ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ : ಖಾಲಿ ಇರುವ ಹುದ್ದೆಗೆ ನೇರ ಸಂದರ್ಶನ

Advertisements

ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಹಟ್ಟಿಯಲ್ಲಿರುವ 120 ಹಾಸಿಗೆಗಳ ಆಸ್ಪತ್ರೆಗೆ ಗುತ್ತಿಗೆ ಆಧಾರದ ಮೇಲೆ ಈ ಕೆಳಕಂಡಂತೆ ತಜ್ಞ ವೈದ್ಯರು ಬೇಕಾಗಿದ್ದಾರೆ.

ಅರ್ಜಿ ಆರಂಭಿಕ ದಿನಾಂಕ – 23-05-2021

ಹುದ್ದೆ : ಸ್ತ್ರೀ ರೋಗ ತಜ್ಞರು – 1 ಹುದ್ದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಒಬಿಜಿಯಲ್ಲಿ ಎಂ.ಎಸ್/ ಡಿಎನ್ ಬಿ /ಡಿಪ್ಲೋಮಾ ಮಾಡಿರಬೇಕು.

ಇ.ಎನ್.ಟಿ. ಸರ್ಜನ್ – 1 ಹುದ್ದೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇ.ಎನ್‌ಟಿಯಲ್ಲಿ ಎಂಎಸ್/ಡಿಪ್ಲೋಮಾ ಮಾಡಿರಬೇಕು.

ಜಾಹೀರಾತು ಪ್ರಕಟಗೊಂಡ ದಿನಾಂಕದಿಂದ ಪ್ರತಿದಿನ ಬೆಳಿಗ್ಗೆ ‌9.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ, ಹಟ್ಟಿ – 584115 ನಲ್ಲಿರುವ ‌ಆಡಳಿತ‌ ಕಚೇರಿಯಲ್ಲಿ ನೇರ ಸಂದರ್ಶನ ಕೈಗೊಳ್ಳಲಾಗುವುದು. ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ತಮ್ಮ ಪೂರ್ಣ ‌ವಿವರಗಳನ್ನೊಳಗೊಂಡ ಅರ್ಜಿಯನ್ನು ಮತ್ತು ಶೈಕ್ಷಣಿಕ ‌ವಿದ್ಯಾರ್ಹತೆಯ ದಾಖಲೆ ಪ್ರಮಾಣ, ಅನುಭವ ಪ್ರಮಾಣ ಪತ್ರ, ಜಾತಿ ಇತ್ಯಾದಿಗಳ ಮೂಲ ಮತ್ತು ಪ್ರತಿಗಳೊಂದಿಗೆ ಪಾಸ್ ಪೋರ್ಟ್ ಅಳತೆಯ ಭಾವಚಿತ್ರದ ಜೊತೆಗೆ ಹಾಜರು ಪಡಿಸಬೇಕು. ಜಾಹೀರಾತು ಪ್ರಕಟಗೊಂಡ ದಿನಾಂಕದಿಂದ 06 ತಿಂಗಳವರೆಗೆ ಜಾಹೀರಾತಿಗೆ ಮಾನ್ಯತೆ ಇರಲಿದೆ.

Leave a Comment