HSCC Jobs: ಹಾಸ್ಟಿಟಲ್‌ ಸರ್ವಿಸಸ್‌ ಕನ್ಸಲ್ಟೆನ್ಸಿಯಲ್ಲಿ ಉದ್ಯೋಗಾವಕಾಶ; ಆಸಕ್ತರು ಈಗಲೇ ಅಪ್ಲೈ ಮಾಡಿ

Advertisements

HSCC Recruitment 2024: ಹಾಸ್ಪಿಟಲ್ ಸರ್ವಿಸಸ್ ಕನ್ಸಲ್ಟೆನ್ಸಿ ಕಾರ್ಪೊರೇಷನ್ ಲಿಮಿಟೆಡ್ (HSCC) ತನ್ನ ಅಧಿಕೃತ ಅಧಿಸೂಚನೆಯ ಮೂಲಕ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು 38 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಎಕ್ಸಿಕ್ಯೂಟಿವ್, ಡೆಪ್ಯೂಟಿ ಮ್ಯಾನೇಜರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು 20-Apr-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ದಿನಾಂಕಗಳು:
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 30-03-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-04-2024

ಹುದ್ದೆಯ ಕುರಿತು ಹೆಚ್ಚಿನ ವಿವರ ಇಲ್ಲಿದೆ;
ಹುದ್ದೆಯ ಹೆಸರು ಮತ್ತು ಸಂಖ್ಯೆ: ಹಾಸ್ಪಿಟಲ್ ಸರ್ವಿಸಸ್ ಕನ್ಸಲ್ಟೆನ್ಸಿ ಕಾರ್ಪೊರೇಷನ್ ಲಿಮಿಟೆಡ್ (HSCC)ನಲ್ಲಿ ಒಟ್ಟು 38 ಹುದ್ದೆಗಳು ಖಾಲಿ ಇದ್ದು, ಕಾರ್ಯನಿರ್ವಾಹಕ, ಉಪ ವ್ಯವಸ್ಥಾಪಕ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗೆ ಆಯ್ಕೆಯಾದವರಿಗೆ ರೂ.30000-220000/- ಪ್ರತಿ ತಿಂಗಳು ವೇತನವಿರಲಿದೆ.

ಹುದ್ದೆಗಳ ಹೆಸರು ಮತ್ತು ಹುದ್ದೆ ಸಂಖ್ಯೆ;
ಕಾರ್ಯನಿರ್ವಾಹಕ 19 ಹುದ್ದೆಗಳು
ಉಪ ವ್ಯವಸ್ಥಾಪಕರು 8 ಹುದ್ದೆಗಳು
ಮ್ಯಾನೇಜರ್ 7 ಹುದ್ದೆಗಳು
ಹಿರಿಯ ವ್ಯವಸ್ಥಾಪಕರು 3 ಹುದ್ದೆಗಳು
ಉಪ ಪ್ರಧಾನ ವ್ಯವಸ್ಥಾಪಕರು 1 ಹುದ್ದೆ
ಒಟ್ಟು 38 ಹುದ್ದೆಗಳು

