HPCL Recruitment 2024: ಹೆಚ್‌ಪಿಸಿಎಲ್‌ನಿಂದ ಉದ್ಯೋಗಾವಕಾಶ; 247 ಹುದ್ದೆಗಳಿಗೆ ನೇಮಕಾತಿ

ಉದ್ಯೋಗ ವಿವರ- ಕ್ವಿಕ್‌ ಲುಕ್

  • ಎಲ್ಲಿ ಉದ್ಯೋಗ?: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್
  • ಹುದ್ದೆಯ ಹೆಸರು: ಮೆಕ್ಯಾನಿಕಲ್ ಇಂಜಿನಿಯರ್, ಎಲೆಕ್ಟ್ರಿಕಲ್ ಇಂಜಿನಿಯರ್
  • ಹುದ್ದೆಗಳ ಸಂಖ್ಯೆ: 247
  • ಅರ್ಜಿ ಸಲ್ಲಿಸುವುದು ಹೇಗೆ?: ಆನ್‌ಲೈನ್‌ ಮೂಲಕ
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: June 5, 2024
  • ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: June 30, 2024
  • ವೆಬ್‌ ವಿಳಾಸ: https://hindustanpetroleum.com/
Advertisements

HPCL Recruitment 2024: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಇಲ್ಲಿ ಖಾಲಿ ಇರುವ ವಿವಿಧ ಹುದದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಮೆಕ್ಯಾನಿಕಲ್ ಇಂಜಿನಿಯರ್, ಎಲೆಕ್ಟ್ರಿಕಲ್ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 247 ಹುದ್ದೆಗಳು ಖಾಲಿ ಇದ್ದು, ಅಖಿಲ ಭಾರತ ಸರ್ಕಾರದಲ್ಲಿ ಈ ಪೋಸ್ಟಿಂಗ್‌ ನಡೆಯಲಿದ್ದು, ಹುದ್ದೆಯ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಅರ್ಜಿ ಸಲ್ಲಿಸಲು 30-ಜೂನ್-2024 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ದಿನಾಂಕಗಳು;
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 05-06-2024
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2024

ಹುದ್ದೆಯ ವಿವರ ಇಲ್ಲಿ ನೀಡಲಾಗಿದೆ;
ಸಂಸ್ಥೆಯ ಹೆಸರು: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಇಲ್ಲಿ ಖಾಲಿ ಇರುವ 247 ಹುದ್ದೆಗಳು ಖಾಲಿ ಇದ್ದು, ಮೆಕ್ಯಾನಿಕಲ್ ಇಂಜಿನಿಯರ್, ಎಲೆಕ್ಟ್ರಿಕಲ್ ಇಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.50000-240000/- ವೇತನ ದೊರಕಲಿದೆ.

ಹುದ್ದೆಯ ಹೆಸರು, ಮತ್ತು ಸಂಖ್ಯೆ;
ಮೆಕ್ಯಾನಿಕಲ್ ಇಂಜಿನಿಯರ್ 93 ಹುದ್ದೆಗಳು
ಎಲೆಕ್ಟ್ರಿಕಲ್ ಇಂಜಿನಿಯರ್ 43 ಹುದ್ದೆಗಳು
ಇನ್ಸ್ಟ್ರುಮೆಂಟೇಶನ್ ಇಂಜಿನಿಯರ್ 5 ಹುದ್ದೆಗಳು
ಸಿವಿಲ್ ಇಂಜಿನಿಯರ್ 10 ಹುದ್ದೆಗಳು
ಕೆಮಿಕಲ್ ಇಂಜಿನಿಯರ್ 7 ಹುದ್ದೆಗಳು
ಹಿರಿಯ ಅಧಿಕಾರಿ (CGD) ಕಾರ್ಯಾಚರಣೆಗಳು ಮತ್ತು ನಿರ್ವಹಣೆ 6 ಹುದ್ದೆಗಳು
ಹಿರಿಯ ಅಧಿಕಾರಿ (CGD) ಯೋಜನೆಗಳು 4 ಹುದ್ದೆಗಳು
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕರು 12 ಹುದ್ದೆಗಳು
ಹಿರಿಯ ವ್ಯವಸ್ಥಾಪಕರು-ಇಂಧನೇತರ ವ್ಯಾಪಾರ 2 ಹುದ್ದೆಗಳು
ಮ್ಯಾನೇಜರ್-ತಾಂತ್ರಿಕ 2 ಹುದ್ದೆಗಳು
ನಿರ್ವಾಹಕ-ಮಾರಾಟ-ಆರ್&ಡಿ ಉತ್ಪನ್ನ ವಾಣಿಜ್ಯೀಕರಣ 2 ಹುದ್ದೆಗಳು
ಉಪ ಪ್ರಧಾನ ವ್ಯವಸ್ಥಾಪಕರು-ಸಿಬಿಡಿ 1 ಹುದ್ದೆ
ಚಾರ್ಟರ್ಡ್ ಅಕೌಂಟೆಂಟ್ಸ್ 29 ಹುದ್ದೆಗಳು
ಅರ್ಹತೆ ನಿಯಂತ್ರಣ ಅಧಿಕಾರಿ 9 ಹುದ್ದೆಗಳು
IS ಅಧಿಕಾರಿ 15 ಹುದ್ದೆಗಳು
IS ಭದ್ರತಾ ಅಧಿಕಾರಿ 1 ಹುದ್ದೆ
ಗುಣಮಟ್ಟ ನಿಯಂತ್ರಣ ಅಧಿಕಾರಿ 6 ಹುದ್ದೆಗಳು

