ICF Chennai Recruitment 2024: 1010 ಅಪ್ರೆಂಟಿಸ್‌ ಹುದ್ದೆಗಳು;10,ITI ಪಾಸಾದವರು ಈ ಕೂಡಲೇ ಅರ್ಜಿ ಸಲ್ಲಿಸಿ

Advertisements

Indian Railway ICF Recruitment 2024: ಚೆನ್ನೈನಲ್ಲಿರುವ ಭಾರತೀಯ ರೈಲ್ವೇಯ ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿಯು ತನ್ನಲ್ಲಿರುವ ಖಾಲಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ವಿವಿಧ ಇಂಜಿನಿಯರಿಂಗ್‌ ಟ್ರೇಡ್‌ಗಳಲ್ಲಿ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಈ ಕೆಳಗೆ ನೀಡಿದ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಸಾವಿರಾರು ಅಪ್ರೆಂಟಿಸ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್‌ 21, 2024 ಕೊನೆಯ ದಿನಾಂಕವಾಗಿದ್ದು, ಅದರ ಮೊದಲು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ.

ಹುದ್ದೆಯ ಕುರಿತ ಹೆಚ್ಚಿನ ವಿವರ ಇಲ್ಲಿದೆ;
1010 ಅಪ್ರೆಂಟಿಸ್‌ಶಿಪ್‌ ಹುದ್ದೆಯನ್ನು ಎರಡು ವಿಭಾಗಗಳಾಗಿ ಮಾಡಲಾಗಿದೆ. ಇದರಲ್ಲಿ ಫ್ರೆಶರ್ಸ್‌ ಮತ್ತು ಎಕ್ಸ್‌ ಐಟಿಐ ಟ್ರೇಡ್‌ ಅಪ್ರೆಂಟಿಸ್‌ ಎಂದು ವಿಂಗಡಿಸಲಾಗಿದೆ.

ಹುದ್ದೆಗಳ ಹೆಸರು, ಸಂಖ್ಯೆ ಇಲ್ಲಿದೆ;
ಕಾರ್ಪೆಂಟರ್​​ – 90 ಹುದ್ದೆಗಳು
ಎಲೆಕ್ಟ್ರಿಷಿಯನ್​ – 200 ಹುದ್ದೆಗಳು
ಫಿಟ್ಟರ್​ – 260 ಹುದ್ದೆಗಳು
ಮೆಕ್ಯಾನಿಕ್​ – 90 ಹುದ್ದೆಗಳು
ಪೇಂಟರ್​​ – 90 ಹುದ್ದೆಗಳು
ವೆಲ್ಡರ್​​ – 260 ಹುದ್ದೆಗಳು
ಎಂಎಲ್​ಟಿ ರೇಡಿಯಾಲಜಿ – 5 ಹುದ್ದೆಗಳು
ಎಂಎಲ್​ಟಿ ರೇಡಿಯಾಲಜಿ – 5 ಹುದ್ದೆಗಳು
ಪಿಎಎಸ್​ಎಎ – 10 ಹುದ್ದೆಗಳು

ಹುದ್ದೆಗಳ ಸಂಖ್ಯೆ: ಫ್ರೆಶರ್ಸ್‌ಗಳಿಗೆ 330 ಹುದ್ದೆಗಳಿದೆ. ಎಕ್ಸ್‌ ಐಟಿಐ ಹುದ್ದೆಗೆ 680 ಹುದ್ದೆಗಳು ಖಾಲಿ ಇದೆ.

ಶೈಕ್ಷಣಿಕ ಅರ್ಹತೆ: ಫ್ರೆಶರ್ಸ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 50% ಅಂಕಗಳೊಂದಿಗೆ 10 ನೇ ತರಗತಿ ಪಾಸಾಗಿರಬೇಕು. ಜೊತೆಗೆ 10+2 ವಿಜ್ಞಾನ / ಗಣಿತದಲ್ಲಿ ತೇರ್ಗಡೆ ಹೊಂದಿರಬೇಕು.
ಎಕ್ಸ್‌ ಐಟಿಐ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 50% (ಕನಿಷ್ಠ) ಅಂಕದೊಂದಿಗೆ 10 ನೇ ತರಗತಿ ತೇರ್ಗಡೆ ಹೊಂದಿರಬೇಕು. ಹಾಗೂ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣ ಪತ್ರ ಇರಬೇಕು.

ಸ್ಟೈಫಂಡ್‌: 10ನೇ ತರಗತಿ ಉತ್ತೀರ್ಣರಾದವರಿಗೆ ರೂ.6000/-, 12ನೇ ತರಗತಿ ಪಾಸಾದವರಿಗೆ ರೂ.7000, ITI ಪಾಸಾದವರಿಗೆ ರೂ.7000 ಮಾಸಿಕ ಸ್ಟೈಫಂಡ್‌ ಪಡೆಯುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ?
ಅಪ್ರೆಂಟಿಸ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲಿಗೆ ಹೆಸರು, ಇಮೇಲ್‌, ಫೋನ್‌ ಸಂಖ್ಯೆ ಹಾಗೂ ವೈಯಕ್ತಿಕ ವಿವರಗಳನ್ನು pb.icf.gov.in ನಲ್ಲಿ ICF ಚೆನ್ನೈನ ನೇಮಕಾತಿ ಪೋರ್ಟಲ್‌ನಲ್ಲಿ ನೋಂದಾಯಿಸಿ ಅರ್ಜಿ ಸಲ್ಲಿಸಬೇಕು.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