ಕರಾವಳಿ ಪಡೆಯಲ್ಲಿ 350 ಹುದ್ದೆ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ ಓದಿರುವವರಿಗೆ ಭರ್ಜರಿ ಅವಕಾಶ

Advertisements

ದೇಶದ ಕರಾವಳಿ ಪಡೆಯಲ್ಲಿ ನಾವಿಕರಾಗಲು ಅಥವಾ ಇತರೆ ಯಾಂತ್ರಿಕ ಹುದ್ದೆಗಳನ್ನು ಪಡೆಯಲು ಬಯಸುವವರಿಗೆ ಸಿಹಿಸುದ್ದಿ. ನಾವಿಕ್‌ ಮತ್ತು ಯಾಂತ್ರಿಕ್‌ ಹುದ್ದೆಗಳಿಗೆ ನೇಮಕ ನಡೆಸುವ ಸಲುವಾಗಿ ನಡೆಸುವ ತರಬೇತಿ ಕಾರ್ಯಕ್ರಮಕ್ಕೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದೀಗ 01/2022 ಬ್ಯಾಚ್‌ನ ನೇಮಕ ಪ್ರಕ್ರಿಯೆಗಾಗಿ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ವರ್ಷದ ಆರಂಭದಲ್ಲಿ ಕರಾವಳಿ ಪಡೆಯ ತರಬೇತಿ ಮತ್ತು ಕೋರ್ಸ್‌ ಆರಂಭವಾಗಲಿದ್ದು, ಅಂತಿಮವಾಗಿ ನಾವಿಕ ಅಥವಾ ಯಾಂತ್ರಿಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

2022 ಜನವರಿಯಿಂದ ಆರಂಭವಾಗುವ ಕೋರ್ಸ್‌ಗಳಿಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 16 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಅಂಚೆ ಮೂಲಕ ಆಯಾ ವಲಯ ಕಚೇರಿಗಳಿಗೆ ಕಳುಹಿಸುವಂತೆ ಸೂಚಿಸಲಾಗಿದೆ. ಆದರೆ, ಪುರುಷರು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸ್ಪೀಡ್‌ ಪೋಸ್ಟ್‌ ಅಥವಾ ಕೊರಿಯರ್‌ ಮೂಲಕ ಕಳುಹಿಸಿರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಆಯ್ಕೆ ಕೋರ್ಸ್‌ ಆಯ್ಕೆಯಾಗುವ ಸಮಯ: ಮುಂದಿನ ವರ್ಷ ಜನವರಿ

ಯಾರು ಅರ್ಜಿ ಸಲ್ಲಿಸಬಹುದು: ಪುರುಷ ಅಭ್ಯರ್ಥಿಗಳು ಮಾತ್ರ

ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 02-07-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-07-2021
ಸ್ಟೇಜ್ 1 ಪರೀಕ್ಷೆ ದಿನಾಂಕ : ಸೆಪ್ಟೆಂಬರ್ 2021
ಸ್ಟೇಜ್ 2 ಪರೀಕ್ಷೆ ದಿನಾಂಕ : ಅಕ್ಟೋಬರ್ 2021
ಸ್ಟೇಜ್ 3 ಪರೀಕ್ಷೆ ದಿನಾಂಕ : ಫೆಬ್ರವರಿ 2022
ಸ್ಟೇಜ್ 4 ಪರೀಕ್ಷೆ ದಿನಾಂಕ : ಎಪ್ರಿಲ್ 2022

ಹುದ್ದೆ: ನಾವಿಕ್ ಮತ್ತು ಯಾಂತ್ರಿಕ್ ಹುದ್ದೆಗಳನ್ನು ಭರ್ತಿ ಅರ್ಜಿ ಆಹ್ವಾನಿಸಲಾಗಿದೆ. ಡೊಮೆಸ್ಟಿಕ್ ಬ್ರ್ಯಾಂಚ್, ಜೆನರಲ್ ಡ್ಯೂಟಿ ವಿಭಾಗಕ್ಕೆ ಈ ನೇಮಕ ನಡೆಯಲಿದೆ. ಒಟ್ಟು ೩೫೦ ಹುದ್ದೆಗಳಿದ್ದು, ಅರ್ಹರು ಈ ಅದ್ಭುತ ಅವಕಾಶ ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಬಹುದು.

ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆಬ್ಜೆಕ್ಟಿವ್‌ ಮಾದರಿಯಲ್ಲಿ ಲಿಖಿತ ಪರೀಕ್ಷೆ ಇರಲಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ‌ ಮತ್ತು ವೈದ್ಯಕೀಯ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ. 

ಹುದ್ದೆಗಳ ‌ವಿವರ : ನಾವಿಕ್ ( ಜೆನರಲ್ ಡ್ಯೂಟಿ ) ಪಿಯುಸಿ 260
ನಾವಿಕ್ ( ಡೊಮೆಸ್ಟಿಕ್ ಬ್ರ್ಯಾಂಚ್ ) ಎಸ್ ಎಸ್ ಎಲ್ ಸಿ 50
ಯಾಂತ್ರಿಕ್ ( ಮೆಕ್ಯಾನಿಕಲ್ ) ಡಿಪ್ಲೋಮಾ 20
ಯಾಂತ್ರಿಕ್ ( ಇಲೆಕ್ಟ್ರಿಕಲ್ ) ಡಿಪ್ಲೋಮಾ 13
ಯಾಂತ್ರಿಕ್ ( ಇಲೆಕ್ಟ್ರೀಷಿಯನ್ ) ಡಿಪ್ಲೋಮಾ 07

ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ‌ ಹಾಗೂ ಗರಿ 22 ವರ್ಷ ಮೀರಿರಬಾರದು.

ಪರೀಕ್ಷಾ ಶುಲ್ಕ : ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.250/-, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ವನ್ನು ಆನ್ಲೈನ್ ಮೂಲಕ ಪಾವತಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

ನೋಟಿಫಿಕೇಶನ್

Leave a Comment