ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ವಿಜಯಪುರ ಹೆಚ್ಚುವರಿ ಮಾನವ ಸಂಪನ್ಮೂಲಗಳನ್ನು 06 ತಿಂಗಳ ಮಟ್ಟಿಗೆ ಕೆಳಕಾಣಿಸಿದ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ರೋಸ್ಟರ್ ಕಂ ಮೆರಿಟ್ ನ್ನು ಅನುಸರಿಸು ಷರತ್ತುಗೊಳಪಟ್ಟು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ತಜ್ಞ ವೈದ್ಯರು – ಒಟ್ಟು 06 ಹುದ್ದೆಗಳಿವೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನರಲ್ ಮೆಡಿಸಿನ್ (ಎಂಡಿ/ಡಿಪ್ಲೋಮಾ) ಮತ್ತು ಅನಸ್ತೇಶಿಯ (ಎಂಡಿ/ಡಿಪ್ಲೋಮಾ) ವಿದ್ಯಾರ್ಹತೆಯನ್ನು ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 1,20,000/- ಮಾಸಿಕ ವೇತನ ಇರುತ್ತದೆ. ಅಭ್ಯರ್ಥಿಗಳು ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ.
ವೈದ್ಯಾಧಿಕಾರಿಗಳು : ಒಟ್ಟು 12+12=24 ಹುದ್ದೆಗಳಿದ್ದು ಎಂಬಿಬಿಎಸ್ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು. ಮಾಸಿಕ ವೇತನ ರೂ.60,000/- ನಿಗದಿಪಡಿಸಲಾಗಿದೆ. 12 ಜಿಲ್ಲಾಸ್ಪತ್ರೆಗೆ ಹಾಗೂ 12 ತಾ.ಆಸ್ಪತ್ರೆಗಳಿಗೆ ನೇಮಕಮಾಡಿಕೊಳ್ಳಲಾಗುತ್ತದೆ.
ಸ್ಟಾಫ್ ನರ್ಸ್ : 18+12=30 ಹುದ್ದೆಗಳಿದ್ದು ಈ ಹುದ್ದೆಗಳಿಗೆ ಅಭ್ಯರ್ಥಿಗಳು ಡಿಪ್ಲೋಮಾ /ಬಿಎಸ್ಸಿ ನರ್ಸಿಂಗ್ ಮಾಡಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.25,000/- ವೇತನ ಇರುತ್ತದೆ. 18 ಜಿಲ್ಲಾಸ್ಪತ್ರೆಗೆ ಹಾಗೂ 12 ತಾ.ಆಸ್ಪತ್ರೆಗೆ ನೇಮಕಮಾಡಿಕೊಳ್ಳಲಾಗುವುದು.
ಬಯೋಮೆಡಿಕಲ್ ಇಂಜಿನಿಯರ್ : ಇಲ್ಲಿ ಒಂದು ಉದ್ಯೋಗವಿದ್ದು ಅಭ್ಯರ್ಥಿಗಳು ಬಯೋ ಮೆಡಿಕಲ್ ಇಂಜಿನಿಯರ್ (ಬಿ.ಇ) ವಿದ್ಯಾರ್ಹತೆಯನ್ನು ಹೊಂದಿರಬೇಕು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 30,000/- ವೇತನವಿರುತ್ತದೆ. ಅಭ್ಯರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ಆಯ್ಕೆ ಮಾಡಲಾಗುತ್ತದೆ.
ಮೆಂಟೆನೆನ್ಸ್ ಇಂಜಿನಿಯರ್ : ಇಲ್ಲಿ ಒಂದು ಉದ್ಯೋಗವಿದ್ದು, ಅಭ್ಯರ್ಥಿಗಳು ಬಯೋಮೆಡಿಕಲ್ ಇಂಜಿನಿಯರ್ (ಬಿ.ಇ) ಅಥವಾ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳಿಗೆ ಮಾಸಿಕ ರೂ.30,000/- ವೇತನವಿರುತ್ತದೆ. ಜಿಲ್ಲಾ ಆಸ್ಪತ್ರೆಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಜಿಲ್ಲಾಸ್ಪತ್ರೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಐಸಿಯು ಟೆಕ್ನಿಶಿಯನ್ : 01 ಹುದ್ದೆಗಳಿದ್ದು, ಐಸಿಯು ಟೆಕ್ನಿಶಿಯನ್ ನಲ್ಲಿ ಒಂದು ಹುದ್ದೆಯಿದ್ದು ಬಯೋಮೆಡಿಕಲ್ ಇಂಜಿನಿಯರ್ (ಡಿಪ್ಲೋಮಾ) ಅಥವಾ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳಿಗೆ ಮಾಸಿಕ ರೂ.30,000/- ವೇತನವಿರುತ್ತದೆ.
ಗ್ರೂಪ್ ಡಿ :06+ 12= 18 ಒಟ್ಟು ಹುದ್ದೆಗಳಿದ್ದು ಎಸ್ ಎಸ್ ಎಲ್ ಸಿ ತೇರ್ಗಡೆ ಹೊಂದಿರಬೇಕು. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 15,000/- ವೇತನವಿರುತ್ತದೆ. 06 ಜಿಲ್ಲಾಸ್ಪತ್ರೆಗೆ, 12 ತಾ.ಆಸ್ಪತ್ರೆಗೆ ಅಭ್ಯರ್ಥಿಗಳನ್ನು ನಿಯುಕ್ತಿ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :30-04-2021