ವಿದ್ಯಾರ್ಹತೆ:
ಕಾರ್ಯನಿರ್ವಾಹಕ: ಸಿಎಸ್‌ಇ/ಐಟಿ/ಇಇಇ/ಸಿವಿಲ್/ಮೆಕ್ಯಾನಿಕಲ್/ಬಯೋ ಮೆಡಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ, ಎಲ್‌ಎಲ್‌ಬಿ, ಬಿ.ಇ ಅಥವಾ ಬಿ.ಟೆಕ್, ಎಂಬಿಎ, ಸ್ನಾತಕೋತ್ತರ ಪದವಿ ಮಾಡಿರಬೇಕು.
ಡೆಪ್ಯುಟಿ ಮ್ಯಾನೇಜರ್, ಮ್ಯಾನೇಜರ್: ICAI ಅಥವಾ ICWAI, ಪದವಿ, ಸಿವಿಲ್‌ನಲ್ಲಿ B.E ಅಥವಾ B.Tech, ಬಯೋ ಮೆಡಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ, MBA, ಸ್ನಾತಕೋತ್ತರ ಪದವಿ ಮಾಡಿರಬೇಕು.
ಸೀನಿಯರ್ ಮ್ಯಾನೇಜರ್: ಸಿವಿಲ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್, ಬಯೋ ಮೆಡಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ, ಎಂಬಿಎ, ಸ್ನಾತಕೋತ್ತರ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಉಪ ಪ್ರಧಾನ ವ್ಯವಸ್ಥಾಪಕರು: ಸಿವಿಲ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್ ತೇರ್ಗಡೆ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ:
ಕಾರ್ಯನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿಯು ಗರಿಷ್ಠ 28 ವರ್ಷ ಮೀರಿರಬಾರದು.
ಉಪ ವ್ಯವಸ್ಥಾಪಕರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿಯು 33 ವರ್ಷ ಮೀರಿರಬಾರದು.
ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿಯು 37 ವರ್ಷ ಮೀರಿರಬಾರದು.
ಹಿರಿಯ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿಯು 41 ವರ್ಷ ಮೀರಿರಬಾರದು.
ಉಪ ಪ್ರಧಾನ ವ್ಯವಸ್ಥಾಪಕರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿಯು 45 ವರ್ಷ ಮೀರಿರಬಾರದು.
ಹಾಸ್ಪಿಟಲ್ ಸರ್ವಿಸಸ್ ಕನ್ಸಲ್ಟೆನ್ಸಿ ಕಾರ್ಪೊರೇಷನ್ ಲಿಮಿಟೆಡ್ ನಾರ್ಮ್ಸ್ ಪ್ರಕಾರ ವಯೋಮಿತಿ ಸಡಿಲಿಕೆಯ ನಿಯಮ ಅನ್ವಯವಾಗಲಿದೆ.

ಅರ್ಜಿ ಶುಲ್ಕ:
SC/ST/PWD/Internal ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿ ಮಾಡುವಂತಿಲ್ಲ. ಸಾಮಾನ್ಯ/OBC ಅಭ್ಯರ್ಥಿಗಳು ರೂ.1000/- ಅರ್ಜಿ ಶುಲ್ಕ ಪಾವತಿ ಮಾಡಬೇಕು. ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಮಾತ್ರವೇ ಅರ್ಜಿ ಶುಲ್ಕ ಪಾವತಿ ಮಾಡಬೇಕು.

ಆಯ್ಕೆ ಪ್ರಕ್ರಿಯೆ: ಮೇಲ್ಕಂಡ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವೇತನ: ಕಾರ್ಯನಿರ್ವಾಹಕ; ರೂ.30000-120000/- ಮಾಸಿಕ ವೇತನ ಸಿಗಲಿದೆ.
ಉಪ ವ್ಯವಸ್ಥಾಪಕರು; ರೂ.50000-120000/- ಮಾಸಿಕ ವೇತನ ಲಭ್ಯವಿದೆ.
ಮ್ಯಾನೇಜರ್ : ರೂ.60000-180000/- ವೇತನವು ಮಾಸಿಕದಲ್ಲಿ ದೊರಕಲಿದೆ
ಹಿರಿಯ ವ್ಯವಸ್ಥಾಪಕರು ರೂ.70000-200000/- ರವರೆಗೆ ಮಾಸಿಕ ವೇತನ ಸಿಗಲಿದೆ
ಉಪ ಪ್ರಧಾನ ವ್ಯವಸ್ಥಾಪಕರು ರೂ.80000-220000/- ರವರೆಗೆ ಮಾಸಿಕ ವೇತನ ಲಭ್ಯ

ಹುದ್ದೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ನೋಟಿಫಿಕೇಶನ್‌ ಲಿಂಕ್‌ ಕ್ಲಿಕ್‌ ಮಾಡಿ.