ಕರ್ನಾಟಕದ ಬೀದರ್ ನ ವಾಯುಪಡೆ ನಿಲ್ದಾಣದಲ್ಲಿ ಸ್ಟೇಷನ್ ಮೆಡಿಕೇರ್ ಸೆಂಟರ್ 01 ನೇ ಎಪ್ರಿಲ್ 2021 ರಿಂದ 31 ನೇ ಮಾರ್ಚ್ 2022 ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕೆಳಕಂಡ ಸಿಬ್ಬಂದಿಯ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ವಿವರ : ಸ್ತ್ರೀ ರೋಗ ವೈದ್ಯ, ಮಕ್ಕಳ ವೈದ್ಯ, ದಂತ ವೈದ್ಯ, ಮಾನಸಿಕ ಸಲಹೆಗಾರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ : ಸ್ತ್ರೀ ರೋಗ ವೈದ್ಯ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಡಿ/ಡಿಎನ್ಎ (ಸ್ತ್ರಿರೋಗ ಮತ್ತು ಪ್ರಸೂತಿ) ವಿದ್ಯಾರ್ಹತೆ ಯನ್ನು ಪಡೆದಿರಬೇಕು.
ಮಕ್ಕಳ ವೈದ್ಯ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಯ ಎಂಡಿ/ ಡಿಎನ್‌ಎ ( ಪೀಡಿಯಾಟ್ರಿಕ್ಸ್) ಮಾಡಿರಬೇಕು.
ದಂತ ವೈದ್ಯ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಡಿಎಸ್/ಎಂಡಿಎಸ್ ಪಡೆದಿರಬೇಕು.
ಮಾನಸಿಕ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮನಃಶಾಸ್ತ್ರದಲ್ಲಿ ಎಂಎ/ಎಂಫಿಲ್ ಪಡೆದಿರಬೇಕು.
ವೇತನ: ಸ್ತ್ರೀ ರೋಗ ವೈದ್ಯ ಹುದ್ದೆಗೆ ರೂ. 21,500/- ಮಾಸಿಕ ವೇತನ ಇರುತ್ತದೆ.
ಮಕ್ಕಳ ವೈದ್ಯ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.16,200/- ವೇತನ ಇರುತ್ತದೆ.
ದಂತ ವೈದ್ಯ ಹುದ್ದರ ಮಾಸಿಕ ವೇತನ ರೂ. 24,384/- ನಿಗದಿಪಡಿಸಲಾಗಿದೆ.
ಮಾನಸಿಕ ಸಲಹೆಗಾರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗರ ತಿಂಗಳ ರೂ. 16,800/- ವೇತನವಿರುತ್ತದೆ.
ನಮೂದಿತ ವೇತನವು ಸಾಮಾನ್ಯವಾಗಿ ಕ್ರೋಢಿಕೃತವಾಗಿದೆ. ಮತ್ತು ಸರಕಾರಿ ಉದ್ಯೋಗಿಗಳಿಗೆ ಅನ್ವಯಿಸುವಂತರ ಇನ್ನಿತರೆ ಭತ್ಯೆಗಳು/ ಹಣಕಾಸು ಸೌಲಭ್ಯಗಳಿಗೆ ಅರ್ಹರಾಗಿರುವುದಿಲ್ಲ.
ಈ ಹುದ್ದೆ ಕೇವಲ ತಾತ್ಕಾಲಿಕ ವಾಗಿದ್ದು, ಖಾಯಂ ಉದ್ಯೋಗಕ್ಕೆ ಸೇರ್ಪಡೆಯಾಗಲು ಯಾವುದೇ ಅಧಿಕಾರವಿರುವುದಿಲ್ಲ. ಯಾವುದೇ ಕಾರಣ ನೀಡದೆ 30 ದಿನಗಳ ನೋಟೀಸು ನೀಡಿ ಗುತ್ತಿಗೆ ಅವಧಿಗೆ ಮುಂಚೆ ಉದ್ಯೋಗವನ್ನು ಸಮಾಪ್ತಿಗೊಳಿಸಬಹುದು.
ಸಂದರ್ಶನಕ್ಕೆ ಹಾಜರಾಗುವವರಿಗೆ ಯಾವುದೇ ಟಿಎ/ಡಿಎ ನೀಡುವುದಿಲ್ಲ.
ಯಾವುದೇ ರೀತಿಯ ವಶೀಲಿ ಮತ್ತು ಶಿಫಾರಸು ಅನರ್ಹತೆಗೆ ಕಾರಣವಾಗುತ್ತದೆ.
ಆಸಕ್ತ ಅರ್ಹ ಅಭ್ಯರ್ಥಿ ಒಂದು ಪಾಸ್ ಪೋರ್ಟ್ ಅಳತೆಯ ಬಣ್ಣದ ಭಾವಚಿತ್ರ ಸೇರಿ ದೃಢೀಕೃತ ಅರ್ಹತಾ ಪ್ರಮಾಣ ಪತ್ರ,ಅನುಭವ ಪ್ರಮಾಣ ಪತ್ರ ಮತ್ತು ಸಂಪರ್ಕ ಸಂಖ್ಯೆ ಯೊಂದಿಗೆ ಬಿಳಿ ಹಾಳೆಯ ಮೇಲೆ ಬರೆದ ಅರ್ಜಿಯು ಈ ಜಾಹೀರಾತು ಪ್ರಕಟವಾದ 15 ದಿನದೊಳಗೆ ಸ್ಟೇಷನ್ ಮೆಡಿಕೇರ್ ಸೆಂಟರ್ ಕೇರಾಫ್ ವಾಯು ಪಡೆ ನಿಲ್ದಾಣ, ಬೀದರ್-585401 ಗೆ ತಲುಪಿಸಬೇಕು.
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಎಸ್ ಎಂಒ ನೊಂದಿಗೆ ಸಮಾಲೋಚಿಸಿದ ನಂತರ ಸಮಯವನ್ನು ನಿರ್ಧರಿಸಲಾಗುವುದು.