IBPS RRB Recruitment 2021: ಗ್ರಾಮೀಣ ಬ್ಯಾಂಕ್‌ಗಳಲ್ಲಿನ 10,447 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ವಿವರ

Advertisements

ದೇಶದ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಉದ್ಯೋಗ ಪಡೆಯಲು ಬಯಸುವವರಿಗೆ ಸಿಹಿಸುದ್ದಿ. ಭಾರತೀಯ ಬ್ಯಾಂಕಿಂಗ್‌ ನೇಮಕಾತಿ ಸಂಸ್ಥೆ (ಐಬಿಪಿಎಸ್‌)ಯು ಗ್ರೂಪ್‌ ಎ ಆಫೀಸರ್ಸ್‌ ಮತ್ತು ಗ್ರೂಪ್‌ ಬಿ ಆಫೀಸ್‌ ಅಸಿಸ್ಟೆಂಟ್‌ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ಅಧಿಸೂಚನೆ ಪ್ರಕಟಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭಗೊಳ್ಳುತ್ತಿದ್ದು, ಬ್ಯಾಂಕ್‌ಗಳಲ್ಲಿ ಆಫೀಸರ್‌ ಮತ್ತು ಕ್ಲಕ್‌ ಹುದ್ದೆ ಪಡೆಯಲು ಬಯಸುವವರು ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬಹುದು. ದೇಶದ್ಯಾಂತ ಒಟ್ಟು 10,447 ಹುದ್ದೆಗಳ ನೇಮಕ ನಡೆಯಲಿದೆ. ಅರ್ಜಿ ಸಲ್ಲಿಸುವ ಲಿಂಕ್‌ಗಳನ್ನು ಮತ್ತು ಅಧಿಸೂಚನೆಯನ್ನು ಈ ಲೇಖನದ ಕೊನೆಗೆ ನೀಡಲಾಗಿದೆ.

ಕರ್ನಾಟಕದ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಯಾವುದೇ ಹುದ್ದೆಗಳು ಇಲ್ಲ

ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಯಾವುದೇ ಹುದ್ದೆಗಳು ಖಾಲಿ ಇಲ್ಲ. ಹೀಗಾಗಿ, ಕರ್ನಾಟಕದ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಕೆಲಸ ಮಾಡಲು ಬಯಸುವವರಿಗೆ ಇದು ನಿರಾಶೆಯ ಸುದ್ದಿಯಾಗಿದೆ. ಇದು ಕನ್ನಡಿಗರ ಅಸ್ಮಿತೆಯ ಪ್ರಶ್ನೆಯೂ ಹೌದು. ಹೀಗಿದ್ದರೂ, ಕರ್ನಾಟಕದ ಅಭ್ಯರ್ಥಿಗಳು ದೇಶದ ಉಳಿದ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಪ್ರಯತ್ನಿಸಬಹುದು.

updated: ಕರ್ನಾಟಕದ ಗ್ರಾಮೀಣ ಬ್ಯಾಂಕ್ ಗಳಲ್ಲಿ ಖಾಲಿ ಇರುವ 478 ಹುದ್ದೆಗಳಿಗೆ ಅರ್ಜಿ ಆಹ್ವಾನ (ಕನ್ನಡಿಗರ ಬೇಡಿಕೆಗೆ ಮಣಿದು ಕರ್ನಾಟಕದ ಗ್ರಾಮೀಣ ಬ್ಯಾಂಕ್‌ಗಳಲ್ಲಿಯೂ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪೂರ್ತಿ ವಿವರ ಇಲ್ಲಿದೆ)

IBPS RRB Recruitment 2021: ಗ್ರಾಮೀಣ ಬ್ಯಾಂಕ್‌ಗಳಲ್ಲಿನ 10,447 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ವಿವರ 1

ಐಬಿಪಿಎಸ್‌ ಆರ್‌ಆರ್‌ಬಿ ನೇಮಕಾತಿ 2021- ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 08-06-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-06-2021
ಪೂರ್ವಭಾವಿ ಪರೀಕ್ಷೆ ದಿನಾಂಕ: ಆಗಸ್ಟ್ 2021
ಮುಖ್ಯ ಪರೀಕ್ಷೆ ದಿನಾಂಕ : ಸೆಪ್ಟೆಂಬರ್/ಅಕ್ಟೋಬರ್ 2021

