HESCOM : ಮೈಕ್ರೋ ಫೀಡರ್ ಹುದ್ದೆ

Advertisements

ಕಾರ್ಯ ಮತ್ತು ಪಾಲನಾ ವೃತ್ತ, ಹೆಸ್ಕಾಂ, ‌ಶಿರಸಿ ವೃತ್ತ ವ್ಯಾಪ್ತಿಯಲ್ಲಿ ಬರುವ ಯಲ್ಲಾಪುರ, ದಾಂಡೇಲಿ ಮತ್ತು ಹಳಿಯಾಳ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ” ಮೈಕ್ರೋ ಫೀಡರ್ ಪ್ರಾಂಚೈಸಿ” ರವರನ್ನು ಹುವಿಸಕಂನಿಯು ಪ್ರೋತ್ಸಾಹ ಧನ ( incentive) ಆಧಾರದ ಮೇಲೆ ಗೊತ್ತು ಮಾಡುವುದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹತೆ : ಮೈಕ್ರೋ ಫೀಡರ್ ಪ್ರಾಂಚೈಸಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸಂಬಂಧಿಸಿದ ಆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸವಾಗಿರಬೇಕು. ವಾಸ ಸ್ಥಳದ ಪ್ರಮಾಣ ಪತ್ರವನ್ನು ಸಂಬಂಧಪಟ ಗ್ರಾಮ ಪಂಚಾಯತಿಯ ಅಧಿಕೃತ ಅಧಿಕಾರಿಯಿಂದ ಪಡೆದಿರಬೇಕು. ಒಂದು ವೇಳೆ ಯೋಗ್ಯ ಅಭ್ಯರ್ಥಿಯು ಅದೇ ಗ್ರಾಮ ಪಂಚಾಯತಿಯಲ್ಲಿ ದೊರಕದಿದ್ದರೆ ಆ ಗ್ರಾಮ ಪಂಚಾಯತಿಗೆ‌, ಪಂಚಾಯತಿಯ ಅಧ್ಯಕ್ಷರ ಅನುಮೋದನೆಯ ಮೇರೆಗೆ ಬೇರೊಂದು ಪಂಚಾಯತಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು.

ಅಭ್ಯರ್ಥಿಯ ಕನಿಷ್ಠ ವಿದ್ಯಾರ್ಹತೆ : ಪಿಯುಸಿ, ದ್ವಿತೀಯ ವರ್ಷ ಪಾಸಾಗಿರಬೇಕು. ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ದ್ವಿತೀಯ ಪಿಯುಸಿಯಲ್ಲಿ ಅಯ ತತ್ಸಮಾನ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು.

ವಯೋಮಿತಿ : ಅಭ್ಯರ್ಥಿಯು ದಿನಾಯ 16-08-2021 ಕ್ಕೆ 18 ರಿಂದ 40 ವರ್ಷ ವಯೋಮಿತಿಯಲ್ಲಿರಬೇಕು.
ವೇತನ : ಮೈಕ್ರೋ ಫೀಡರ್ ಪ್ರಾಂಚೈಸಿ ಯು ಪ್ರತಿ ತಿಂಗಳಿಗೆ ಗ್ರಾಹಕರ ‌ಮಾಪಕಗಳನ್ನು ಓದಿ ಶೇಕಡಾ 100 ರಷ್ಟು ಬಿಲ್ ವಿತರಣೆ ಮಾಡಿ ಹುವಿಸಕಂನಿಯು ನಿಗದಿಪಡಿಸಿರುವ ಮಾಸಿಕ ಮೂಲ ಗುರಿಯನ್ನು ಸಾಧಿಸಿದ್ದಲ್ಲಿ ರೂ.12,000/- ವನ್ನು ಕನಿಷ್ಠ ಖಚಿತ ಪ್ರೋತ್ಸಾಹ ಧನವಾಗಿ ನೀಡಲಾಗುವುದು.

