Intelleigence Bureau Recruitment 2024: ಇಂಟೆಲಿಜೆನ್ಸ್ ಬ್ಯೂರೋ ದಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 660 ಹುದ್ದೆಗಳು ಖಾಲಿ ಇದೆ. ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್-I, ಸೆಕ್ಯುರಿಟಿ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಹುದ್ದೆಯ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಅಖಿಲ ಭಾರತ ಸರ್ಕಾರದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ 12-ಮೇ-2024 ರಂದು ಅಥವಾ ಮೊದಲು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 13-03-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-05-2024
ಹುದ್ದೆಯ ಕುರಿತ ಮಾಹಿತಿ ಇಲ್ಲಿದೆ;
- ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-I/ಕಾರ್ಯನಿರ್ವಾಹಕ- 80 ಹುದ್ದೆಗಳು ಖಾಲಿ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಗ್ರಿ ಪಾಸಾಗಿರಬೇಕು. ಮಾಸಿಕ ವೇತನ Rs.47600-151100 ಇರಲಿದೆ.
- ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-II/ಕಾರ್ಯನಿರ್ವಾಹಕ 136 ಹುದ್ದೆಗಳು ಖಾಲಿ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಪಾಸಾಗಿರಬೇಕು. ಮಾಸಿಕ ವೇತನ Rs.44900-142400/- ಇರಲಿದೆ.
- ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-I/ಎಕ್ಸಿಕ್ಯೂಟಿವ್ 120 ಹುದ್ದೆಗಳು ಖಾಲಿ ಇದೆ. ಈ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು. ಮಾಸಿಕ ವೇತನ Rs.29200-92300/- ಇರಲಿದೆ.
- ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-II/ಎಕ್ಸಿಕ್ಯೂಟಿವ್ 170 ಹುದ್ದೆಗಳು ಖಾಲಿ ಇದೆ. ಈ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು. ಮಾಸಿಕ ವೇತನ Rs.25500-81100/- ಸಿಗಲಿದೆ
- ಭದ್ರತಾ ಸಹಾಯಕ/ಕಾರ್ಯನಿರ್ವಾಹಕ 100 ಹುದ್ದೆಗಳು ಖಾಲಿ ಇದೆ. ಈ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು. ಮಾಸಿಕ ವೇತನ Rs.21700-69100/- ಇರಲಿದೆ.
- ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-II/ಟೆಕ್ 8 ಹುದ್ದೆಗಳು ಖಾಲಿ ಇದೆ. ಈ ಹುದ್ದೆಗೆ ಡಿಪ್ಲೋಮಾ ಮಾಡಿರಬೇಕು. Rs.25500-81100/- ಮಾಸಿಕ ವೇತನ ಸಿಗಲಿದೆ.
- ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-II/ಸಿವಿಲ್ ವರ್ಕ್ಸ್ 3 ಹುದ್ದೆಗಳು ಖಾಲಿ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ ಅಥವಾ ಬಿ.ಟೆಕ್ ಪಾಸಾಗಿರಬೇಕು. Rs.44900-142400/- ಮಾಸಿಕ ವೇತನ ಲಭಿಸಲಿದೆ.
- ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-I (ಮೋಟಾರ್ ಟ್ರಾನ್ಸ್‌ಪೋರ್ಟ್) 22 ಹುದ್ದೆಗಳು ಖಾಲಿ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. Rs.29200-92300/- ಮಾಸಿಕ ವೇತನ ಸಿಗಲಿದೆ.
- ಹಲ್ವಾಯಿ ಮತ್ತು ಅಡುಗೆ 10 ಹುದ್ದೆಗಳು ಖಾಲಿ ಇದೆ. ಈ ಹುದ್ದೆಗೆ 10th, ಡಿಪ್ಲೋಮಾ ಮಾಡಿದವರು ಅರ್ಜಿ ಸಲ್ಲಿಸಬಹುದು. Rs.21700-69100/- ಮಾಸಿಕ ವೇತನ ಲಭ್ಯ.
- ಉಸ್ತುವಾರಿ 5 ಹುದ್ದೆಗಳು ಖಾಲಿ ಇದೆ. ಸಂಸ್ಥೆಯ ನಿಯಮ ಪ್ರಕಾರ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು. Rs.29200-92300/- ಮಾಸಿಕ ವೇತನ ಸಿಗಲಿದೆ.
- ವೈಯಕ್ತಿಕ ಸಹಾಯಕ 5 ಹುದ್ದೆಗಳು ಖಾಲಿ ಇದೆ. ಈ ಹುದ್ದೆಗೆ ದ್ವಿತೀಯ ಪಿಯುಸಿ ಪಾಸ್ ಮಾಡಿರಬೇಕು. Rs.44900-142400/- ಮಾಸಿಕ ವೇತನ ಲಭ್ಯ.
- ಪ್ರಿಂಟಿಂಗ್ ಪ್ರೆಸ್ ಆಪರೇಟರ್ 1 ಹುದ್ದೆ ಖಾಲಿ ಇದೆ. ಈ ಹುದ್ದೆಗೆ ಸಂಸ್ಥೆಯ ನಿಯಮ ಪ್ರಕಾರ ಅಭ್ಯರ್ಥಿಗಳು ವಿದ್ಯಾರ್ಹತೆಯನ್ನು ಹೊಂದಿರಬೇಕು. Rs.19900-63200/- ಮಾಸಿಕ ವೇತನ ಸಿಗಲಿದೆ.
ಒಟ್ಟು 660 ಹುದ್ದೆಗಳು ಖಾಲಿ ಇದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Joint Deputy Director/G-3, Intelligence Bureau, Ministry of Home Affairs, 35 S P Marg, Bapu Dham, New Delhi-110021 ಗೆ 12-ಮೇ,2024 ರೊಳಗೆ ತಲುಪಿಸಬೇಕು.