ವಿದ್ಯಾರ್ಹತೆ:
ಮೆಕ್ಯಾನಿಕಲ್ ಇಂಜಿನಿಯರ್ ಹುದ್ದೆಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ತೇರ್ಗಡೆ ಹೊಂದಿರಬೇಕು.
ಎಲೆಕ್ಟ್ರಿಕಲ್ ಎಂಜಿನಿಯರ್ ಹುದ್ದೆಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮಾಡಿದವರು ಅರ್ಜಿ ಸಲ್ಲಿಸಬಹುದು.
ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್ ಹುದ್ದೆಗೆ ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್ನಲ್ಲಿ ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು.
ಸಿವಿಲ್ ಇಂಜಿನಿಯರ್ ಹುದ್ದೆಗೆ ಸಿವಿಲ್ ಇಂಜಿನಿಯರಿಂಗ್ ಪದವಿ ಮಾಡಿದವರು ಅರ್ಜಿ ಸಲ್ಲಿಸಬಹುದು.
ಕೆಮಿಕಲ್ ಇಂಜಿನಿಯರಿಂಗ್ ಹುದ್ದೆಗೆ ಕೆಮಿಕಲ್ ಇಂಜಿನಿಯರಿಂಗ್ ಪದವಿ ತೇರ್ಗಡೆ ಹೊಂದಿರಬೇಕು.
ಹಿರಿಯ ಅಧಿಕಾರಿ (CGD) ಕಾರ್ಯಾಚರಣೆಗಳು ಮತ್ತು ನಿರ್ವಹಣೆ ಹುದ್ದೆಗೆ ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಇನ್‌ಸ್ಟ್ರುಮೆಂಟೇಶನ್/ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು.
ಹಿರಿಯ ಅಧಿಕಾರಿ (CGD) ಯೋಜನೆಗಳು ಹುದ್ದೆಗೆ ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಇನ್‌ಸ್ಟ್ರುಮೆಂಟೇಶನ್/ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ ತೇರ್ಗಡೆ ಹೊಂದಿರಬೇಕು.
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕರು, ಹಿರಿಯ ವ್ಯವಸ್ಥಾಪಕರು-ಇಂಧನೇತರ ವ್ಯವಹಾರ ಹುದ್ದೆಗೆ ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಇನ್‌ಸ್ಟ್ರುಮೆಂಟೇಶನ್/ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ, MBA, PGDM ಮಾಡಿದವರು ಅರ್ಜಿ ಸಲ್ಲಿಸಬೇಕು.
ಮ್ಯಾನೇಜರ್-ತಾಂತ್ರಿಕ: ಕೆಮಿಕಲ್/ಪಾಲಿಮರ್/ಪ್ಲಾಸ್ಟಿಕ್ ಹುದ್ದೆಗೆ ಎಂಜಿನಿಯರಿಂಗ್‌ನಲ್ಲಿ ಪದವಿ ತೇರ್ಗಡೆ ಹೊಂದಿದವರು ಅರ್ಜಿ ಸಲ್ಲಿಸಬಹುದು.
ವ್ಯವಸ್ಥಾಪಕ-ಮಾರಾಟ-ಆರ್&ಡಿ ಉತ್ಪನ್ನ ವಾಣಿಜ್ಯೀಕರಣ, ಉಪ ಜನರಲ್ ಮ್ಯಾನೇಜರ್-ಸಿಬಿಡಿ ಹುದ್ದೆಗೆ ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಮಾಡಿದವರು ಅರ್ಜಿ ಸಲ್ಲಿಸಬಹುದು.
ಚಾರ್ಟರ್ಡ್ ಅಕೌಂಟೆಂಟ್ಸ್ ಹುದ್ದೆಗೆ CA, ICAI ತೇರ್ಗಡೆ ಹೊಂದಿರಬೇಕು.
ಅರ್ಹತೆ ನಿಯಂತ್ರಣ ಅಧಿಕಾರಿ ಹುದ್ದೆಗೆ M.Sc ಮಾಡಿದವರು ಅರ್ಜಿ ಸಲ್ಲಿಸಬಹುದು
IS ಅಧಿಕಾರಿ ಹುದ್ದೆಗೆ B.E ಅಥವಾ B.Tech, ಸ್ನಾತಕೋತ್ತರ ಪದವಿ, MCA ಹೊಂದಿರಬೇಕು.
IS ಭದ್ರತಾ ಅಧಿಕಾರಿ ಹುದ್ದೆಗೆ ಪದವಿ, ಸ್ನಾತಕೋತ್ತರ ಪದವಿ, MCA ಪಾಸ್‌ ಮಾಡಿರಬೇಕು.
ಗುಣಮಟ್ಟ ನಿಯಂತ್ರಣ ಅಧಿಕಾರಿ ಹುದ್ದೆಗೆ ಎಂ.ಎಸ್ಸಿ ತೇರ್ಗಡೆ ಹೊಂದಿರಬೇಕು.

