ಬಳ್ಳಾರಿ ಜಿಲ್ಲೆಯ ರೂಪನಗುಡಿ, ಸಿರಗುಪ್ಪ, ಕುಡುತನಿ, ತೋರಣಗಲ್ಲು ಮತ್ತು ಬಳ್ಳಾರಿ ಘಟಕದಲ್ಲಿ ಗೃಹರಕ್ಷಕರ ವಾದ್ಯವೃಂದ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಗೃಹರಕ್ಷಕ ವಾದ್ಯವೃಂದ ಸದಸ್ಯರ ಆಯ್ಕೆಗೆ ಸಂಬಂಧಿಸಿದಂತೆ ಕಳೆದ ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಮಾ.16 ರಂದು ಬೆಳಿಗ್ಗೆ 8 ಕ್ಕೆ ಬಳ್ಳಾರಿ ನಗರದ ಡಿ.ಎ.ಆರ್ ಮೈದಾನದಲ್ಲಿ ಸಂದರ್ಶನ ನಡೆಯುತ್ತದೆ ಎಂದು ಜಿಲ್ಲಾ ಗೃಹರಕ್ಷಕ ದಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಧಾರ್ ಕಾರ್ಡ್, ಕುಟುಂಬದ ಪಡಿತರ ಚೀಟಿ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ಡ್ರೈವಿಂಗ್ ಲೈಸೆನ್ಸ್ ಜೊತೆಗೆ ಸಂದರ್ಶನ ಪತ್ರ ತರುವುದು ಕಡ್ಡಾಯವೆಂದು ತಿಳಿಸಿದೆ.
ಜೆರಾಕ್ಸ್ ದಾಖಲಾತಿಗಳನ್ನು ಪರಿಗಣಿಸುವುದಿಲ್ಲ. ಗೃಹರಕ್ಷಕ ಘಟದಲ್ಲಿನ ಸದಸ್ಯತ್ವ ಬಯಸಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ವಾದ್ಯವೃಂದ ಸಲಕರಣೆಗಳನ್ನು ತಾವೇ ತರುವುದರ ಜೊತೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಬರಬೇಕಾಗಿದೆ. ಸರಕಾರದಿಂದ ಯಾವುದೇ ರೀತಿಯ ಭತ್ಯೆ ಪಾವತಿಸುವುದಿಲ್ಲ ಎಂದು ಜಿಲ್ಲಾ ಗೃಹರಕ್ಷಕ ದಳ ತಿಳಿಸಿದೆ.