IDBI Bank : ವಿವಿಧ ಹುದ್ದೆ

Advertisements

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವ ಐಡಿಬಿಐ ಬ್ಯಾಂಕ್‌ ಮುಂಬಯಿ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

ಚೀಫ್ ಡಾಟಾ ಆಫೀಸರ್-1, ಹೆಡ್ ಪ್ರಾಗಾಮಿಂಗ್ ಮ್ಯಾನೇಜರ್ -1, ಡೆಪ್ಯುಟಿ ಚೀಫ್ ಟೆಕ್ನಾಲಜಿ ಆಫೀಸರ್( ಚಾನೆಲ್), ಡೆಪ್ಯುಟಿ ಚೀಫ್ ಟೆಕ್ನಾಲಜಿ ಆಫೀಸರ್( ಡಿಜಿಟಲ್)-1, ಹೆಡ್-ಡಿಜಿಟಲ್ ಬ್ಯಾಂಕಿಂಗ್ & ಎಮರ್ಜಿಂಗ್ ಪೇಮೆಂಟ್ಸ್-1, ಚೀಫ್ ಇನ್ಫಾರ್ಮೇಶನ್ ಸೆಕ್ಯುರಿಟಿ ಆಫೀಸರ್-1 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ‌.

ಚೀಫ್ ಡೇಟಾ ಆಫೀಸರ್, ಪ್ರೊಗ್ರಾಂ ಮ್ಯಾನೇಜ್‌ಮೆಂಟ್ ಮತ್ತು ಇನ್ಫಾರ್ಮೇಷನ್ (ಐಟಿ) ಕಾಂಪ್ಲಿಯೆನ್ಸ್‌ ಹೆಡ್, ಡೆಪ್ಯೂಟಿ ಚೀಫ್ ಟೆಕ್ನಾಲಜಿ ಆಫೀಸರ್ ಹಾಗೂ ಡೆಪ್ಲಯೂಟಿ ಚೀಫ್ ಟೆಕ್ನಾಲಜಿ ಆಫೀಸರ್ (ಡಿಜಿಟಲ್ ) ಹುದ್ದೆಗಳಿಗೆ ವಾರ್ಷಿಕ 40 ರಿಂದ 45 ವರ್ಷ ರೂಪಾಯಿ ಪ್ಯಾಕೇಜ್ ಸಿಗಲಿದೆ.

ಚೀಫ್ ಇನ್ಫಾರ್ಮೇಷನ್ ಸೆಕ್ಯೂರಿಟಿ ಆಫೀಸರ್ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಹುದ್ದೆಗೆ ವಾರ್ಷಿಕ 50 ರಿಂದ 60 ಲಕ್ಷ ರೂಪಾಯಿ ವೇತನ ನಿಗದಿ ಪಡಿಸಲಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಐಟಿ ವಲಯ, ಅದರಲ್ಲೂ ಬ್ಯಾಂಕ್ ಕ್ಷೇತ್ರ ಸೇರಿದಂತೆ ಒಟ್ಟು 18 ರಿಂದ 20 ವರ್ಷ ಕೆಲಸ ಮಾಡಿದ ಅನುಭವ ಇರುವವರಾಗಿರಬೇಕು.

ಡಿಜಿಟಲ್ ಬ್ಯಾಂಕಿಂಗ್ ಹಾಗೂ ಸಿಐಎಸ್‌ಒ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯೋಮಿತಿಯು ಕನಿಷ್ಠ 45 ವರ್ಷ ಹಾಗೂ ಗರಿಷ್ಠ 55 ವರ್ಷಗಳಾಗಿರಬೇಕು. ಉಳಿದ ಹುದ್ದೆಗಳಿಗೆ ಗರಿಷ್ಠ 45 ವರ್ಷಗಳಾಗಿರಬೇಕು.

ಪ್ರಾಥಮಿಕ ತಪಾಸಣೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ಜೊತೆಗೆ ಸಲ್ಲಿಸಿರುವ ಅರ್ಹತಾ ಮಾನದಂಡ, ಅಭ್ಯರ್ಥಿಯ ಅರ್ಹತೆಗಳು, ಸೂಕ್ತತೆ / ಅನುಭವ ಇತ್ಯಾದಿಗಳನ್ನು ಆಧರಿಸಿ ಶಾರ್ಟ್ ಲಿಸ್ಟ್ ಮಾಡಿರುವ ಅಭ್ಯರ್ಥಿಗಳನ್ನು ವೈಯಕ್ತಿಕ ಸಂದರ್ಶನಕ್ಕೆ ಕರೆಯಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-05-2021

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.idbibank.in ಗೆ ಭೇಟಿ‌ ನೀಡಿ.

ನೋಟಿಫಿಕೇಶನ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ.

ಅಪ್ಲಿಕೇಶನ್ ಫಾರ್ಮಾಟ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave a Comment