Home Guards Jobs: ನೂತನ ಸ್ವಯಂ ಸೇವಕ ಗೃಹರಕ್ಷರ ಹುದ್ದೆಗಳು ಖಾಲಿ; ಅರ್ಜಿ ಆಹ್ವಾನ, ಎಸ್‌.ಎಸ್‌.ಎಲ್‌.ಸಿ ಪಾಸಾದವರಿಗೆ ಆದ್ಯತೆ

Advertisements

Uttara kannada District Home Guards Recruitment 2024: ಉತ್ತರಕನ್ನಡ ಜಿಲ್ಲಾ ಗೃಹರಕ್ಷದ ದಳದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕಾರವಾರ, ಚೆಂಡಿಯಾ, ಮಲ್ಲಾಪುರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸಿದ್ದಾಪುರ, ಶಿರಸಿ, ಯಲ್ಲಾಪುರ, ಹಳಿಯಾಳ, ದಾಂಡೇಲಿ, ಜೊಯಿಡಾ ಘಟಕ, ಉಪಘಟಕಗಳಲ್ಲಿ ಗೃಹರಕ್ಷಕ, ಗೃಹರಕ್ಷಕಿಯರ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 202 ಹುದ್ದೆಗಳಿದ್ದು, ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸ ಬಹುದು.

ಪ್ರಮುಖ ದಿನಾಂಕಗಳು;
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 20-02-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-02-2024 ರವರೆಗೆ ಜಿಲ್ಲಾ ಸಮಾದೇಷ್ಟರ ಕಚೇರಿ, ಗೃಹರಕ್ಷಕದಳ, ಸರ್ವೋದಯ ನಗರ ದಿವೇಕರ್‌, ಕಾಮರ್ಸ ಕಾಲೇಜು ಎದುರಿಗೆ, ಕೋಡಿಬಾಗ, ಕಾರವಾರದಲ್ಲಿ ಅರ್ಜಿಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಹತ್ತನೇ ತರಗತಿಯ ಅಂಕಪಟ್ಟಿ ದೃಡೀಕೃತ ಪ್ರತಿ, ಆಧಾರ್‌ ಕಾರ್ಡ್‌ ಪ್ರತಿಯನ್ನು ತೋರಿಸಿ ಅರ್ಜಿ ಪಡೆದುಕೊಳ್ಳಲು ಸೂಚಿಸಲಾಗಿದೆ.

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 19 ವರ್ಷ, ಹಾಗೂ ಗರಿಷ್ಠ 50 ಆಗಿರಬೇಕು.

ಎತ್ತರ ಕನಿಷ್ಠ 163 ಸೆಂ.ಮೀ ಪುರುಷರಿಗೆ, 150 ಸೆಂ.ಮೀ. ಮಹಿಳೆಯರಿಗೆ ಇರಬೇಕು.

ವಿದ್ಯಾರ್ಹತೆ: 10 ನೇ ತರಗತಿ ಉತ್ತೀರ್ಣ ಹೊಂದಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಆದ್ಯತೆ: ಕೌಶಲ್ಯ ತರಬೇತಿ (ಕಂಪ್ಯೂಟ್‌ ಜ್ಞಾನ, ಹೆವಿ ಡ್ರೈವಿಂಗ್‌ ಲೈಸೆನ್ಸ್‌, ಅಡುಗೆ ಭಟ್ಟರು, ಮೆಕಾನಿಕ್‌, ಪೈಂಟರ್‌ ಮತ್ತು ಪ್ಲಂಬರ್)‌, ಎನ್‌.ಸಿ.ಸಿ. ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.

ವೇತನ: ಗೃಹರಕ್ಷಕ ದಳ ಸಂಸ್ಥೆಯು ಸ್ವಯಂ ಸೇವಕ ಸಂಸ್ಥೆಯಾಗಿದ್ದು, ಇದು ಖಾಯಂ ನೌಕರಿಯಾಗುವುದಿಲ್ಲ. ಮತ್ತು ಯಾವುದೇ ರೀತಿಯ ಮಾಸಿಕ ಸಂಬಳ/ವಿಶೇಷ ಭತ್ಯೆಗಳನ್ನು ಈ ಸಂಸ್ಥೆ ನೀಡುವುದಿಲ್ಲ. ಸರಕಾರವು ನಿಗದಿ ಪಡಿಸಿರುವ ಗೌರವ ಧನವನ್ನು ಕರ್ತುವ್ಯ ನಿರ್ವಹಿಸುವ ಅವಧಿಗೆ ಮಾತ್ರ ಪಾವತಿ ಮಾಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಗಳನ್ನು ಪಡೆದುಕೊಂಡು ಅಲ್ಲಿ ಕೇಳಲಾದ ವಿವರಗಳನ್ನು ಭರ್ತಿ ಮಾಡಿ ಪತ್ರಾಂಕಿತ ಅಧಿಕಾರಿಗಳಿಂಂದ ದೃಢೀಕರಿಸಲ್ಪಟ್ಟ ಆಧಾರ್‌ ಕಾರ್ಡ್‌ ಪ್ರತಿ, ಎಸ್‌.ಎಸ್‌.ಎಲ್‌.ಸಿ. ಅಂಕಪಟ್ಟಿಯ ನಕಲು ಪ್ರತಿ ಮತ್ತು ತಾಲೂಕಾ ವೈದ್ಯಾಧಿಕಾರಿಗಳಿಂದ ದೈಹಿಕ ಸಧೃಡತೆ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಸಲ್ಲಿಸಬೇಕು. ಅಪರಾಧಿ ಹಿನ್ನೆಲೆ ಉಳ್ಳವರು ಅರ್ಜಿ ಸಲ್ಲಿಸುವಂತಿಲ್ಲ.

ಅರ್ಜಿ ಸಲ್ಲಿಸಲು 28-02-2024 ರ ಸಂಜೆ 5 ಗಂಟೆ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಜಿಲ್ಲಾ ಗೃಹರಕ್ಷಕ ದಳ ಕಚೇರಿ ಕಾರವಾರ, ಸಂಪರ್ಕ ಸಂಖ್ಯೆ 0832-200137/226361 ನ್ನು ಸಂಪರ್ಕಿಸಲು ಸೂಚಿಸಲಾಗಿದೆ.