ವಯೋಮಿತಿ:
ಮೆಕ್ಯಾನಿಕಲ್ ಇಂಜಿನಿಯರ್ , ಎಲೆಕ್ಟ್ರಿಕಲ್ ಇಂಜಿನಿಯರ್ , ಇನ್ಸ್ಟ್ರುಮೆಂಟೇಶನ್ ಇಂಜಿನಿಯರ್ , ಸಿವಿಲ್ ಎಂಜಿನಿಯರ್ , ಕೆಮಿಕಲ್ ಇಂಜಿನಿಯರ್ ಹುದ್ದೆಗೆ 25 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹಿರಿಯ ಅಧಿಕಾರಿ (CGD) ಕಾರ್ಯಾಚರಣೆಗಳು ಮತ್ತು ನಿರ್ವಹಣೆ, ಹಿರಿಯ ಅಧಿಕಾರಿ (CGD) ಯೋಜನೆಗಳು ಈ ಹುದ್ದೆಗೆ 28 ವರ್ಷ ಗರಿಷ್ಠ ಮಿತಿ
ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕರು 32 , ಹಿರಿಯ ವ್ಯವಸ್ಥಾಪಕರು-ಇಂಧನೇತರ ವ್ಯಾಪಾರ 38 ವರ್ಷ, ಮ್ಯಾನೇಜರ್-ತಾಂತ್ರಿಕ 34 ವರ್ಷ, ನಿರ್ವಾಹಕ-ಮಾರಾಟ-ಆರ್&ಡಿ ಉತ್ಪನ್ನ ವಾಣಿಜ್ಯೀಕರಣ 36 ವರ್ಷ
ಉಪ ಪ್ರಧಾನ ವ್ಯವಸ್ಥಾಪಕರು-ಸಿಬಿಡಿ 45 ವರ್ಷ, ಚಾರ್ಟರ್ಡ್ ಅಕೌಂಟೆಂಟ್ಸ್ 27 ವರ್ಷ, ಅರ್ಹತೆ ನಿಯಂತ್ರಣ ಅಧಿಕಾರಿ 30 ವರ್ಷ, IS ಅಧಿಕಾರಿ 29 ವರ್ಷ, IS ಭದ್ರತಾ ಅಧಿಕಾರಿ 45 ವರ್ಷ, ಗುಣಮಟ್ಟ ನಿಯಂತ್ರಣ ಅಧಿಕಾರಿ 30 ವರ್ಷದೊಳಗಿನವರು ಅರ್ಜಿ ಸಲ್ಲಿಸಬೇಕು.

