹಿಳೆಯರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಭಾರತೀಯ ನೌಕಾಪಡೆ ಅಗ್ನಿವೀರರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಇದು ನವೆಂಬರ್‌ 2024 ರ ಬ್ಯಾಚ್‌ನ ಹುದ್ದೆಯಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ನವೆಂಬರ್‌ ತಿಂಗಳ ಅಂತ್ಯಕ್ಕೆ ಆಯ್ಕೆ ಮಾಡಲಾಗುವುದು. ಹುದ್ದೆಯ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಪ್ರಮುಖ ದಿನಾಂಕಗಳು;
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 13-05-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-05-2024
ಲಿಖಿತ ಪರೀಕ್ಷೆ, ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ: ಅಕ್ಟೋಬರ್‌ನಲ್ಲಿ
ಮೆಡಿಕಲ್‌ ಟೆಸ್ಟ್‌ ಮತ್ತು ಚಿಲ್ಕಾದ ಐಎನ್‌ಎಸ್‌ ಘಟಕ ಸೇರುವ ದಿನಾಂಕ: ನವೆಂಬರ್‌ನಲ್ಲಿ

ಎಸ್‌ಎಸ್‌ಆರ್-ಸೀನಿಯರ್‌ ಸೆಕೆಂಡರಿ ಲೆವಲ್‌ ಹುದ್ದೆಗಳ ಭರ್ತಿ ನಡೆಯಲಿದ್ದು, ಹುದ್ದೆಗಳ ಸಂಖ್ಯೆಯನ್ನು ಮುಂದಿನ ದಿನಗಳಲ್ಲಿ ಪ್ರಕಟ ಮಾಡಲಾಗುವುದು.

ವಿದ್ಯಾರ್ಹತೆ: ಅಗ್ನಿವೀರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10+2 ಜೊತೆಗೆ ಗಣಿತ ಮತ್ತು ಭೌತಶಾಸ್ತ್ರವನ್ನು ಓದಿಕೊಂಡಿರಬೇಕು.
ಇದರ ಜೊತೆಗೆ ಅಭ್ಯರ್ಥಿಳು ಬಯೋಲಜಿ/ಕೆಮಿಸ್ಟ್ರಿ/ಕಂಪ್ಯೂಟರ್‌ ಸೈನ್ಸ್‌ ಈ ವಿಷಯದಲ್ಲಿ ಯಾವುದಾದರೂ ಒಂದನ್ನು ಓದಿರಬೇಕು.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 01 ನವೆಂಬರ್‌ 2003 – 30 ಎಪ್ರಿಲ್‌ 2007 ರ ನಡುವೆ ಜನಿಸಿರಬೇಕು. ಅಂದರೆ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು 17.6 ವರ್ಷ – 21 ವರ್ಷದೊಳಗಿನವರು ಆಗಿರಬೇಕು.

ವೇತನ: ವಾರ್ಷಿಕ ರೂ.4.76 ಲಕ್ಷದಿಂದ ನಾಲ್ಕನೇ ವರ್ಷದಲ್ಲಿ 6.72 ಲಕ್ಷದವರೆಗೆ ಅಭ್ಯರ್ಥಿಗಳಿಗೆ ವೇತನ ದೊರಕಲಿದೆ.
ಮೊದಲ ವರ್ಷ : ರೂ.30,000 ಜತೆಗೆ ಇತರೆ ಭತ್ಯೆಗಳು.
ಎರಡನೇ ವರ್ಷ : ರೂ.33,000 ಜತೆಗೆ ಇತರೆ ಭತ್ಯೆಗಳು.
ಮೂರನೇ ವರ್ಷ : ರೂ.36,500 ಜತೆಗೆ ಇತರೆ ಭತ್ಯೆಗಳು.
ನಾಲ್ಕನೇ ವರ್ಷ : ರೂ.40,000 ಜತೆಗೆ ಇತರೆ ಭತ್ಯೆಗಳು.
4 ವರ್ಷ ಸೇವೆಯ ಅವಧಿಯಾಗಿರುತ್ತದೆ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್‌ ಕ್ಲಿಕ್‌ ಮಾಡಿ