  • IBPS RRB On-line registration including Edit/Modification of Application by candidates 08.06.2021 to 28.06.2021
  • IBPS RRB Payment of Application Fees/Intimation Charges (Online) 08.06.2021 to 28.06.2021
  • IBPS RRB Download of call letters for Pre- Exam Training  09.07.2021
  • Conduct of Pre-Exam Training for IBPS RRB 19.07.2021 to 25.07.2021
  • Download of call letters for IBPS RRB online examination – Preliminary July/ August, 2021
  • IBPS RRB Online Examination – Preliminary August, 2021
  • Result of IBPS RRB Online exam – Preliminary September 2021
  • Download of Call letter for IBPS RRB Online exam – Main / Single September 2021
  • IBPS RRB Online Examination – Main / Single September/October 2021
  • IBPS RRB Declaration of Result – Main/ Single (For Officers Scale I, II and III) October 2021
  • Download of call letters for interview (For Officers Scale I, II and III) October/November 2021
  • Conduct of interview (For Officers Scale I, II and III) October/November 2021
  • Provisional Allotment (For Officers Scale I, II and III & Office Assistant. (Multipurpose)) January 2022

ಅರ್ಜಿ ಸಲ್ಲಿಸುವುದು ಹೇಗೆ?: ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಗಳು ಆನ್‌ಲೈನ್‌ ಹೊರತುಪಡಿಸಿ ಬೇರೆ ಯಾವುದೇ ವಿಧಾನಗಳ ಮೂಲಕ ಅರ್ಜಿ ಸಲ್ಲಿಸುವಂತೆ ಇಲ್ಲ. ಒಬ್ಬ ಅಭ್ಯರ್ಥಿಯು ಆಫೀಸ್‌ ಕೇಡರ್‌ನ ಯಾವುದಾದರೂ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಎಲ್ಲಾ ಹುದ್ದೆಗಳಿಗೂ ಅರ್ಜಿ ಸಲ್ಲಿಸಿ ಅದೃಷ್ಟ ಪರೀಕ್ಷಿಸುವಂತೆ ಇಲ್ಲ.

IBPS RRB Recruitment 2021: ಗ್ರಾಮೀಣ ಬ್ಯಾಂಕ್‌ಗಳಲ್ಲಿನ 10,447 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ವಿವರ 2

ಐಬಿಪಿಎಸ್‌ ಆರ್‌ಆರ್‌ಬಿ ನೇಮಕಾತಿ 2021- ಹುದ್ದೆಗಳ ವಿವರ

ಒಟ್ಟು ಹುದ್ದೆ : 10,447

ಆಫೀಸ್ ಅಸಿಸ್ಟೆಂಟ್ ( ಮಲ್ಟಿ ಪಫೋರ್ಸ್ ) – 5096 ಹುದ್ದೆಗಳು
ಆಫೀಸರ್ ಸ್ಕೇಲ್ 1 – 4119 ಹುದ್ದೆಗಳು
ಆಫೀಸರ್ ಸ್ಕೇಲ್ ( ಅಗ್ರಿಕಲ್ಚರ್ ಆಫೀಸರ್)-2 – 25 ಹುದ್ದೆಗಳು
ಆಫೀಸರ್ ಸ್ಕೇಲ್ 2 ( ಮಾರ್ಕೆಟಿಂಗ್ ಮ್ಯಾನೇಜರ್ ) – 43 ಹುದ್ದೆಗಳು
ಆಫೀಸರ್ ಸ್ಕೇಲ್ 2 ( ಟ್ರೆಶರಿ ಮ್ಯಾನೇಜರ್) -10 ಹುದ್ದೆಗಳು
ಆಫೀಸರ್ ಸ್ಕೇಲ್ 2 ( ಲಾ) – 27 ಹುದ್ದೆಗಳು
ಆಫೀಸರ್ ಸ್ಕೇಲ್ 2 ( ಸಿಎ)- 32 ಹುದ್ದೆಗಳು
ಆಫೀಸರ್ ಸ್ಕೇಲ್ 2 ( ಐಟಿ) -59 ಹುದ್ದೆಗಳು
ಆಫೀಸರ್ ಸ್ಕೇಲ್ 2 ( ಜೆನರಲ್ ಬ್ಯಾಂಕಿಂಗ್ ಆಫೀಸರ್) – 905 ಹುದ್ದೆಗಳು
ಆಫೀಸರ್ ಸ್ಕೇಲ್ 3 – 151 ಹುದ್ದೆಗಳು

ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿಸಿದ ಹುದ್ದೆಯ ವಿಷಯದಲ್ಲಿ ಡಿಗ್ರಿ ಪಾಸಾಗಿರಬೇಕು. ಇದರ ಜೊತೆಗೆ ಕೆಲವೊಂದು ಹುದ್ದೆಗೆ ಸಿಎ, ಎಂಬಿಎ ಪಾಸ್ ಮಾಡಿರಬೇಕು. ಆನ್ಲೈನ್ ಪರೀಕ್ಷೆ ಹಾಗೂ ಸಂದರ್ಶನವನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಮಾತ್ರವೇ ಅರ್ಜಿ ಸಲ್ಲಿಸಲು ಅವಕಾಶ ಮಾತ್ರ ಇರುತ್ತದೆ.

ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ / ಪಿಡ್ಬ್ಯುಡಿ ಅಭ್ಯರ್ಥಿಗಳಿಗೆ ರೂ.175/-, ಇತರೆ ಅಭ್ಯರ್ಥಿಗಳಿಗೆ ರೂ.850/- ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ.

ಅರ್ಜಿ ಶುಲ್ಕ ಎಷ್ಟು?

ಆಫೀಸರ್‌ (Scale I, II & III) ಮತ್ತು ಆಫೀಸ್‌ ಅಸಿಸ್ಟೆಂಟ್‌ (ಮಲ್ಟಿ ಪರ್ಫೋಸ್‌) ಹುದ್ದೆಗಳಿಗೆ ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು 175 ರೂಪಾಯಿ ಮತ್ತು ಉಳಿದ ಎಲ್ಲಾ ಅಭ್ಯರ್ಥಿಗಳು ೮೫೦ ರೂ. ಅರ್ಜಿ ಸಲ್ಲಿಸಬೇಕು.

English Notification of IBPS RRB Recruitment 2021

Common Recruitment Process for Recruitment of Officers (Scale-I, II & III) and Office Assistants (Multipurpose) in Regional Rural Banks (RRBs) – CRP RRBs X Website: www.ibps.in

The online examinationsfor the next Common Recruitment Process for RRBs (CRP RRBs X) for recruitment of Group “A”-Officers (Scale-I, II & III) and Group “B”-Office Assistant (Multipurpose) will be conducted by the Institute of Banking Personnel Selection (IBPS) tentatively in August and September/ October 2021. The interviews for recruitment of Group “A”- Officers (Scale-I, II & III) under the same process will be coordinated by the Nodal Regional Rural Banks with the help of NABARD and IBPS in consultation with appropriate authority tentatively in the month of November 2021.

  • Any eligible candidate, who aspires to join any of the Regional Rural Banks listed at (A) as Group “A”-Officers (Scale- I, II & III) and Group “B”-Office Assistant (Multipurpose), is required to register for the Common Recruitment Process (CRP for RRBs- X).
  • For the posts of Officers Scale I and Office Assistant (Multi-purpose) the examination will be two tier i.e. the Online Examination will be held in two phases, Preliminary and Main.
  • For the post of Office Assistant (Multi-purpose), candidates who will qualify in Preliminary Examination and shortlisted will have to appear for Main Examination. They will be provisionally allotted on the basis of the marks obtained by them in the Main Examination and the vacancies reported by the RRBs.
  • For the post of Officers Scale I, candidates who will qualify in Preliminary Examination and shortlisted will have to appear for Main Examination and shortlisted candidates in the Main Examination will subsequently be called for a Common Interview to be coordinated by the Nodal Regional Rural Banks with the help of NABARD and IBPS in consultation with appropriate authority.
  • For the post of Officers Scale II (Generalist and Specialists) and Scale III, candidates will appear for Single Online Examination and shortlisted candidates in the Single Online Examination will subsequently be called for a Common Interview to be coordinated by the Nodal Regional Rural Banks with the help of NABARD and IBPS in consultation
    with appropriate authority.

Click Here to Download IBPS Recruitment Notification 2021

ಐಬಿಪಿಎಸ್‌ ನೇಮಕಾತಿಯ ಅಧಿಸೂಚನೆ ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಆಫೀಸರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಆಫೀಸರ್ ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


Leave a Comment