ಭಾರತೀಯ ಕರಾವಳಿ ಕಾವಲು ಪಡೆಯು ಕೇಂದ್ರ ಸರಕಾರದ ಸಶಸ್ತ್ರ ಪಡೆಯಾಗಿದ್ದು, ಯುವ ಮತ್ತು ಕ್ರಿಯಾಶೀಲ ಭಾರತೀಯ ಪುರುಷ ಅಭ್ಯರ್ಥಿಗಳಿಗೆ ವಿವಿಧ ಶಾಖೆಗಳಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ( ಗ್ರೂಪ್ ಎ ಗಜೆಟೆಡ್ ಆಫೀಸರ್) ಸವಾಲುದಾಯಕ ವೃತ್ತಿಯನ್ನು ಒದಗಿಸುತ್ತಿದೆ.
ಹುದ್ದೆಗಳ ವಿವರ: ಜನರಲ್ ಡ್ಯೂಟಿ- ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಕನಿಷ್ಠ ಸರಾಸರಿ 60% ಅಂಕಗಳೊಂದಿಗೆ ( ಅಂದರೆ ಒಂದನೇ ಸೆಮಿಸ್ಟರ್ ನಿಂದ 8 ನೇ ಸೆಮಿಸ್ಟರ್ ವರೆಗೆ ಬಿ.ಇ/ಬಿ.ಟೆಕ್ ಕೋರ್ಸ್ ಪಡೆದವರಿಗೆ ಅಥವಾ ಒಂದನೇ ವರ್ಷದಿಂದ ಕೊನೆಯ ವರ್ಷದವರೆಗೆ ಬ್ಯಾಚುಲರ್ ಡಿಗ್ರಿ ಅಭ್ಯರ್ಥಿಗಳಿಗೆ ಯಾವುದು ಅನ್ವಯವಾಗುತ್ತದೆಯೋ ಅದು ) ಬ್ಯಾಚುಲರ್ ಡಿಗ್ರಿ ಪಡೆದಿರಬೇಕು.
ತಾಂತ್ರಿಕ ( ಎಂಜಿನಿಯರಿಂಗ್ & ಎಲೆಕ್ಟ್ರಿಕಲ್) ಸರಾಸರಿ ಶೇ.60 ಅಂಕಗಳೊಂದಿಗೆ ಎಂಜಿನಿಯರಿಂಗ್ ಪದವಿ ಅಥವಾ ಸೆಕ್ಷನ್ ಎ ಮತ್ತು ಬಿ ಪರೀಕ್ಷೆಗಳನ್ನು ಇಂಜಿನಿಯರಿಂಗ್ ನಲ್ಲಿ ( ಇಂಡಿಯಾ) ದಿಂದ ಈ ಕೆಳಗೆ ಪಟ್ಟಿ ಮಾಡಿದ ಯಾವುದೇ ವಿಷಯದಲ್ಲಿ ಶೇ.60 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.
ಎಂಜಿನಿಯರಿಂಗ್ ಶಾಖೆ : ನೌಕಾ ವಾಸ್ತುಶಿಲ್ಪ, ಮೆಕ್ಯಾನಿಕಲ್ ಅಥವಾ ಮೆರೈನ್ ಅಥವಾ ಅಟೋಮೆಟ್ರಿಕ್ಸ್ ಅಥವಾ ಮೆಕೆಟ್ರಾನಿಕ್ಸ್ ಅಥವಾ ಇಂಡಸ್ಟ್ರಿಯಲ್ ಆ್ಯಂಡ್ ಪ್ರೊಡಕ್ಷನ್ ಅಥವಾ ಮೆಟಲರ್ಜಿ ಅಥವಾ ಡಿಸೈನ್ ಅಥವಾ ಏರೋನಾಟಿಕಲ್ ಅಥವಾ ಏರೋಸ್ಪೇಸ್
ಎಲೆಕ್ಟ್ರಿಕಲ್ ಶಾಖೆ : ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ಅಥವಾ ಟೆಲಿಕಮ್ಯುನಿಕೇಶನ್ ಅಥವಾ ಇನ್ಸ್ಟ್ರುಮೆಂಟೇಶನ್ ಅಥವಾ ಇನ್ಸ್ಟ್ರುಮೆಂಟೇಷನ್ ಆ್ಯಂಡ್ ಕಂಟ್ರೋಲ್ ಅಥವಾ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ಅಥವಾ ಪವರ್ ಎಂಜಿನಿಯರಿಂಗ್ ಅಥವಾ ಪವರ್ ಎಲೆಕ್ಟ್ರಾನಿಕ್ಸ್.
ಈ ಎಲ್ಲ ಎಂಜಿನಿಯರಿಂಗ್ ಶಾಖೆಗಳು ಅಖಿಲ ಭಾರತ ಶಿಕ್ಷಣ ಮಂಡಳಿ ( ಎಂಐಸಿಟಿಇ) ಯಿಂದ ಮಾನ್ಯತೆ ಪಡೆದಿರಬೇಕು.
ಭೌತಶಾಸ್ತ್ರ ಮತ್ತು ಗಣಿತದಲ್ಲಿ 12 ನೇ ತರಗತಿಯಲ್ಲಿ ಸರಾಸರಿ 60% ಅಂಕ ಪಡೆದಿರಬೇಕು ಅಥವಾ ಸರಾಸರಿ 60% ಅಂಕಗಳೊಂದಿಗೆ ಮೂರು ವರ್ಷದ ಡಿಪ್ಲೋಮಾ ಕೋರ್ಸ್.
ವಯೋಮಿತಿ : ಜನರಲ್ ಡ್ಯೂಟಿ ಹುದ್ದೆಗೆ 01-07-1997 ರಿಂದ 30-06-2001 ರ ಒಳಗೆ ಹುಟ್ಟಿದವರು. ( ಎರಡೂ ದಿನಾಂಕ ಸೇರಿ)
ತಾಂತ್ರಿಕ ( ಎಂಜಿನಿಯರಿಂಗ್ & ಎಲೆಕ್ಟ್ರಿಕಲ್ ) ಹುದ್ದೆಗೆ 01-07-1997 ರಿಂದ 30-06-2001 ರ ಒಳಗೆ ಹುಟ್ಟಿದವರು. ( ಎರಡೂ ದಿನಾಂಕ ಸೇರಿ)
ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ : 04-07-2021
ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ – 14-07-2021
ಹೆಚ್ಚಿನ ಮಾಹಿತಿಗಾಗಿ www.joinindiancoastguard.gov.in ಗೆ ಭೇಟಿ ನೀಡಬಹುದು