Indian Bank Recruitment 2024: ಇಂಡಿಯನ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 146 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಪೋಸ್ಟ್‌ಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು 01-Apr-2024 ರಂದು ಅಥವಾ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಪ್ರಮುಖ ದಿನಾಂಕಗಳು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 12-03-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ: 01-04-2024
ಹುದ್ದೆಯ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ
ಹುದ್ದೆ: ಒಟ್ಟು 146 ಹುದ್ದೆಗಳು ಖಾಲಿ ಇದೆ. ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತದೆಲ್ಲೆಡೆ ಕೆಲಸ ಮಾಡಲು ಇಚ್ಛಿಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಗಳು ಹಾಗೂ ಸಂಖ್ಯೆ
ಮುಖ್ಯ ವ್ಯವಸ್ಥಾಪಕರು – ಕ್ರೆಡಿಟ್- 10, ಹಿರಿಯ ವ್ಯವಸ್ಥಾಪಕರು – ಕ್ರೆಡಿಟ್ 10, ಸಹಾಯಕ ವ್ಯವಸ್ಥಾಪಕರು – NR (BR) 30, ಸಹಾಯಕ ವ್ಯವಸ್ಥಾಪಕರು – ಭದ್ರತೆ 11, ಮುಖ್ಯ ವ್ಯವಸ್ಥಾಪಕ – MSME 5, ಹಿರಿಯ ವ್ಯವಸ್ಥಾಪಕರು – MSME 10, ಮ್ಯಾನೇಜರ್ – MSME 10, ಮುಖ್ಯ ವ್ಯವಸ್ಥಾಪಕರು – ಡಿಜಿಟಲ್ ಮಾರ್ಕೆಟಿಂಗ್ 1, ಹಿರಿಯ ವ್ಯವಸ್ಥಾಪಕ – ಎಸ್‌ಇಒ ಮತ್ತು ವೆಬ್‌ಸೈಟ್ ತಜ್ಞರು 1, ಹಿರಿಯ ವ್ಯವಸ್ಥಾಪಕ-ಸಾಮಾಜಿಕ ಮಾಧ್ಯಮ ತಜ್ಞರು 1, ಹಿರಿಯ ವ್ಯವಸ್ಥಾಪಕರು – ಸೃಜನಾತ್ಮಕ ತಜ್ಞರು 1, ಹಿರಿಯ ವ್ಯವಸ್ಥಾಪಕ – ವಿದೇಶೀ ವಿನಿಮಯ/ವ್ಯಾಪಾರ ಹಣಕಾಸು 5, ಮ್ಯಾನೇಜರ್ – ವಿದೇಶೀ ವಿನಿಮಯ/ವ್ಯಾಪಾರ ಹಣಕಾಸು 5
ಮುಖ್ಯ ವ್ಯವಸ್ಥಾಪಕರು – (Treasury Dealer) 1 ಹೀಗೆ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ: ವಿವಿಧ ಹುದ್ದೆಗಳಿಗೆ ತಕ್ಕಂತೆ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಅಧಿಸೂಚನೆಯ ಮೂಲಕ ವಿವರಗಳನ್ನು ತಿಳಿದುಕೊಳ್ಳಬಹುದು.
ವಯೋಮಿತಿ: ಮೇಲಿನ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳ ವಯೋಮಿತಿಯು 21-40 ವರ್ಷದೊಳಗಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ, PwBD ಅಭ್ಯರ್ಥಿಗಳಿಗೆ 10ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಅರ್ಜಿ ಶುಲ್ಕ: ಎಸ್‌ಸಿ/ಎಸ್‌ಟಿ/PwBD ಅಭ್ಯರ್ಥಿಗಳಿಗೆ ರೂ.175/- ಉಳಿದ ಅಭ್ಯರ್ಥಿಗಳಿಗೆ ರೂ.1000 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿ ಮಾಡಬೇಕು. ಬೇರೆ ಯಾವುದೇ ವಿಧಾನದಿಂದ ಅರ್ಜಿ ಶುಲ್ಕ ಪಾವತಿ ಮಾಡುವಂತಿಲ್ಲ.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ/ ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ವೇತನ:
ಸ್ಕೇಲ್-1- ರೂ.36000-63840 ರೂ.
ಸ್ಕೇಲ್II – ರೂ.48170-ರೂ.69810
ಸ್ಕೇಲ್III – ರೂ.63840-ರೂ.78230
ಸ್ಕೇಲ್ IV – ರೂ.76010-ರೂ.89890
ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