ವಯೋಮಿತಿ ಸಡಿಲಿಕೆ:
OBC-NC ಅಭ್ಯರ್ಥಿಗಳು 03 ವರ್ಷ, SC/ST ಅಭ್ಯರ್ಥಿಗಳಿಗೆ 05 ವರ್ಷ, PwBD (UR) ಅಭ್ಯರ್ಥಿಗಳಿಗೆ 10 ವರ್ಷ, PwBD (OBCNC) ಅಭ್ಯರ್ಥಿಗಳಿಗೆ 13 ವರ್ಷ, PwBD (SC/ST) ಅಭ್ಯರ್ಥಿಗಳಿಗೆ 15 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ: SC/ST/PwBD ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವಿಲ್ಲ. UR/OBCNC/EWS ಅಭ್ಯರ್ಥಿಗಳಿಗೆ ರೂ.1180/- ಅರ್ಜಿ ಶುಲ್ಕ ನೀಡಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ, ಗುಂಪು ಡಿಸ್ಕಶನ್‌, ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ವೇತನ: ಮೆಕ್ಯಾನಿಕಲ್ ಇಂಜಿನಿಯರ್ , ಎಲೆಕ್ಟ್ರಿಕಲ್ ಇಂಜಿನಿಯರ್ , ಇನ್ಸ್ಟ್ರುಮೆಂಟೇಶನ್ ಇಂಜಿನಿಯರ್ , ಸಿವಿಲ್ ಎಂಜಿನಿಯರ್, ಕೆಮಿಕಲ್ ಇಂಜಿನಿಯರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 50,000 – 1,60,000/- ಪ್ರತಿ ತಿಂಗಳು ವೇತನ ನಿಗದಿಪಡಿಸಲಾಗಿದೆ.
ಹಿರಿಯ ಅಧಿಕಾರಿ (CGD) ಕಾರ್ಯಾಚರಣೆಗಳು ಮತ್ತು ನಿರ್ವಹಣೆ, ಹಿರಿಯ ಅಧಿಕಾರಿ (CGD) ಯೋಜನೆಗಳು, ಹಿರಿಯ ಅಧಿಕಾರಿ/ಸಹಾಯಕ ವ್ಯವಸ್ಥಾಪಕರು ರೂ. 60,000 – 1,80,000/- ವೇತನ ನಿಗದಿಪಡಿಸಲಾಗಿದೆ.
ಹಿರಿಯ ವ್ಯವಸ್ಥಾಪಕರು-ಇಂಧನೇತರ ವ್ಯಾಪಾರ ಹುದ್ದೆಗೆ ಆಯ್ಕೆಯಾದವರಿಗೆ ರೂ. 90,000 – 2,40,000/- ವೇತನವಿರಲಿದೆ.
ಮ್ಯಾನೇಜರ್-ತಾಂತ್ರಿಕ, ನಿರ್ವಾಹಕ-ಮಾರಾಟ-ಆರ್&ಡಿ ಉತ್ಪನ್ನ ವಾಣಿಜ್ಯೀಕರಣ ರೂ.80,000 – 2,20,000/- , ಉಪ ಪ್ರಧಾನ ವ್ಯವಸ್ಥಾಪಕರು-ಸಿಬಿಡಿ ರೂ. 1,20,000 – 2,80,000/-, ಚಾರ್ಟರ್ಡ್ ಅಕೌಂಟೆಂಟ್‌ಗಳು, ಅರ್ಹತೆ ನಿಯಂತ್ರಣ ಅಧಿಕಾರಿ ಹುದ್ದೆಗೆ ರೂ. 50,000 – 1,60,000/- ಮಾಸಿಕ ವೇತನವಿರಲಿದೆ.
ಐಎಸ್ ಅಧಿಕಾರಿ ರೂ. 15,00,000/- ವಾರ್ಷಿಕ, ಐಎಸ್ ಭದ್ರತಾ ಅಧಿಕಾರಿ ರೂ. 36,00,000/- ವಾರ್ಷಿಕ, ಗುಣಮಟ್ಟ ನಿಯಂತ್ರಣ ಅಧಿಕಾರಿ ರೂ. 10,20,000/- ವಾರ್ಷಿಕ ವೇತನ ನಿಗದಿಪಡಿಸಲಾಗಿದೆ.