Navy Jobs: 4000 ವಿವಿಧ ಹುದ್ದೆಗಳಿಗೆ ಇಂಡಿಯನ್‌ ಮರ್ಚೆಂಟ್‌ ನೇವಿಯಲ್ಲಿ ಅರ್ಜಿ ಆಹ್ವಾನ; ಈಗಲೇ ಅಪ್ಲೈ ಮಾಡಿ

Advertisements

Indian Merchant Navy Recruitment 2024: ಇಂಡಿಯನ್‌ ಮರ್ಚೆಂಟ್‌ ನೇವಿಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಒಟ್ಟು 4000 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಲಾದ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಸೀಮನ್, ಮೆಸ್ ಬಾಯ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು 30-Apr-2024 ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ದಿನಾಂಕಗಳು;
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 11-03-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-04-2024
ಪರೀಕ್ಷಾ ದಿನಾಂಕ: ಮೇ, 2024
ಫಲಿತಾಂಶದ ತಾತ್ಕಾಲಿಕ ದಿನಾಂಕ: ಲಿಖಿತ ಪರೀಕ್ಷೆಯ 03 ದಿನಗಳ ನಂತರ
ಹುದ್ದೆಯ ವಿವರ ಇಲ್ಲಿದೆ;
ಸಂಸ್ಥೆಯ ಹೆಸರು ಮತ್ತು ಹೆಸರು: ಇಂಡಿಯನ್ ಮರ್ಚೆಂಟ್ ನೇವಿಯಲ್ಲಿ ಒಟ್ಟು 4000 ಹುದ್ದೆಗಳು ಖಾಲಿ ಇದ್ದು, ಸೀಮನ್, ಮೆಸ್‌ಬಾಯ್‌ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು. ಈ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ರೂ.38000-90000/- ವರೆಗೆ ವೇತನವಿರಲಿದೆ.

ಹುದ್ದೆ ಹೆಸರು ಮತ್ತು ಸಂಖ್ಯೆ;
ಡೆಕ್ ರೇಟಿಂಗ್ – 721 ಹುದ್ದೆಗಳು
ಎಂಜಿನ್ ರೇಟಿಂಗ್ – 236 ಹುದ್ದೆಗಳು
ಸೀಮನ್ – 1432 ಹುದ್ದೆಗಳು
ಎಲೆಕ್ಟ್ರಿಷಿಯನ್ – 408 ಹುದ್ದೆಗಳು
ವೆಲ್ಡರ್/ಸಹಾಯಕ – 78 ಹುದ್ದೆಗಳು
ಮೆಸ್ ಬಾಯ್ – 922 ಹುದ್ದೆಗಳು
ಕುಕ್ – 203 ಹುದ್ದೆಗಳು

ಶೈಕ್ಷಣಿಕ ಅರ್ಹತೆ:
ಡೆಕ್ ರೇಟಿಂಗ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12 ನೇ ತರಗತಿ ಪಾಸಾಗಿರಬೇಕು.
ಎಂಜಿನ್ ರೇಟಿಂಗ್, ಸೀಮನ್ ಹುದ್ದೆಗೆ ಅರ್ಜಿ ಸಲ್ಲಿಸುವವರು 10 ನೇ ತರಗತಿ ಪಾಸ್‌ ಮಾಡಿರಬೇಕು.
ಎಲೆಕ್ಟ್ರಿಷಿಯನ್ ಹುದ್ದೆಗೆ 10th ಎಲೆಕ್ಟ್ರಿಷಿಯನ್‌ನಲ್ಲಿ ಐಟಿಐ ಮಾಡಿರುವವರು ಅರ್ಜಿ ಸಲ್ಲಿಸಬಹುದು.
ವೆಲ್ಡರ್/ಸಹಾಯಕ ಹುದ್ದೆಗೆ 10th ಐಟಿಐ ಮಾಡಿರುವವರು ಅರ್ಜಿ ಸಲ್ಲಿಸಬೇಕು.
ಮೆಸ್ ಬಾಯ್, ಕುಕ್‌ ಹುದ್ದೆಗೆ 10 ನೇ ತರಗತಿ ಪಾಸ್‌ ಆದವರು ಅರ್ಜಿ ಸಲ್ಲಿಸಬೇಕು.

ವಯೋಮಿತಿ:
ಡೆಕ್ ರೇಟಿಂಗ್, ಎಂಜಿನ್ ರೇಟಿಂಗ್ , ಸೀಮನ್ 17.5-25 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರು.
ಎಲೆಕ್ಟ್ರಿಷಿಯನ್, ವೆಲ್ಡರ್/ಸಹಾಯಕ, ಮೆಸ್‌ ಬಾಯ್‌, ಕುಕ್‌ ಹುದ್ದೆಗೆ ಅರ್ಜಿ ಸಲ್ಲಿಸುವವರು 17.5-27 ವರ್ಷದೊಳಗಿನವರು ಅರ್ಜಿ ಸಲ್ಲಿಸಬೇಕು.

ವಯೋಮಿತಿ ಸಡಿಲಿಕೆ: ಭಾರತೀಯ ಮರ್ಚೆಂಟ್ ನೇವಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುವುದು.

ಅರ್ಜಿ ಶುಲ್ಕ: ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಲ್ಲಾ ಅಭ್ಯರ್ಥಿಗಳಿಗೆ ರೂ.100 ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಬೇಕು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವೇತನ:
ಡೆಕ್ ರೇಟಿಂಗ್ ಹುದ್ದೆಗೆ ರೂ.50000-85000/- ವೇತನವಿರಲಿದೆ.
ಇಂಜಿನ್ ರೇಟಿಂಗ್ ಹುದ್ದೆಗೆ ರೂ.40000-60000/- ವೇತನ ಸಿಗಲಿದೆ.
ಸೀಮನ್ ಹುದ್ದೆಗೆ ರೂ.38000-55000/- ವೇತನ ಸಿಗಲಿದೆ.
ಎಲೆಕ್ಟ್ರಿಷಿಯನ್ ಹುದ್ದೆಗೆ ರೂ.60000-90000/- ವೇತನ ಸಿಗಲಿದೆ.
ವೆಲ್ಡರ್/ಸಹಾಯಕ ಹುದ್ದೆಗೆ ಆಯ್ಕೆಯಾದವರಿಗೆ ರೂ.50000-85000/- ವೇತನ ಸಿಗಲಿದೆ.
ಮೆಸ್ ಬಾಯ್, ಕುಕ್‌ ಹುದ್ದೆಗೆ ಆಯ್ಕೆಯಾದವರಿಗೆ ರೂ.40000-60000/- ವೇತನ ಸಿಗಲಿದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು indianmerchantnavy.com ಗೆ ಭೇಟಿ ನೀಡಿ