ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ಮಾರ್ಚ್ 02,2021 ರಂದು ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರವೇಶ ಪತ್ರವನ್ನು ವೆಬ್ ಸೈಟ್ ನಲ್ಲಿ ಅಪಲೋಡ್ ಮಾಡಿದೆ. ibps.in ನಲ್ಲಿ ಲಾಗಿನ್ ಆಗುವ ಮೂಲಕ ಅಡ್ಮಿಟ್ ಕಾರ್ಡ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಮಾರ್ಚ್ 02,2021 ರಿಂದ ಮಾರ್ಚ್ 13, 2021 ರವರೆಗೆ ಐಬಿಪಿಎಸ್ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಬಹುದು. ಮಾರ್ಚ್ ತಿಂಗಳಿನಲ್ಲೇ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಪರೀಕ್ಷಾ ಕೇಂದ್ರ, ಪರೀಕ್ಷಾ ದಿನಾಂಕ ಮತ್ತು ಇತರೆ ಮಾಹಿತಿಗಳನ್ನು ಪ್ರವೇಶ ಪತ್ರದಲ್ಲಿ ನೀಡಲಾಗಿದೆ.
ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯ ಅಫಿಶೀಯಲ್ ವೆಬ್ ಸೈಟ್ ibps.in ಗೆ ಭೇಟಿ ನೀಡಿ, ನಂತರ IBPS Admit Card 2021 for various link ಎಂಬಲ್ಲಿ ಕ್ಲಿಕ್ ಮಾಡಿ, ಇನ್ನೊಂದು ಪೇಜ್ ಓಪನ್ ಆಗತ್ತೆ, ಈ ಪೇಜ್ ನಲ್ಲಿ ಅಭ್ಯರ್ಥಿಗಳು ತಮ್ಮ ಲಾಗಿನ್ ಮಾಹಿತಿಗಳನ್ನು ನೀಡಿ ಸಬ್‌ಮಿಟ್ ಮಾಡಿ, ನಂತರ ಪ್ರವೇಶ ಪತ್ರ ಕಾಣಿಸುತ್ತದೆ. ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದಿಡಿ.
ಐಬಿಪಿಎಸ್ ಪ್ರತಿ ಪತ್ರಿಕೆಗೆ 50 ಅಂಕಗಳಿಗೆ ಪರೀಕ್ಷೆ ನಡೆಸಲಿದ್ದು, ೪೫ ನಿಮಿಷ ಪರೀಕ್ಷೆ ಅವಧಿ ಇರುತ್ತದೆ. ಟೆಸ್ಟ್ ಒಂದು, ಎರಡು ಎರಡರಿಂದ 90 ನಿಮಿಷ ಪರೀಕ್ಷೆ ಇರುತ್ತದೆ. ಅಬ್ಜೆಕ್ಟಿವ್ ಮಾದರಿ ಪ್ರಶ್ನೆಗಳು ಇರುತ್ತವೆ. ಪ್ರತಿಯೊಂದು ತಪ್ಪು ಉತ್ತರಗಳಿಗೆ 0.25 ನೆಗೆಟಿವ್ ಮಾರ್ಕ್ಸ್ ಇರುತ್ತದೆ.
ಐಬಿಪಿಎಸ್ ಆನ್‌ಲೈನ್ ಟೆಸ್ಟ್ ನ್ನು ಐಟಿ ಸಿಸ್ಟಮ್ಸ್ ಸಪೋರ್ಟ್ ಇಂಜಿನಿಯರ್, ಐಟಿ ಇಂಜಿನಿಯರ್, ಅನಾಲಿಸ್ಟ್ ಪ್ರೊಗ್ರಾಮರ್ ಹುದ್ದೆಗಳಿಗೆ ನಡೆಸಲಿದೆ.
ಹೆಚ್ಚಿನ ಮಾಹಿತಿಗಾಗಿ ಐಬಿಪಿಎಸ್ ವೆಬ್‌ಸೈಟ್ ಗೆ ಭೇಟಿ ನೀಡಿ