Indian Coast Guard: ಭಾರತೀಯ ಕೋಸ್ಟ್‌ಗಾರ್ಡ್‌ನಲ್ಲಿ ಉದ್ಯೋಗಾವಕಾಶ; ಒಟ್ಟು 70 ಹುದ್ದೆ, ಮಾಸಿಕ ಭಾರೀ ವೇತನ

Advertisements

Indian Coast Guard: ಭಾರತೀಯ ಕೋಸ್ಟ್ ಗಾರ್ಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ದಿನಾಂಕ ಫೆ.15 ರಂದು ಪ್ರಾರಂಭವಾಗುತ್ತದೆ. ಭಾರತೀಯ ಕೋಸ್ಟ್‌ ಗಾರ್ಡ್‌ನಲ್ಲಿ ಸಹಾಯಕ ಕಮಾಂಡೆಂಟ್ ಹುದ್ದೆಯ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅಧಿಸೂಚನೆಯನ್ನು ಓದಿ ಉದ್ಯೋಗದ ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಹುದು.

ಭಾರತೀಯ ಕೋಸ್ಟ್ ಗಾರ್ಡ್, ಸಹಾಯಕ ಕಮಾಂಡೆಂಟ್ (‘ಎ’ ಗೆಜೆಟೆಡ್ ಅಧಿಕಾರಿ) ಹಾಗೂ ವಿವಿಧ ಶಾಖೆಗಳಿಗೆ ಭಾರತೀಯ ಪುರುಷ/ಮಹಿಳೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ‘ಆನ್‌ಲೈನ್’ ಮೂಲಕ ಅರ್ಜಿ ನೋಂದಣಿಯನ್ನು ಅಭ್ಯರ್ಥಿಗಳು ಕೋಸ್ಟ್ ಗಾರ್ಡ್ ನೇಮಕಾತಿ ವೆಬ್‌ಸೈಟ್ https://joinindiancoastguard.cdac.in ನಲ್ಲಿ ಮಾಡಬೇಕು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 15-02-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-02-2024

ಹುದ್ದೆಗಳ ವಿವರ
ಹುದ್ದೆಯ ಹೆಸರು: ಇಂಡಿಯನ್ ಕೋಸ್ಟ್ ಗಾರ್ಡ್ ಸಹಾಯಕ ಕಮಾಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ
ಹುದ್ದೆ ಸಂಖ್ಯೆ: ಭಾರತೀಯ ಕೋಸ್ಟ್‌ ಗಾರ್ಡ್‌ನಲ್ಲಿ 70 ಹುದ್ದೆಗಳು ಖಾಲಿ ಇದೆ.

ಹುದ್ದೆಗಳ ವಿವರ:
ಜನರಲ್‌ ಡ್ಯೂಟಿ(GD),ಟೆಕ್ನಿಕಲ್‌ (ಮೆಕ್ಯಾನಿಕಲ್‌),ಟೆಕ್ನಿಕಲ್(‌ ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್‌)

ಅರ್ಜಿ ಶುಲ್ಕ: ಇತರೆ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ : ರೂ. 300/-
SC/ST ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಇತರೆ ಅಭ್ಯರ್ಥಿಗಳು ಆನ್‌ಲೈನ್ ಮೋಡ್ ಮೂಲಕ ನೆಟ್ ಬ್ಯಾಂಕಿಂಗ್ ಅಥವಾ ವೀಸಾ / ಮಾಸ್ಟರ್ / ಮೆಸ್ಟ್ರೋ / ರುಪೇ ಕ್ರೆಡಿಟ್ / ಡೆಬಿಟ್ ಕಾರ್ಡ್ / ಯುಪಿಐ ಬಳಸಿ ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಯೋಮಿತಿ: ಈ ಮೇಲೆ ತಿಳಿಸಿದ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸಿನ ಮಿತಿ: 21 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ: 25 ವರ್ಷಗಳು.
ಅಭ್ಯರ್ಥಿಗಳು 01 ಜುಲೈ 1999 ರಿಂದ 30 ಜೂನ್ 2003 ರ ನಡುವೆ ಜನಿಸಿರಬೇಕು (ಎರಡೂ ದಿನಾಂಕಗಳನ್ನು ಒಳಗೊಂಡಂತೆ)
ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಬಡ್ತಿ ಮತ್ತು ವೇತನ: ರ್ಯಾಂಕ್‌ಗಳಿಗೆ ಬಡ್ತಿಗಳು ನಿಗದಿಪಡಿಸಿದ ಬಡ್ತಿ ಮಾನದಂಡಗಳ ಪ್ರಕಾರ ಇರುತ್ತದೆ. 7ನೇ CPC ಯ ಪ್ರಕಾರ ವಿವಿಧ ಹುದ್ದೆಗಳಿಗೆ ವೇತನ ಶ್ರೇಣಿಗಳು ಈ ಕೆಳಗೆ ನೀಡಲಾಗಿದೆ.
ಸಹಾಯಕ ಕಮಾಂಡೆಂಟ್- 56,100/-
ಉಪ ಕಮಾಂಡೆಂಟ್- 67,700/-
ಕಮಾಂಡೆಂಟ್ (ಜೆಜಿ)- 78,800/-
ಕಮಾಂಡೆಂಟ್- 1,23,100/-
ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್- 1,31,100/-
ಇನ್ಸ್ಪೆಕ್ಟರ್ ಜನರಲ್-‌ 1,44,200/-
ಹೆಚ್ಚುವರಿ ಮಹಾನಿರ್ದೇಶಕರು-1,82,200/-
ಮಹಾನಿರ್ದೇಶಕರು-2,25,000/-

ಆಯ್ಕೆ: ನಿರ್ದಿಷ್ಟ ಬ್ಯಾಚ್‌ಗೆ ಸಂಬಂಧಿಸಿದ ಅಭ್ಯರ್ಥಿಯ ಆಯ್ಕೆಯು ಆ ಬ್ಯಾಚ್‌ಗೆ ಮಾತ್ರ ಮಾನ್ಯವಾಗಿರುತ್ತದೆ. ಅಭ್ಯರ್ಥಿಗಳು ಹೊಸ ಬ್ಯಾಚ್‌ಗೆ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ SMB (ವಿಶೇಷ ವೈದ್ಯಕೀಯ ಮಂಡಳಿ) ಸೇರಿದಂತೆ ಆಯ್ಕೆ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ.

ಟ್ರೈನಿಂಗ್‌: ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು 44 ವಾರಗಳ ಕಾಲ ನೇವಲ್ ಓರಿಯಂಟೇಶನ್ ಕೋರ್ಸ್‌ಗೆ ಒಳಗಾಗಲು ಐಎನ್‌ಎ ಎಜಿಮಲಾದಲ್ಲಿ ವರದಿ ಮಾಡಬೇಕಾಗುತ್ತದೆ ಮತ್ತು ನಂತರ ಭಾರತೀಯ ನೌಕಾಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್‌ನ ವಿವಿಧ ತರಬೇತಿ ಸಂಸ್ಥೆಗಳು / ಘಟಕಗಳು / ಹಡಗುಗಳಲ್ಲಿ ತರಬೇತಿಯನ್ನು ಪಡೆಯಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