ಬ್ಯಾಂಕ್ ಸಿಬ್ಬಂದಿ ನೇಮಕ ಸಂಸ್ಥೆಯು (ಐಬಿಪಿಎಸ್) ಪ್ರೊಬೇಷನರಿ ಆಫೀಸರ್ಸ್/ಮ್ಯಾನೇಜ್ಮೆಂಟ್ ಟ್ರೇನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್ ೨೬ ಕೊನೆಯ ದಿನಾಂಕವಾಗಿದೆ. ಈ ಕೋವಿಡ್ ಸಂಕಷ್ಟದ ಸಮಯದಲ್ಲಿ ಬ್ಯಾಂಕ್ ಹುದ್ದೆ ಪಡೆದು ಭವಿಷ್ಯ ರೂಪಿಸಲು ಬಯಸುವವರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬಹುದು.
- ಅರ್ಜಿ ಸಲ್ಲಿಸುವುದು ಹೇಗೆ?: ಆನ್ಲೈನ್ ಮೂಲಕ
- ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಆಗಸ್ಟ್ 05, 2020
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 26, 2020
- ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಆಗಸ್ಟ್ 26, ೨೦೨೦
- ಪ್ರಿಲಿಮ್ಸ್ ಕಾಲ್ ಲೆಟರ್ ಡೌನ್ಲೋಡ್: ಅಕ್ಟೋಬರ್ ೨೦೨೦
- ಆನ್ಲೈನ್ ಪರೀಕ್ಷೆ ದಿನಾಂಕ: ಪ್ರಿಲಿಮ್ಸ್: ಅಕ್ಟೋಬರ್ ೩, ೧೦ ಮತ್ತು ೧೧
- ಆನ್ಲೈನ್ ಪರೀಕ್ಷೆ ಪ್ರಿಲಿಮ್ಸ್ ಫಲಿತಾಂಶ: ೨೦೨೦ರ ಅಕ್ಟೋಬರ್/ ನವೆಂಬರ್
- ಆನ್ಲೈನ್ ಪರೀಕ್ಷೆ: ಮೇನ್: ನವೆಂಬರ್ ೨೮, ೨೦೨೦
- ಮೇನ್ ಪರೀಕ್ಷೆ ಫಲಿತಾಂಶ: ಡಿಸೆಂಬರ್ ೨೦೨೦
- ಐಬಿಪಿಎಸ್ ಸಂದರ್ಶನ ದಿನಾಂಕ: ೨೦೨೧ರ ಜನವರಿ/ ಫೆಬ್ರವರಿ
- ಸಂಭಾವ್ಯ ಹುದ್ದೆ ಹಂಚಿಕೆ: ೨೦೨೧ರ ಏಪ್ರಿಲ್
ಐಬಿಪಿಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿ
ವಯೋಮಿತಿ: ಐಬಿಪಿಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ೨೦ ವರ್ಷ ಮತ್ತು ಗರಿಷ್ಠ ೩೦ ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅಂದರೆ ೧೯೯೦ರ ಆಗಸ್ಟ್ ೨ರ ಬಳಿಕ ಮತ್ತು ೨೦೦೦ರ ಆಗಸ್ಟ್ ೧ರ ಮೊದಲು ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿಯಲ್ಲಿ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ೫ ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ೩ ವರ್ಷ ಸಡಿಲಿಕೆ ನೀಡಲಾಗುತ್ತದೆ.
ಐಬಿಪಿಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ
ವಿದ್ಯಾರ್ಹತೆ ಏನು: ಐಬಿಪಿಎಸ್ ಎಗ್ಸಾಂ ಬರೆಯಲು ಪದವಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಅಂಕಪಟ್ಟಿ/ಡಿಗ್ರಿ ಸರ್ಟಿಫಿಕೇಟ್ಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಆಗಸ್ಟ್ ೨೬, ೨೦೨೦ರ ಮೊದಲು ಅಂತಿಮ ಫಲಿತಾಂಶ ಪ್ರಕಟಗೊಂಡ ಪದವಿ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
ಪರೀಕ್ಷಾ ಪೂರ್ವ ತರಬೇತಿ: ಕೊರೊನಾ ಹಿನ್ನೆಲೆಯಲ್ಲಿ ಎಸ್ಸಿ/ಎಸ್ಟಿ/ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಈ ಬಾರಿ ಪರೀಕ್ಷಾ ಪೂರ್ವ ತರಬೇತಿ ನಡೆಸಲಾಗುವುದಿಲ್ಲ.
ಐಬಿಪಿಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಅಭ್ಯರ್ಥಿಗಳು ಆಗಸ್ಟ್ ೨೬ರ ಮೊದಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಹೊರತುಪಡಿಸಿ ಬೇರೆ ಯಾವುದೇ ವಿಧದಲ್ಲಿ ಅರ್ಜಿಸಲ್ಲಿಸಲು ಅವಕಾಶವಿಲ್ಲ. ಆನ್ಲೈನ್ ಅರ್ಜಿ ಸಲ್ಲಿಸುವ ಮೊದಲು ಭಾವಚಿತ್ರ (೪.೫ ಸೆಂ.ಮೀ. * ೩.೫ ಸೆಂ.ಮೀ.), ಸಹಿ, ಎಡ ಬೆರಳಿನ ಹೆಬ್ಬೆಟ್ಟು, ಸಹಿ (ಕ್ಯಾಪಿಟಲ್ ಅಕ್ಷರದಲ್ಲಿ ಸಹಿ ಮಾಡುವಂತೆ ಇಲ್ಲ) ಸ್ಕ್ಯಾನ್ ಮಾಡಿಟ್ಟುಕೊಳ್ಳಬೇಕು. ಜೊತೆಗೆ ಕೈ ಬರಹದಲ್ಲಿ I, _ (Name of the candidate), hereby declare that all the information submitted by me in the application form is correct, true and valid. I will present the supporting documents as and when required.” ಎಂದು ಬರೆದಿರುವುದನ್ನು ಸ್ಕ್ಯಾನ್ ಮಾಡಿಟ್ಟುಕೊಳ್ಳಬೇಕು. ಇದರೊಂದಿಗೆ ಆನ್ಲೈನ್ ಮೂಲಕ ಶುಲ್ಕ ಪಾವತಿಸಲು ಸಿದ್ಧರಾಗಿರಬೇಕು.
ಐಬಿಪಿಎಸ್ ಅರ್ಜಿ ಶುಲ್ಕವೆಷ್ಟು?
ಐಬಿಪಿಎಸ್ ಅರ್ಜಿ ಶುಲ್ಕ ಪಾವತಿಸಲು ಆಗಸ್ಟ್ ೨೬, ೨೦೨೦ ಕೊನೆಯ ದಿನಾಂಕವಾಗಿದೆ. ಎಸ್ಸಿ/ಎಸ್ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು 175 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಇತರೆ ಎಲ್ಲಾ ಅಭ್ಯರ್ಥಿಗಳು 850 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಆನ್ಲೈನ್ ಪಾವತಿಗೆ ಬ್ಯಾಂಕ್ ವಿಧಿಸುವ ಶುಲ್ಕವನ್ನು ಅಭ್ಯರ್ಥಿಗಳೇ ಪಾವತಿಸಬೇಕು.
ಗಮನಿಸಿ: ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಇಮೇಲ್/ ಫೋನ್ ನಂಬರ್ ಸರಿಯಾಗಿ ಬರೆದಿರಬೇಕು. ಮುಂದಿನ ಎಲ್ಲಾ ಸಂವಹನಗಳು ಇವುಗಳ ಮೂಲಕವೇ ನಡೆಯಲಿದೆ.
ಯಾವ ಬ್ಯಾಂಕ್ನಲ್ಲಿ ಎಷ್ಟು ಹುದ್ದೆಗಳಿವೆ?
ಕರ್ನಾಟಕದಲ್ಲಿ ಪ್ರಿಲಿಮ್ಸ್ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಬೆಳಗಾವಿ, ಬೀದರ್, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ.
ಇಂಗ್ಲಿಷ್ನಲ್ಲಿ ಐಬಿಪಿಎಸ್ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.