ಭರ್ತಿಯಾದ ಅರ್ಜಿಗಳನ್ನು ನೇರವಾಗಿ ಈ ಕೆಳಯ ವಿಳಾಸಕ್ಕೆ ನೊಂದಾಯಿತ ಅಂಚೆ ಮೂಲಕ / ಸ್ಪೀಡ್ ಮೂಲಕ/ ಮುದ್ದಾಂ ಮೂಲಕ ಕಳುಹಿಸಬೇಕು.

ಅರ್ಜಿಯನ್ನು ಸ್ವೀಕರಿಸಲು ಕೊನೆಯ ದಿನಾಂಕ : 16-08-2021 ರ ಸಂಜೆ 4 ಗಂಟೆಯವರೆಗೆ.

ಕೊನೆಯ ದಿನಾಂಕದ ನಂತರ ತಲುಪಿದ ಹಾಗೂ ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅಂಚೆ ವಿಳಾಸಕ್ಕೆ ಈ ಕಚೇರಿ ಜವಾಬ್ದಾರರಾಗಿರುವುದಿಲ್ಲ.

ಅರ್ಹ ಅಭ್ಯರ್ಥಿಗಳು ‌ಮೂಲ ದಾಖಲಾತಿ ಪರಿಶೀಲನೆಗೆ ದಿನಾಂಕ 19-08-2021 ರ ಬೆಳಿಗ್ಗೆ 10 ಗಂಟೆಗೆ ಈ ಕೆಳಗಿನ ವಿಳಾಸಕ್ಕೆ ಹಾಜರಾಗಲು ತಿಳಿಸಲಾಗುವುದು.

ಸ್ಥಳ : ಅಧೀಕ್ಷಕ ಇಂಜಿನಿಯರ್ ( ವಿ) ಕಾರ್ಯ ಮತ್ತು‌ ಪಾಲನಾ ವೃತ್ತ ಕಚೇರಿ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿ., ಬಿಲ್ಡಿಂಗ್ ಸಂ.# 258/2, ಅಯ್ಯಪ್ಪ ನಗರ, ಹುಬ್ಬಳ್ಳಿ ರಸ್ತೆ, ತಾ||ಶಿರಸಿ- 581402 ( ಉತ್ತರ ಕನ್ನಡ)

ಅರ್ಜಿ ನಮೂನೆ‌ ಹಾಗೂ ಮಾಹಿತಿ ದೊರೆಯುವ ಸ್ಥಳ :
www.hescom.karnataka.gov.in ವೆಬ್ಸೈಟ್ ಅಥವಾ ಈ ಕಚೇರಿ/ ಕಾರ್ಯ ನಿರ್ವಾಹಕ ಇಂಜಿನಿಯರ್( ವಿ), ಕಾ ಮತ್ತು ಪಾ ವಿಭಾಗ, ಹೆಸ್ಕಾಂ, ಶಿರಸಿ ಹಾಗೂ ದಾಂಡೇಲಿ /ಆಯಾ ತಾಲ್ಲೂಕು ವ್ಯಾಪ್ತಿಯ ಕಾರ್ಯನಿರ್ವಾಹಕ ಇಂಜಿನಿಯರ್ (ವಿ)

ಅರ್ಜಿ ಸಲ್ಲಿಸುವ ವಿಳಾಸ: ನೋಂದಣಿ ಅಂಚೆ/ ಸ್ಪೀಡ್ ಪೋಸ್ಟ್/ ಮುದ್ದಾಂ ಮೂಲಕ ಅರ್ಜಿ ಸಲ್ಲಿಸುವ ವಿಳಾಸ: ಅಧೀಕ್ಷಕ ಇಂಜಿನಿಯರ್ ( ವಿ),ಕಾರ್ಯ ಮತ್ತು ಪಾಲನಾ ವೃತ್ತ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿ.,ಬಿಲ್ಡಿಂಗ್ ಸಂ.# 258/2, ಅಯ್ಯಪ್ಪ ನಗರ, ಹುಬ್ಬಳ್ಳಿ ರಸ್ತೆ, ತಾ||ಶಿರಸಿ- 581402 ( ಉತ್ತರ ಕನ್ನಡ)

Leave a Comment